ಕಲ್ಲುಗುಂಡಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್‌ನಲ್ಲಿ ಮರಿಯ ಜಯಂತಿ ಹಬ್ಬ

Advt_Headding_Middle
Advt_Headding_Middle

ಕಲ್ಲುಗುಂಡಿ ಸಂತ ಫ್ರಾನ್ಸಿಸ್ ಕ್ಷೇವಿಯರ್ ಚರ್ಚ್‌ನಲ್ಲಿ ಮರಿಯ ಜಯಂತಿ ಹಬ್ಬವನ್ನು ಆಚರಿಸಲಾಯಿತು. ಚರ್ಚ್‌ನ ಪ್ರವೇಶದ್ವಾರದ ಮುಂಭಾಗದಲ್ಲಿ ಭತ್ತದ ತೆನೆಗಳಿಂದ ಅಲಂಕರಿಸಿ ಚರ್ಚಿನ ಎಲ್ಲಾ ಮಕ್ಕಳು ಮಾತೆ ಮರಿಯಮ್ಮನವರಿಗೆ ಹೂವು ಅರ್ಪಿಸಿ ಮೆರವಣಿಗೆಯಲ್ಲಿ ಚರ್ಚಿಗೆ ಸಾಗಿದರು.

ನಂತರ ಚರ್ಚ್‌ನ ಧರ್ಮಗುರುಗಳಾದ ಫಾ. ನವೀನ್ ಪ್ರಕಾಶ ಪಿಂಟೋರವರು ಬಲಿಪೂಜೆಯನ್ನು ಅರ್ಪಿಸಿದರು. ಬಲಿಪೂಜೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ತಮ್ಮ ಕುಟುಂಬಗಳಿಗೋಸ್ಕರ ಪ್ರಾರ್ಥಿಸಿದರು. ನಂತರ ಭಕ್ತಾಧಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.


ಈ ಹಬ್ಬವು ೧೦ ದಿನಗಳದಾಗಿದ್ದು, ಒಂಬತ್ತನೇ ದಿನ ನೊವೆನಾವನ್ನು ಕೈಗೊಂಡು ಹತ್ತನೇ ದಿನದಂದು ಹಬ್ಬವನ್ನು ಆಚರಿಸಲಾಗುವುದು. ದೇವರು ಕರುಣಿಸಿದ ಉತ್ತಮ ಬೆಳೆಗಾಗಿ ವಂದಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸಸ್ಯಾಹಾರಿ ಭೋಜನ ಸ್ವೀಕರಿಸುವುದು ಕರಾವಳಿ ಕ್ರೈಸ್ತರಲ್ಲಿ ಅನಾದಿಕಾಲದಿಂದಲೂ ನಡೆದು ಬಂದ ಸಂಪ್ರದಾಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.