ಕಲ್ಮಡ್ಕದ ಮಕ್ಕಳಲ್ಲಿ ವಿಚಿತ್ರ ಜ್ವರ: ಸ್ಥಳೀಯರಲ್ಲಿ ಆತಂಕ

Advt_Headding_Middle
Advt_Headding_Middle
Advt_Headding_Middle

ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಮಕ್ಕಳಲ್ಲಿ ಕಾಣಿಸಿಕೊಂಡಿರುವ ವಿಚಿತ್ರ ಜ್ವರ ಆತಂಕ ಮೂಡಿಸಿದೆ. ಪರಿಸರದ ಎಳೆಯ ವಯಸ್ಸಿನ ಕೆಲವು ಮಕ್ಕಳು ಜ್ವರಕ್ಕೆ ತುತ್ತಾಗಿದ್ದು, ಇದು ವೇಗವಾಗಿ ಹರಡುತ್ತಿದೆ. ಜ್ವರದ ಲಕ್ಷಣಗಳು ಜಾನುವಾರುಗಳಿಗೆ ತಗಲುವ ಕಾಲುಬಾಯಿ ರೋಗದಂತಿವೆ. ಗೊರಸು ಕಾಲುಗಳುಳ್ಳ ಹಸು, ಕುರಿ, ಆಡು, ಹಂದಿ ಇತ್ಯಾದಿಗಳಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ಇದು ಮನುಷ್ಯರಲ್ಲಿ ಉಂಟಾದ ಉದಾಹರಣೆಗಳಿಲ್ಲ. ಈಗ ಅದನ್ನೇ ಹೋಲುವ ಜ್ವರ ಅಚ್ಚರಿಯ ಜತೆಗೆ ಭಯ ಹುಟ್ಟಿಸಿದೆ. ಆದರೆ ಸರಕಾರಿ ವೈದ್ಯಾಧಿಕಾರಿಗಳು ಇದನ್ನು ಅಲ್ಲಗಳೆದಿದ್ದಾರೆ. ಕಲ್ಮಡ್ಕ ಕಾಚಿಲ, ಬೊಮ್ಮೆಟ್ಟಿ, ಮಾಳಪ್ಪಮಕ್ಕಿ ಪರಿಸರದ ೧೧ ವರ್ಷದ ಒಳಗಿನ ಆರು ಮಕ್ಕಳಲ್ಲಿ ಈ ಜ್ವರ ಪತ್ತೆಯಾಗಿದೆ. ಇನ್ನೂ
ಹಲವೆಡೆ ಮಕ್ಕಳು ಈ ಜ್ವರಪೀಡಿತರಾಗಿದ್ದು, ಹೆತ್ತವರು ಸ್ಥಳೀಯ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಕೆಲವರು ಗಿಡಮೂಲಿಕೆ ಚಿಕಿತ್ಸೆಯ ಮೊರೆ ಹೋಗಿದ್ದಾರೆ.

ರೋಗಲಕ್ಷಣ: ಮಕ್ಕಳ ಶರೀರದಲ್ಲಿ ತಾಪ ಹೆಚ್ಚಿ ಜ್ವರ ಕಂಡುಬರುತ್ತದೆ. ಅನಂತರ ಪಾದ, ಕಾಲು ಮತ್ತು ಬಾಯಿಯಲ್ಲಿ ನೀರು ತುಂಬಿದ ಬೊಬ್ಬೆಗಳು ಕಾಣಿಸಿಕೊಳ್ಳುತ್ತವೆ. ಪಾದಗಳ ಬೆರಳುಗಳ ನಡುವಿನ ಗುಳ್ಳೆಗಳು ಒಡೆದು, ಗಾಯಗಳಾಗಿ ಕೀವು ಉಂಟಾಗುತ್ತದೆ. ಬಾಯಿಯ ಗುಳ್ಳೆ ಗಳಿಂದ ಮಕ್ಕಳಿಗೆ ಆಹಾರ ಸೇವನೆ ಕಷ್ಟವಾಗುತ್ತದೆ. ಆದರೆ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡಿ ರುವುದು ಆರೋಗ್ಯ ಇಲಾಖೆಯ ಗಮನಕ್ಕೆ ಇದುವರೆಗೆ ಬಂದಿಲ್ಲ. ಇಂಥದ್ದೇ ಜ್ವರ ವರ್ಷದ ಹಿಂದೆ ಕಟೀಲು ಸಮೀಪದ ಪರಿಸರದಲ್ಲಿ ಕಂಡು ಬಂದಿತ್ತು ಎನ್ನಲಾಗಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.