ಪಂಜ : ಮೊಸರು ಕುಡಿಕೆ ಉತ್ಸವ-ಸಮಾರೋಪ

Advt_Headding_Middle
Advt_Headding_Middle

ಶ್ರೀ ಕೃಷ್ಣ ದೇವರ ಸಂದೇಶಗಳ ಪಾಲಿಸೋಣ -ಡಾ.ಗೋಪಾಲಕೃಷ್ಣ ಭಟ್
ಕಾಲಕ್ಕೆ ತಕ್ಕಂತೆ ಉತ್ತಮ ಬದಲಾವಣೆಗಳನ್ನು ನಾವು ತರಬೇಕು. ಶ್ರೀ ಕೃಷ್ಣ ದೇವರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡರೆ ಅಂತಹ ಬದಲಾವಣೆಗೆ ಪ್ರೇರಣೆ ದೊರೆಯುತ್ತದೆ ಎಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಗೋಪಾಲಕೃಷ್ಣ ಭಟ್ ಹೇಳಿದರು.


ಅವರು ರಂದು ಫ್ರೆಂಡ್ಸ್ ಸರ್ಕಲ್ ಕೃಷ್ಣನಗರ ಪಂಜ ಇದರ ವತಿಯಿಂದ ಕೃಷ್ಣನಗರದಲ್ಲಿ ಜರುಗಿದ ೨೩ ನೇ ವರುಷದ ಶ್ರೀ ಕೃಷ್ಣಜನ್ಮಾಷ್ಠಮಿ ಆಚಾರಣೆಯ ಸಮಾರೋಪ ಸಮಾರಂಭದಲ್ಲಿ ಅತಿಥಿ ಸ್ಥಾನದಿಂದ ಮಾತನಾಡಿದರು.
ಇಂದು ಅಭಿವೃದ್ಧಿಯ ಹೆಸರಲ್ಲಿ ಹಿಂದಿನ ಕಾಲದಲ್ಲಿದ್ದ ಬಾಂಧವ್ಯ ಮರೆಯಾಗುತ್ತಿರುವುದು ಒಂದು ದುರಂತ. ಮಕ್ಕಳನ್ನು ಸಾಮಾಜಿಕ ಸೇವೆ ನೀಡುವ ಸಂಘಟನೆಗಳಲ್ಲಿ ಸೇರಿಕೊಳ್ಳಲು ಪೋಷಕರು ಪ್ರೇರಣೆ ನೀಡಬೇಕು. ಆಗ ಅವರಲ್ಲಿ ಸಾಮಾಜಿಕ ಸೇವೆ ಮತ್ತು ಬಾಂಧವ್ಯದ ಬಾಳನ್ನು ಕಾಣಲು ಸಾಧ್ಯವಿದೆ ಎಂದು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಗುರುಪ್ರಸಾದ್ ತೋಟ ಹೇಳಿದರು ಅವರು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಪ್ರಕಾಶ್ ಅಳ್ಪೆ ಅಧ್ಯಕ್ಷತೆ ವಹಿಸಿದ್ದರು. ಕಾರ್‍ಯದರ್ಶಿ ಸಾಯಿ ಹರೀಶ್ ಕೃಷ್ಣನಗರ, ಕಾರ್‍ಯಕ್ರಮದ ಉದ್ಘಾಟಕ ಶ್ರೀಧರ ಬಿ ಕೃಷ್ಣನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್‍ಯಕ್ರಮದಲ್ಲಿ ಪೂಜಾ ಕಾನತ್ತೂರು ಮತ್ತು ಐಶ್ವರ್ಯಪುನಿತ್ ಕಾನತ್ತೂರು ಪ್ರಾರ್ಥಿಸಿದರು. ಧ್ರುವ ಕುಮಾರ್ ಕಂಬಳ ಸ್ವಾಗತಿಸಿದರು. ಡಾ.ದೇವಿಪ್ರಸಾದ್ ಕಾನತ್ತೂರು ಮತ್ತು ಕೌಶಿಕ್ ಕುಳ ಕಾರ್‍ಯಕ್ರಮ ನಿರ್ವಹಿಸಿದರು. ಪೂಜಾ ಕಾನತ್ತೂರು ಬಹುಮಾನ ವಿಜೇತರ ಪಟ್ಟಿ ಓದಿದರು. ಸಾಯಿ ಹರೀಶ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.