Breaking News

ಫಲ್ಹಾ ವತಿಯಿಂದ ೧ ಲಕ್ಷ ವಿದ್ಯಾರ್ಥಿಧನ ಸಹಾಯ ವಿತರಣೆ

Advt_Headding_Middle
Advt_Headding_Middle

ಜಾಗೃತ ಸಮಾಜ ಶಿಕ್ಷಣದಿಂದ ಮಾತ್ರ ಸಾಧ್ಯ : ಡಾ| ಉಮ್ಮರ್
ಜಾಗೃತ ಸಮಾಜ ನಿರ್ಮಾಣವಾದರೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯ. ಜಾಗೃತ ಸಮಾಜ ನಿರ್ಮಾಣ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಬೆಂಗಳೂರು ಫಾರ್ಮೆಡ್ ಗ್ರೂಪ್ ಉಪಾಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ ಹೇಳಿದರು. ಜಮೀಯತುಲ್ ಫಲ್ಹಾ ಸುಳ್ಯ ತಾಲೂಕು ಘಟಕದ ವತಿಯಿಂದ ಕೇಂದ್ರೀಯ ಸಮಿತಿಯ ಸಹಯೋಗದೊಂದಿಗೆ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಧನಸಹಾಯ ವಿತರಿಸಿ ಅವರು ಮಾತನಾಡಿದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಚ್.ಎ. ಅಬ್ಬಾಸ್ ಸೆಂಟ್ಯಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯ ಕೆ.ಎಂ. ಮುಸ್ತಫ, ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್, ಜಿಲ್ಲಾ ಜಮೀಯತುಲ್ ಫಲ್ಹಾ ಜತೆ ಕಾರ್ಯದರ್ಶಿಝೈನುದ್ದೀನ್ ಶೇಖ್, ಪುತ್ತೂರು ಘಟಕದ ಅಧ್ಯಕ್ಷ ಫಝಲ್ ರಹೀಂ ಭಾಗವಹಿಸಿದ್ದರು. ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕ್ಕಾರ‍್ಸ್, ಕಾರ್ಯದರ್ಶಿ ಮೂಸ ಪೈಂಬಚ್ಚಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 


ಸರಕಾರಿ ಸೌಲಭ್ಯ ಮತ್ತು ವಿದ್ಯಾರ್ಥಿ ವೇತನದ ಮಾಹಿತಿಯನ್ನು ಸುಳ್ಯ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ಮೇಲ್ವಿಚಾರಕ ಕಮಾಲುದ್ದೀನ್ ನೀಡಿದರು. ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣ ಮಾಡಿದ ಕೋಶಾಧಿಕಾರಿ ಹಾಜಿ ಬೀರಾ ಮೊದೀನ್ ಮಾತನಾಡಿ ಜಮೀಯತುಲ್ ಫಲ್ಹಾ ಕಳೆದ ೩೦ ವರ್ಷಗಳಿಂದ ನಿರಂತರವಾಗಿ ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿವೇತನ, ವಿದ್ಯಾರ್ಥಿ ಧನಸಹಾಯ, ‘ಸ್ಟೂಡೆಂಟ್ ಸಪೀರ್ಟ್ ಸ್ಕೀಮ್’ ಮೊದಲಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದರು. ನಿರ್ದೇಶಕ ಕೆ.ಎಂ. ಮುಹಿಯ್ಯುದ್ದೀನ್ ವಂದಿಸಿದರು ರಜಾಕ್ ಎಣ್ಮೂರು ನಿರೂಪಿಸಿದರು. ಹಸೈನಾರ್ ವಳಲಂಬೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.