Breaking News

ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ

Advt_Headding_Middle
Advt_Headding_Middle

ಸುಳ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು.

 

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸನ್ಮಾನ ನೆರವೇರಿಸಿದರು. ಸುಳ್ಯ ತಾಲೂಕಿನ ಎಣ್ಣೆಮಜಲು ಶಾಲೆಯ ಶ್ರೀಮತಿ ಶಾಲಿನಿ, ಅರಂತೋಡು ಶಾಲೆಯ ಶ್ರೀಮತಿ ಸರಸ್ವತಿ, ಗಾಂಧಿನಗರ ಶಾಲೆಯ ಚಿನ್ನಪ್ಪ ಗೌಡ ಸೇರಿದಂತೆ ಶಿಕ್ಷಕರನ್ನು ಸನ್ಮಾನಿಸಲಾಯಿತು.

 

ಸುಳ್ಯ ತಾಲೂಕಿನ ನಿವೃತ್ತ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು. 2017 ನೇ ಸಾಲಿನ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಶಿಕ್ಷಕರಿಗೆ ಪುರಸ್ಕಾರ ನಡೆಯಿತು. ಹತ್ತನೇ ತರಗತಿಯಲ್ಲಿ ಸುಳ್ಯ ವಲಯದಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಶೇ.100 ಫಲಿತಾಂಶ ಪಡೆದ ಶಾಲೆಗಳಿಗೆ ಪುರಸ್ಕಾರ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.