ಎಲಿಮಲೆ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Advt_Headding_Middle
Advt_Headding_Middle

ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರಿಗೆ ಶಾಲು ಹೊದಿಸಿ , ಹೂ ನೀಡಿ ಗೌರವಿಸಿದರು. ಮುಖ್ಯ ಶಿಕ್ಷಕರಾದ ಚಂದ್ರಶೇಖರ ಪೇರಾಲ್ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕರಾದ ಗೋಪಿನಾಥ್ ಮೆತ್ತಡ್ಕ , ಮುರಳೀಧರ ಪಿ. ಜೆ. ವಸಂತ್ ನಾಯಕ್ ಡಿ. ಇವರು ಶಿಕ್ಷಕರ ದಿನಾಚರಣೆಯ ಮಹತ್ವ ತಿಳಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಸೃಜನ್ ಸ್ವಾಗತಿಸಿ, ಆಯಿಷತ್ ಫರ್ಝಾನ ಕಾರ್ಯ ಕ್ರಮ ನಿರೂಪಣೆ ಮಾಡಿದರು. ಮುಖ್ಯ ಶಿಕ್ಷಕರು ಅಧ್ಯಕ್ಷ ಭಾಷಣದಲ್ಲಿ ಗುರುಗಳ ಆದರ್ಶಗಳನ್ನು ಕೊಂಡಾಡಿದರು. ಸರ್ವ ಪಲ್ಲಿ ರಾಧಾಕೃಷ್ಣರ ದಾರ್ಶನಿಕ ತತ್ವ ಗಳನ್ನು ಪಾಲಿಸುವಲ್ಲಿ ಈ ಕಾರ್ಯಕ್ರಮ ಮಾದರಿಯಾಯಿತು. ಕು. ದೀಪ್ತಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.