ಸೆ.13, 14: ಪಾಲೆಪ್ಪಾಡಿ ಗಣೇಶೋತ್ಸವ

Advt_Headding_Middle
Advt_Headding_Middle


ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಾಲೆಪ್ಪಾಡಿ ವತಿಯಿಂದ ೨೬ ನೇ ವರ್ಷದ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ೧೩ ಮತ್ತು ೧೪ ರಂದು ಐವರ್ನಾಡಿನ ಪಾಲೆಪ್ಪಾಡಿ ಮಂಜುಶ್ರೀ ಕ್ರೀಡಾಂಗಣ ದರ್ಖಾಸ್ತುವಿನಲ್ಲಿ ನಡೆಯಲಿದೆ.

ಸೆ೧೩ ರಂದು ಬೆಳಿಗ್ಗೆ ಗಂಟೆ ೧೦ ರಿಂದ ಗಣಪತಿ ಹವನ ಹಾಗೂ ಗಣೇಶನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿz. ಮಧ್ಯಾಹ್ನ ಗಂಟೆ ೧೨-೩೦ ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆಯಲಿದೆ. ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಲಿದೆ.ಮಕ್ಕಳಿಗೆ ಮತ್ತು ಮಹಿಳೆಯರಿಗೆ ಭಕ್ತಿಗೀತೆ ಮತ್ತು ಜಾನಪದ ಗೀತೆ ನಡೆಯಲಿದೆ. ಸಂಜೆ ಗಂಟೆ ೬ ರಿಂದ ಉದ್ಘಾಟನೆ ಮತ್ತು ಸಾಂಸ್ಕೃತಿಕ ಸಂಜೆ ನಡೆಯಲಿದೆ. ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗಣಪಯ್ಯ ಭಟ್ ಪಾಲೆಪ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾತ್ರಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಂಜುಶ್ರೀ ಗೆಳೆಯರ ಬಳಗದ ಅಧ್ಯಕ್ಷ ಜಯಪ್ರಸಾದ್ ಕಜೆತ್ತಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಹಿಂದೂ ಜಾಗರಣಾ ವೇದಿಕೆಯ ಸಂಚಾಲಕರಾದ ಗಣರಾಜ ಭಟ್ ಕೆದಿಲ ದಾರ್ಮಿಕ ಉಪನ್ಯಾಸ ನೀಡಲಿದ್ದಾರೆ.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಿವಪ್ಪ ಗೌಡ ನೆಕ್ಕರೆಕಜೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ ಉಪಸ್ಥಿತರಿರುವರು. ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಯಕ್ಷಿತ್ ಚಲ್ಲತ್ತಡಿಯವರನ್ನು ಗೌರವಿಸಲಾಗುವುದು.ರಾತ್ರಿ ಮಹಾಪೂಜೆ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.ನಂತರ ಶ್ರೀ ದೇವಿ ಲೀಲಾಮೃತ ಯಕ್ಷಗಾನ ನಡೆಯಲಿದೆ. ಸೆ ೧೪ ರಂದು ಬೆಳಿಗ್ಗೆ ಪೂಜೆ ನಂತರ ಭಜನಾ ಕಾರ್ಯಕ್ರಮ ನಡೆದ ಬಳಿಕ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.ಅಪರಾಹ್ನ ೨೦೦ ರಿಂದ ಶ್ರೀ ಗಣೇಶನ ವೈಭವದ ಶೋಭಾಯಾತ್ರೆಯು ಪಾಲೆಪ್ಪಾಡಿಯಿಂದ ಹೊರಟು ಬಾಂಜಿಕೋಡಿ ಹೊಳೆಯಲ್ಲಿ ಜಲಸ್ಥಂಭನ ಮಾಡಲಾಗುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.