Breaking News

ಮುಕ್ಕೂರು ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

Advt_Headding_Middle
Advt_Headding_Middle

 

ಮುಕ್ಕೂರು ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸೆ. ೨ರಂದು ಮುಕ್ಕೂರು ಶಾಲಾ ವಠಾರದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಯಿತು.


ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ಸ್ಟ್ರಾ ದಲ್ಲಿ ಥರ್ಮಕೋಲ್ ಬಾಲ್ ಹೆಕ್ಕುವುದು, ಪ್ಲಾಸ್ಟಿಕ್ ಬಾಲ್ ನಲ್ಲಿ ಬ್ಯಾಲೆನ್ಸ್ ಆಟ, 100 ಮೀ. ಓಟ, ಸಿ.ಡಿ ಮತ್ತು ಬಾಲ್ ಗೇಮ್, ಆಕೃತಿಗಳನ್ನು ಜೋಡಿಸುವುದು, ಪ್ರಬಂಧ ಸ್ಪರ್ಧೆ, ಟ್ರಿಕ್ಸ್ ಗೇಮ್ – ಕಡ್ಡಿಗಳಲ್ಲಿ ಹೇಳಿದ ಆಕೃತಿ ಮಾಡುವುದು, ಭಾಷಣ, ಪ್ರಬಂಧ ಸ್ಪರ್ಧೆ ನಡೆಯಿತು. ಹಲವು ವಿದ್ಯಾರ್ಥಿಗಳು ಪಾಲ್ಗೊಂಡರು.


ಈ ಸಂದರ್ಭದಲ್ಲಿ ಮುಕ್ಕೂರು ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ, ಕಾರ್ಯದರ್ಶಿ ರಮೇಶ್ ಕಾನಾವು, ಮಾಜಿ ಅಧ್ಯಕ್ಷರಾದ ಪ್ರಸಾದ್ ಎನ್ ಕುಂಡಡ್ಕ, ರಾಮಚಂದ್ರ ಚೆನ್ನಾವರ, ನೇಸರ ಯುವಕ ಮಂಡಳ ಗೌರವಧ್ಯಕ್ಷ ಪೂವಪ್ಪ ನಾಯ್ಕ ಕುಂಡಡ್ಕ, ಸದಸ್ಯರಾದ ವೆಂಕಟರಮಣ, ರವಿ ಕುಂಡಡ್ಕ, ಸ್ಥಳೀಯರಾದ ಕಿರಣ್ ಚಾಮುಂಡಿಮೂಲೆ, ಕುಸುಮಾಧರ, ಹೊನ್ನಪ್ಪ ಗೌಡ ಕಾನಾವು ಜಾಲು ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಶಶಿಕುಮಾರ್ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.