ಸುಬ್ರಹ್ಮಣ್ಯ-ಕಡಮಕಲ್-ಗಾಳಿಬೀಡು-ಮಡಿಕೇರಿ ರಸ್ತೆ ಸಂಚಾರ ಮುಕ್ತಗೊಳಿಸಲು ಆಗ್ರಹ

Advt_Headding_Middle
Advt_Headding_Middle

‘`ಕಡಮಕಲ್-ಗಾಳಿಬೀಡು-ಮಡಿಕೇರಿ ರಸ್ತೆಯನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಸರಕಾರ ಅನುಮತಿ ನೀಡಬೇಕು“ ಎಂದು ಹರಿಹರ ಗ್ರಾ.ಪಂ.ಅಧ್ಯಕ್ಷ ಹಿಮ್ಮತ್ ಕೆ.ಸಿ., ತಾ.ಪಂ.ಸದಸ್ಯ ಉದಯ ಕೊಪ್ಪಡ್ಕ, ದೇವಚಳ್ಳ ಗ್ರಾ.ಪಂ. ಸದಸ್ಯ ಶೈಲೇಶ್ ಅಂಬೆಕಲ್ಲು ಮತ್ತಿತರರು ಆಗ್ರಹಿಸಿದ್ದಾರೆ.
ಸೆ.೩ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಠಿಯಿಂದ ಕೊಡಗು ಸಂಪರ್ಕಕ್ಕೆ ಈ ಹಿಂದೆ ಇದ್ದ ಎಲ್ಲ ರಸ್ತೆಗಳು ಹಾಳಾಗಿದೆ. ಈಗ ಕೊಡಗನ್ನು ಸಂಪರ್ಕಿಸುವ ರಸ್ತೆ ಇಲ್ಲದಾಗಿದೆ. ಇದರಿಂದ ಪ್ರಸಿದ್ಧ ಕ್ಷೇತ್ರವಾಗಿರುವ ಸುಬ್ರಹ್ಮಣ್ಯಕ್ಕೂ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ‘`ಕಡಮಕಲ್-ಗಾಳಿಬೀಡು-ಮಡಿಕೇರಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸಲು ಸರಕಾರ ಅನುಮತಿ ನೀಡಬೇಕು’` ಎಂದು ಅವರು ಆಗ್ರಹಿಸಿದರು.
“ಈ ರಸ್ತೆ ಈ ಗಾಗಲೇ ಅಸ್ತಿತ್ವದಲ್ಲಿ ಇದೆ. ಮಡಿಕೇರಿಯಿಂದ ಒಳಚ್ಚಿಲ್ -ಚಪ್ಪೆ ಎಂಬಲ್ಲಿ ತನಕ ಡಾಮರೀಕರಣವೂ ಆಗಿದೆ. ಕಡಮಕಲ್-ಚಪ್ಪೆ ಮಧ್ಯೆ ಸುಮಾರು ೩-೫ ಕೀ.ಮೀ. ಮಾತ್ರ ಮಣ್ಣು ರಸ್ತೆ ಇದೆ. ಈ ರಸ್ತೆ ಅನುಮತಿ ನೀಡಿದರೆ ಸುಬ್ರಹ್ಮಣ್ಯಕ್ಕೆ ಬಹಳ ಹತ್ತಿರವಾಗುತ್ತದೆ. ಮಡಿಕೇರಿ ಸಂಪರ್ಕಕ್ಕೂ ಅನುಕೂಲವಾಗುತ್ತದೆ. ಆದರೆ ಅಲ್ಲಿ ಅರಣ್ಯ ಇಲಾಖೆಯ ಸಮಸ್ಯೆ ಇದೆ. ಅದನ್ನು ನಿವಾರಿಸುವ ಕೆಲಸ ಆಗಬೇಕು’` ಎಂದು ಅವರು ವಿವರಣೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಚಂದ್ರಾಕೋಲ್ಚಾರ್, ನಿವೃತ್ತ ಅರಣ್ಯಾಧಿಕಾರಿ ತಿಮ್ಮಪ್ಪ ಗೌಡ, ಪ್ರೇಮ್ ಚಂದ್ರ ಬೆಳ್ಳಾರೆ, ಜಯಂತ ಮಡಪ್ಪಾಡಿ, ರಮಾನಾಥ ಅಮ್ಮ ಭಗವಾನ್, ರಾಕೇಶ್, ಗಂಗಾಧರ, ಮಹೇಶ್ ಮತ್ತಿತರರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.