Breaking News

ಪಂಬೆತ್ತಾಡಿಯಲ್ಲಿ ಮನೆಯೊಳಗೆ ಕೊಳೆತ ಶವ : ಕೊಲೆ ಶಂಕೆ

Advt_Headding_Middle
Advt_Headding_Middle


ಪಂಬೆತ್ತಾಡಿ ಗ್ರಾಮದ ಕಲ್ಚಾರು ಸುಬ್ರಹ್ಮಣ್ಯ ಭಟ್ ಎಂಬವರು ಮನೆಯೊಳಗಡೆಯೇ ಸಾವಿಗೀಡಾಗಿದ್ದು, ಇದು ಕೊಲೆ ಕೃತ್ಯವಾಗಿರಬಹುದೆಂದು ಶಂಕಿಸಲಾಗಿದೆ.

ಕಲ್ಚಾರ್ ಸುಬ್ರಹ್ಮಣ್ಯ ಭಟ್ (54 ವ) ಪಂಬೆತ್ತಾಡಿಯ ತಮ್ಮ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಸುಮಾರು ೮-೯ ದಿನಗಳಿಂದ ಅವರನ್ನು ಯಾರೂ ಕಂಡಿಲ್ಲ. ನಿನ್ನೆ ಪೋಸ್ಟ್‌ಮ್ಯಾನ್ ಪತ್ರ ನೀಡಲೆಂದು ಅವರ ಮನೆಗೆ ಹೋದಾಗ ಬಾಗಿಲು ಹಾಕಿರುವುದು ಮತ್ತು ಮನೆಯಿಂದ ವಾಸನೆ ಹೊರಡುತ್ತಿರುವುದು ಗಮನಕ್ಕೆ ಬಂತು. ಈ ವಿಚಾರವನ್ನು ಅವರು ಊರವರಿಗೆ ತಿಳಿಸಿದರು. ಊರವರು ಪೊಲೀಸರಿಗೆ ತಿಳಿಸಿದರು.

ಬೆಳ್ಳಾರೆ ಪೊಲೀಸರು ಮತ್ತು ಸುಬ್ರಹ್ಮಣ್ಯ ಪೊಲೀಸರು ಇಂದು ಬೆಳಿಗ್ಗೆ ಸ್ಥಳಕ್ಕೆ ಧಾವಿಸಿ ಬಾಗಿಲು ತೆರೆದು ನೋಡಿದಾಗ ಸುಬ್ರಹ್ಮಣ್ಯ ಭಟ್‌ರ ಕೊಳೆತ ಮೃತದೇಹ ಪತ್ತೆಯಾಯಿತು. ವೈದ್ಯಕೀಯ ತಪಾಸಣೆಯ ಬಳಿಕವೇ ಸಾವಿನ ಕಾರಣವನ್ನು ಖಚಿತ ಪಡಿಸಬಹುದೆಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.