ಸೆ.8: ಕರಾವಳಿ ಕ್ರೈಸ್ತರ ಕುಟುಂಬದ ಹಬ್ಬ ‘ಮೋಂತಿ ಹಬ್ಬ’ಕ್ಕೆ ಶಾಲಾ ಕಾಲೇಜುಗಳಿಗೆ ರಜೆ – ಜಿಲ್ಲಾಧಿಕಾರಿ ಆದೇಶ

Advt_Headding_Middle
Advt_Headding_Middle

ಕರಾವಳಿಯಲ್ಲಿ ಸೆಪ್ಟಂಬರ್ ೮ರಂದು ಕೊಂಕಣಿ ಕ್ರೈಸ್ತ ಬಾಂಧವರು ಅದ್ಧೂರಿಯಾಗಿ ಆಚರಿಸುವ ಹೊಸ ಪೈರಿನ ಹಬ್ಬ ಅಥವಾ ಮೋಂತಿ ಹಬ್ಬದಂದು ಶಾಲಾ ಕಾಲೇಜುಗಳಿಗೆ ರಜೆ ನೀಡಬಹುದಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಾಗೂ ಪದವಿ ಪೂರ್ವ ಶಿಕ್ಷಣಾ ಇಲಾಖೆಗೆ ಈ ಆದೇಶ ಪ್ರತಿ ರವಾನಿಸಿದ್ದು ಶಿಕ್ಷಣ ಸಂಸ್ಥೆಗಳಿಗೆ ಮೋಂತಿ ಹಬ್ಬದ ಪ್ರಯುಕ್ತ ರಜೆ ನೀಡುವಂತೆ ಜಿಲ್ಲಾಧಿಕಾರಿಯವರು ಆದೇಶ ನೀಡಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಸೇರಿ ಅನಾದಿ ಕಾಲದಿಂದಲೂ ಆಚರಿಸುವ ಹಬ್ಬವೇ ಮೋಂತಿ ಫೆಸ್ತ್. ಸತತವಾಗಿ ೯ ದಿನ ಮೇರಿ ಮಾತೆಗೆ ಭಕ್ತಿಯಿಂದ, ಪ್ರೀತಿಪೂರ್ವಕವಾಗಿ ಮಕ್ಕಳು, ಹಿರಿಯರು, ಕಿರಿಯರೆಲ್ಲ ಬಟ್ಟಲುಗಳಲ್ಲಿ ಹೂವನ್ನು ತಂದು ಚರ್ಚ್‌ಗಳಲ್ಲಿ ಅರ್ಪಿಸಲಾಗುತ್ತದೆ. ನಮ್ಮನ್ನೆಲ್ಲಾ ಕಾಪಾಡು, ಸಲಹು ಮಾತೆಯೇ ಎಂದೆಲ್ಲ ಬೇಡಿಕೆಗಳನ್ನು ಮುಂದಿಡುತ್ತಾರೆ. ಹೀಗೆ ೯ ದಿನ ವಿಶೇಷವಾದ ಬಲಿಪೂಜೆಗಳೊಂದಿಗೆ ಪ್ರಾರ್ಥನೆ ಹಾಗೂ ಕೊನೆಯ ದಿನ ನಡೆಯುವ ಹಬ್ಬವನ್ನು ಕರಾವಳಿಯ ಕೊಂಕಣಿ ಸಮುದಾಯ ಅದ್ದೂರಿಯಾಗಿ ಹಬ್ಬವನ್ನು ಆಚರಿಸುತ್ತಿದ್ದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಬೇಡಿಕೆಯಂತೆ ಈ ದಿನ ರಜೆ ನೀಡುವಂತೆ ಬಿಷಪ್ ಹೌಸ್ ಬಳಿ ಇರುವ ಕ್ಯಾಥಲಿಕ್ ಸಭಾ ಮಂಗಳೂರು ಸಂಘಟನೆಯವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರು. ಇದೀಗ ಮುಖ್ಯಮಂತ್ರಿಗಳ ನಿರ್ದೇಶನದಂತೆ, ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡುವ ಅಧಿಕಾರವನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಆಯಾ ಶಾಲೆಗಳಿಗೆ ಸ್ಥಳೀಯ ಆಚರಣೆ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ, ನಾಲ್ಕು ದಿನಗಳ ರಜೆ ಘೋಷಿಸುವ ಅಧಿಕಾರ ಇದ್ದರೂ ಹಲವು ಶಾಲಾ ಕಾಲೇಜುಗಳು ಈಗಾಗಲೇ ಈ ರಜೆಯನ್ನು ಬಳಸಿಕೊಂಡಿದ್ದರಿಂದ ಮೊಂತಿ ಹಬ್ಬಕ್ಕೆ ರಜೆ ಘೋಷಿಸಲು ತೊಡಕಾಗಿ ಪರಿಣಮಿಸಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.