Breaking News

ಕಳಂಜದಲ್ಲಿ 27 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ, ಪುರುಷರ ಕಬಡ್ಡಿ ಪಂದ್ಯಾಟ

Advt_Headding_Middle
Advt_Headding_Middle

ಕಲಾ ವಿಕಾಸ ಕಳಂಜ ಇದರ ವತಿಯಿಂದ 27 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ, ಪುರುಷರ ಕಬಡ್ಡಿ ಪಂದ್ಯಾಟ ಸೆ.2 ರಂದು ವಿಷ್ಣುನಗರ ಕಳಂಜ ವಠಾರದಲ್ಲಿ ನಡೆಯಿತು.

ಕೃಷಿಕ ಕಿಟ್ಟಣ್ಣ ಗೌಡ ಕಳಂಜ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ವಿಷ್ಣು ಮೂರ್ತಿ ಸೇವಾ ಸಮಿತಿ ಅಧ್ಯಕ್ಷ ರಘನಾಥ ಶೆಟ್ಟಿ ಕಳಂಜ, ವಿಷ್ಣುಮೂರ್ತಿ ದೈವದ ಪಾತ್ರಿ ಕೃಷ್ಣ ಮಣಿಯಾಣಿ ಕಲಾ ವಿಕಾಸ ಕಳಂಜದ ಇದರ ಅಧ್ಯಕ್ಷ ರಾಮಚಂದ್ರ ಬೇರಿಕೆ, ಕಾರ್ಯದರ್ಶಿ ನಾರಾಯಣ ಕಳಂಜ, ಉಪಾಧ್ಯಕ್ಷ ಶೇಷಪ್ಪ ಕುಕ್ಕುತ್ತಡಿ, ಖಜಾಂಜಿ ದಯಾನಂದ ಕಳಂಜ, ಸತೀಶ್ ಕಳಂಜ, ಗಗನ್ ನಾಲ್ಗುತ್ತು, ಹರೀಶ್ ಕಳಂಜ, ಗಿರಿಧರ ಕಳಂಜ, ವೇಣು ಉಪಸ್ಥಿತರಿದ್ದರು. ಜಗದೀಶ ಮುಂಡುಗಾರು ಕಾರ್ಯಕ್ರಮ ನಿರೂಪಿಸಿದರು. ನಂತರ ಸಾರ್ವಜನಿಕ ಮಹಿಳೆ, ಪುರುಷ, ಅಂಗನವಾಡಿ, ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.