Breaking News

ಎಣ್ಣೆಮಜಲು ಸ.ಕಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಶಾಲಿನಿಯವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

Advt_Headding_Middle
Advt_Headding_Middle

ಬಳ್ಪ ಗ್ರಾಮದ ಎಣ್ಣೆಮಜಲು ಸ.ಕಿ.ಪ್ರಾ. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾಲಿನಿ ಎಂ.ರವರಿಗೆ 2017-18ನೇ ಸಾಲಿನ ಅತ್ಯುತ್ತಮ ಶಿಕ್ಷಕಿ ಜಿಲ್ಲಾ ಪ್ರಶಸ್ತಿ ಲಭಿಸಿದೆ.

ಶಿಕ್ಷಣ ತರಬೇತಿಯನ್ನು ಪಡೆದ ಬಳಿಕ 1988ರ ನವೆಂಬರ್ 26ರಂದು ಪುತ್ತೂರು ತಾಲೂಕಿನ ಶರವೂರು ಸ.ಕಿ.ಪ್ರಾ. ಶಾಲೆಯಲ್ಲಿ ಸರಕಾರಿ ಉದ್ಯೋಗಕ್ಕೆ ಪಾದಾರ್ಪಣೆ ಮಾಡಿದ ಶಾಲಿನಿಯವರು 4 ವರ್ಷಗಳ ಬಳಿಕ ಕಣ್ಕಲ್ ಸ.ಕಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡರು. ಅಲ್ಲಿ 9 ವರ್ಷ ಸೇವೆ ಸಲ್ಲಿಸಿ ಬಳಿಕ ಎಣ್ಣೆಮಜಲು ಸ.ಕಿ.ಪ್ರಾ. ಶಾಲೆಗೆ ಮುಖ್ಯೋಪಾಧ್ಯಾಯಿನಿಯಾಗಿ ಭಡ್ತಿಹೊಂದಿ 16 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತಿ ಕರಿಕ್ಕಳ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಪುಟ್ಟಣ್ಣ ಎ‌. ಇವರ ಓರ್ವ ಪುತ್ರ ನಿತಿನ್ ಎ.ಪಿ‌. ಉದ್ಯಮಿಯಾಗಿದ್ದಾರೆ. ಇನ್ನೊರ್ವ ಪುತ್ರ ನಿತೇಶ್ ಎ.ಪಿ. ಬೆಂಗಳೂರಿನಲ್ಲಿ ಇಂಜಿನಿಯರ್ ಅಗಿದ್ದಾರೆ‌‌.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.