Breaking News

ಆಪರೇಷನ್‌ಗೆ ಆರ್ಥಿಕ ಸಹಾಯಕ್ಕೆ ಮೊರೆ

Advt_Headding_Middle
Advt_Headding_Middle

ಕಳೆದ 12  ವರ್ಷಗಳಿಂದ ನಡೆಯಲಾಗದೆ ಕುಳಿತಲ್ಲೆ ಇರುವ ಜಯನಗರ ನಿವಾಸಿ ರಾಮಕೃಷ್ಣ ನಾಯಕ್‌ರವರ ಪುತ್ರ ಪ್ರೇಮ್‌ಕುಮಾರ್ ಎಸ್. ಆರ್.ರವರು ಗುಣಮುಖವಾಗಲು ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿದೆ. ಸುಮಾರು 13 ಲಕ್ಷ ರೂ. ಅವಶ್ಯಕತೆಯಿದ್ದು, ತೀರಾ ಬಡತನದಲ್ಲಿರುವ ಮನೆಯವರು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಪದವಿ ಓದುತ್ತಿದ್ದ ಸಂದರ್ಭ ಎರಡು ಕಾಲು, ಕೈ ಬಲ ಕಳೆದುಕೊಂಡು ಮಲಗಿದಲ್ಲೇ ಇರುವ ೩೫ ವಯಸ್ಸಿನ ಪ್ರೇಮ್‌ಕುಮಾರ್ ಅವರು ಚಿಕಿತ್ಸೆಗೆ ಲಕ್ಷಾಂತರ ರೂ. ವ್ಯಯಿಸಲಾಗಿದೆ. ಮೂರು ತಿಂಗಳ ಹಿಂದೆ ಅಪೋಲಾ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ಸಂದರ್ಭ ಮೊದಲಿನಂತಾಗಲು ಶಸ್ತ್ರ ಚಿಕಿತ್ಸೆ ಅನಿವಾರ್ಯ ಎಂದು ತಿಳಿಸಿದ್ದಾರೆ.
ರಾಮಕೃಷ್ಣ ನಾಯಕ್ ಅವರದ್ದು ಬಡ ಕುಟುಂಬ. ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದರು. ವಯಸ್ಸಾದ ಕಾರಣ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.. ಉಳಿದಿಬ್ಬರು ಮಕ್ಕಳ ದುಡಿಮೆಯೇ ಆಧಾರ ಮನೆ ಸ್ಥಳ ಬಿಟ್ಟರೆ ಬೇರೇನೂ ಇಲ್ಲ. ಹೀಗಾಗಿ ಮಗನ ಆರೋಗ್ಯ ಸುಧಾರಣೆಗಾಗಿ ಸಹಾಯದ ನೆರವು ಕೋರಿದ್ದಾರೆ.
ದಾನಿಗಳು ಈ ಅಕೌಂಟ್‌ಗೆ ಸಹಾಯ ಹಸ್ತ ನೀಡಬಹುದು. ಪ್ರೇಮ್‌ಕುಮಾರ್ ಎಸ್.ಆರ್.  A/c 20168132528, IFSC Code: SBIN0010451 ಎಸ್‌ಬಿಐ ಬ್ಯಾಂಕ್, ಸುಳ್ಯ ಬ್ರಾಂಚ್, ಟಿಎಪಿಸಿಎಂಎಸ್ ಕಟ್ಟಡ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.