ಕೃಷ್ಣನ ಸಂದೇಶ ಇಂದಿಗೂ ಪ್ರಸ್ತುತ: ಹರ್ಷಿತ್ ಪಡ್ರೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯ: ಭಗವಾನ್ ಶ್ರೀ ಕೃಷ್ಣನ ಬದುಕೇ ಆದರ್ಶಪ್ರಾಯವಾಗಿದೆ. ಆತನ ಬಾಲ್ಯದ ಚೇಷ್ಟೆಗಳು ಸಮಾಜಕ್ಕೆ ಸಂದೇಶವನ್ನು ಸಾರುತ್ತಿದ್ದವು. ಕೇವಲ ದುಷ್ಟರ ನಿಗ್ರಹವಲ್ಲದೆ ಜನರ ಮನಸ್ಸಿನ ದುಷ್ಟತ್ವವನ್ನು ಆತ ದೂರಗೊಳಿಸಿದ. ನೈತಿಕತೆ ಅಧಪತನವಾಗುತ್ತಿರುವ ಈ ಕಾಲದಲ್ಲಿ ಕೃಷ್ಣನ ಸಂದೇಶ ಪ್ರಸ್ತುತವಾಗಿದೆ ಎಂದು ಯುವ ವಾಗ್ಮಿ ಹರ್ಷಿತ್ ಪಡ್ರೆ ಹೇಳಿದರು.
ನಿಸರ್ಗ ಯುವಕ ಮಂಡಲ ಐನೆಕಿದು ಇದರ ಆಶ್ರಯದಲ್ಲಿ ನಡೆದ ತೃತೀಯ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು.


ಯಾವುದೇ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಬದಲಾಗಿ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಬೇಕು. ಶ್ರೀ ಕೃಷ್ಣನದು ಉಲ್ಲಾಸಭರಿತ ವ್ಯಕ್ತಿತ್ವ. ಎಲ್ಲಾ ಜಾತಿ ಧರ್ಮದವರು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿರುವುದು ಸಂತಸದ ವಿಚಾರ ಎಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷ ಭರತ್ ಕೆ. ವಹಿಸಿದ್ದರು‌.ವೇದಿಕೆಯಲ್ಲಿ ಹರಿಹರೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು ಜಯಪ್ರಕಾಶ್ ಕೂಜುಗೋಡು ಶಿಕ್ಷಕಿ ಜಯಲಕ್ಷ್ಮಿ, ರಾಮಕೃಷ್ಣ ಯಸ್, ಹಾಗೂ ಜಾರಪ್ಪ ಐನೆಕಿದು ಉಪಸ್ಥಿತರಿದ್ದರು. ಗಿರೀಶ್ ಆಚಾರ್ಯ ಸ್ವಾಗತಿಸಿ ನವೀನ್ ಐನೆಕಿದು ವಂದಿಸಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.