ಜಾಲ್ಸೂರು: 33 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ

Advt_Headding_Middle
Advt_Headding_Middle

ಜಾಲ್ಸೂರಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ 33 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಜಾಲ್ಸೂರಿನ ಭಾರತ್ ಮೈದಾನದಲ್ಲಿ ಆಚರಿಸಲಾಯಿತು.


ಸಾ.ಶ್ರೀ. ಗ.ಸಮಿತಿಯ ಗೌರವ ಸಲಹೆಗಾರರಾದ ಸತೀಶ್ ಕೆಮ್ಮನಬಳ್ಳಿ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಪುರುಷರಿಗೆ ಕಬಡ್ಡಿ, ಹಗ್ಗಜಗ್ಗಾಟ, ಮಡಿಕೆ ಒಡೆಯುವುದು, ಗುಂಡೆಸೆತ, ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ ನಡೆಯಿತು. ಮಹಿಳೆಯರಿಗೆ ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ, ಗೋಣಿಚೀಲ ಓಟ, ಗುಂಡೆಸೆತ, ಸಂಗೀತ ಕುರ್ಚಿ ಸ್ಪರ್ಧೆ ಜರುಗಿತು. ಅಂಗನವಾಡಿ ಪುಟಾಣಿಗಳಿಗೆ ಕಾಳು ಹೆಕ್ಕುವುದು, ಕಪ್ಪೆಜಿಗಿತ, ಒಂದರಿಂದ ನಾಲ್ಕನೇ ತರಗತಿ ಮಕ್ಕಳಿಗೆ ಬಕೆಟ್ ಗೆ ಬಾಲ್ ಹಾಕುವುದು, ಕಪ್ಪೆಜಿಗಿತ ನಡೆಯಿತು . ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಕಬಡ್ಡಿ ನಡೆಯಿತು. ಹುಡುಗಿಯರಿಗೆ ಸಂಗೀತ ಕುರ್ಚಿ ನಡೆಯಿತು. ವಿಜೇತರಿಗೆ ಬಹುಮಾನದ ಪ್ರಾಯೋಜಕರಾದ ಶ್ರೀಮತಿ ಜಲಜಾಕ್ಷಿ ರಾಮಚಂದ್ರ ಬೇರ್ಪಡ್ಕ ಹಾಗೂ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಬೇರ್ಪಡ್ಕ ಬಹುಮಾನ ವಿತರಿಸಿದರು. ರಾತ್ರಿ ಶ್ರೀ ಗುರುರಾಘವೇಂದ್ರ ಭಜನಾ ಮಂದಿರದಲ್ಲಿ ಭಜನೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.