Breaking News

ಸುಬ್ರಹ್ಮಣ್ಯ: 16ನೇ ವರ್ಷದ ಶ್ರೀಕೃಷ್ಣಜನ್ಮಾಷ್ಟಮಿ ಸಮಾರೋಪ

Advt_Headding_Middle
Advt_Headding_Middle

ಶ್ರೀ ಕೃಷ್ಣ ಪರಮಾತ್ಮ ಪ್ರಪಂಚಕ್ಕೆ ಪ್ರತಿನಿಧಿ -ಸುಬ್ರಹ್ಮಣ್ಯ ಶ್ರೀ
ದೇವತಾ ಶಕ್ತಿಯಾಗಿ ಆವಿರ್ಭವಿಸಿದ ಶ್ರೀ ಕೃಷ್ಣ ಎಂಟನೆಯ ಅವತಾರ ತಾಳಿದ್ದ. ಈ ಅವಧಿಯಲ್ಲಿ ಆತ ಸಮಾಜದ ಮಂದಿಗೆ ಹತ್ತಿರವಾಗಿದ್ದ. ಹೀಗಾಗಿ ಶ್ರೀ ಕೃಷ್ಣ ಪರಮಾತ್ಮ ಪ್ರಪಂಚಕ್ಕೆ ಪ್ರತಿನಿಧಿ. ಆತ ಓರ್ವ ಶ್ರೇಷ್ಠ ನೇತಾರ ಎಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಯತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.


ಸುಬ್ರಹ್ಮಣ್ಯದ ಶ್ರೀ ಕೃಷ್ಣಜನ್ಮಾಷ್ಟಮಿ ಉತ್ಸವ ಸಮಿತಿ ಇದರ ವತಿಯಿಂದ ಸವಾರಿ ಮಂಟಪದಲ್ಲಿ ಭಾನುವಾರ ನಡೆದ ೧೬ ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಆಶಿರ್ವಚನ ನೀಡಿದರು. ಹಿಂದುಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಕೂಡ ಶ್ರೀ ಕೃಷ್ಣ ಉಚ್ಚಾಯಿಸಿದ್ದ. ಅಂತಹ ಶ್ರೇಷ್ಠತೆಯುಳ್ಳ ಶ್ರೀ ಕೃಷ್ಣ ದೇವರು ಜಗತ್ತಿನ ಶ್ರೇಷ್ಠ ವ್ಯಕ್ತಿ ಎಂದರು.
ಈ ಸಂದರ್ಭ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ತವಿಲ್ ವಾದಕ ಮುರುಗಾನಂದ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಶ್ರೀ ಕೃಷ್ಣಜನ್ಮಾಷ್ಟಮಿ ಉತ್ಸವ ಸಮಿತಿ ಅಧ್ಯಕ್ಷ ದೀಪಕ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಮಾಧವ ಡಿ, ಕುಕ್ಕೆ ಶ್ರೀ ಜೇಸಿಐ ಸುಬ್ರಹ್ಮಣ್ಯ ಅಧ್ಯಕ್ಷ ಮೋನಪ್ಪ ಡಿ, ಕುಕ್ಕೆ ಶ್ರೀ ಅಟೋಚಾಲಕ ಮಾಲಕರ ಸಂಘದ ಅಧ್ಯಕ್ಷ ಮಹಾಬಲ ಕುಲ್ಕುಂದ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ವಿಶ್ವನಾಥ ನಡುತೋಟ ಅಷ್ಟಮಿ ಪ್ರಯುಕ್ತ ನಡೆದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.