ಜೇಸಿಐ ಜೆಸಿಐ ಸುಳ್ಯ ಸಿಟಿಯ ದೈನಂದಿನ ಚಟುವಟಿಕೆಗಳ ಉದ್ಘಾಟನೆ 

Advt_Headding_Middle
Advt_Headding_Middle

 

ಜೆಸಿಐ ಸುಳ್ಯ ಸಿಟಿಯ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮವು ಸೆ. 8  ರಂದು ಶಿವಕೃಪಾ ಕಲಾಮಂದಿರದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ನ್ಯೂ ಸಿಟಿ ಘಟಕದ ಅಧ್ಯಕ್ಷ JC ಸತೀಶ್ ಎಂ.ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಸರಕಾರಿ ಪ್ರೌಢಶಾಲೆ ಎಲಿಮಲೆಯ ಮುಖ್ಯಶಿಕ್ಷಕರು JC ಚಂದ್ರಶೇಖರ್ ಪೇರಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಜೇಸಿ ಸಂಸ್ಥೆಯು ಯುವ ಜನರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನುತ್ತಾ JCI ಸುಳ್ಯ ಸಿಟಿಯ ಉಜ್ವಲ ಭವಿಷ್ಯಕ್ಕೆ ಶುಭಹಾರೈಸಿದರು.

JCI ವಲಯ ಉಪಾಧ್ಯಕ್ಷ ಜೇಸೀ HGF. ಮನಮೋಹನ್ ಬಳ್ಳಡ್ಕ ಮಾತನಾಡಿ ವಿದ್ಯಾರ್ಥಿಸಮುದಾಯದ ವ್ಯಕ್ತಿತ್ವ ವಿಕಸಿಸುವಲ್ಲಿ ಜೆಸಿಯು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ JFM ಅಶೋಕ್ ಚೂಂತಾರು ಮಾತನಾಡಿ, ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ JCI ಯ ಪಾತ್ರದ ಬಗ್ಗೆ ಮಾತನಾಡಿ ಘಟಕಕ್ಕೆ ಶುಭಹಾರೈಸಿದರು. ಜೆಸಿಐ ಉಪಾಧ್ಯಕ್ಷ ವಿನಯ್ ರಾಜ್ ಮಡ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯೂ ಸಿಟಿ ಘಟಕದ ಕಾರ್ಯದರ್ಶಿ ರಂಜಿತ್ ಪಿ.ಜೆ.ವಂದಿಸಿದರು. ಜೆಸಿಐ ಸುಳ್ಯ ಸಿಟಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.