Breaking News

ಬೆಳ್ಳಾರೆ ಸ್ನೆಹಿತರ ಕಲಾ ಸಂಘದಿಂದ ಪಿ.ಎನ್. ಭಟ್ ರಿಗೆ ಗುರುರತ್ನ ಪ್ರಶಸ್ತಿ ಪ್ರಧಾನ

Advt_Headding_Middle
Advt_Headding_Middle

ಸ್ನೇಹಿತರ ಕಲಾ ಸಂಘ ಬೆಳ್ಳಾರೆ ಇದರ ಆಶ್ರಯದಲ್ಲಿ ನಡೆದ ೨೦ ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಕಾರ್ಯಕ್ರಮ ಸೆ. ೨ರಂದು ನಡೆಯಿತು.


ಮಧ್ಯಾಹ್ನ ನಡೆದ ಸಭೆ ಮತ್ತು ಸನ್ಮಾನ ಕಾಯರ್ಯಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಪುರಂದರ ನಾರಾಯಣ ಭಟ್‌ರವರಿಗೆ ಗುರುರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಿವೃತ್ತ ಯೋಧ ಮೋಹನ್ ದಾಸ್ ಕುಳ್ಳಂಪಾಡಿ, ರಾಷ್ಟ್ರೀಯ ಹಿರಿಯ ಕ್ರೀಡಾಪಟು ಶ್ರೀಮತಿ ಸುನಂದ ರೈ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಶಿಕ್ಷಕಿ ಶ್ರೀಮತಿ ಸುಲೋಚನಾ ಪಡ್ಪುರವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಆನಂದ ಗೌಡ ಪಡ್ಪು ವಹಿಸಿದ್ದರು. ಅತಿಥಿಗಳಾಗಿ ಬೆಳ್ಳಾರೆ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಶಕುಂತಳಾ ನಾಗರಾಜ್, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ, ಸುಳ್ಯ ಯುವ ಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಮೆಸ್ಕಾಂ ಅರಂತೋಡು ವಿಭಾಗದ ಜೂನಿಯರ್ ಇಂಜಿನಿಯರ್ ಪ್ರಸಾದ್ ಕತ್ಲಡ್ಕ, ಬೆಳ್ಳಾರೆಯ ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್ ಮತ್ತು ಟ್ರಾನ್ಸ್ ಫೋರ್ಟ್ ನ ಮಾಲಕ ಪದ್ಮನಾಭ ಬೀಡು, ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಬೆಳ್ಳಾರೆ ಇದರ ಅಧ್ಯಕ್ಷ ಅಮೃತ್ ಕುಮಾರ್ ಕಿಲಂಗೋಡಿ, ಬೆಳ್ಳಾರೆ ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಆದಿತ್ಯ ಮೊದಲಾದವರು ಭಾಗವಹಿಸಿದ್ದರು. ಯುವಜನ ಸಂಯುಕ್ತ ಮಂಡಳಿ ಪೂರ್ವಾಧ್ಯಕ್ಷ ಚಂದ್ರಶೇಖರ್ ಪನ್ನೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಗುರುರತ್ನ ಪ್ರಶಸ್ತಿಯನ್ನು ಸಮಿತಿಯ ನಿಕಟಪೂರ್ವಾಧ್ಯಕ್ಷ ಚಂದ್ರಹಾಸ ಮಣಿಯಾಣಿ ವಾದಿಸಿದರು.
ನಿವೃತ್ತ ಯೋಧ ಮೋಹನ್ ದಾಸ್ ಕುಳ್ಳಂಪಾಡಿಯವರ ಸನ್ಮಾನ ಪತ್ರವನ್ನು ಚೇತನ್ ಪಡ್ಪು, ಹಿರಿಯ ಕ್ರೀಡಾಪಟು ಸುನಂದ ರೈಯವರ ಸನ್ಮಾನ ಪತ್ರವನ್ನು ಶ್ರೀನಿವಾಸ ಕುರುಂಬುಡೇಲು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಸುಲೋಚನ ಪಡ್ಪುರವರ ಸನ್ಮಾನ ಪತ್ರವನ್ನು ಸಮಿತಿ ಕೋಶಾಧಿಕಾರಿ ಕೊರಗಪ್ಪ ನಾಯ್ಕ ಕುರುಂಬುಡೇಲು ವಾದಿಸಿದರು. ಸಮಿತಿ ಕಾರ್ಯದರ್ಶಿ ಸಂಜಯ್ ನೆಟ್ಟಾರು ವಂದಿಸಿ ರೋಟರಿ ಆಂಗ್ಲಮಾದ್ಯಮ ಶಾಲ ಮುಖ್ಯೋಪಾಧ್ಯಾಯ ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆಯಿಂದ ಸಂಜೆ ತನಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.