Breaking News

ಕಲ್ಲೇರಿ ಶ್ರೀ ಕೃಷ್ಣ ಜನ್ಮಾಷ್ಠಮಿ : ಸಾಂಸ್ಕೃತಿಕ ಕಾರ್ಯಕ್ರಮ, ಐವರಿಗೆ ಸನ್ಮಾನ, ಧಾರ್ಮಿಕ ಕಾರ್ಯಕ್ರಮ

Advt_Headding_Middle
Advt_Headding_Middle

ಕಲ್ಲೇರಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಮತ್ತು ಸಾಂಸ್ಕೃತಿಕ ಹಾಗೂ ಆಟೋಟಗಳು ನಡೆದು ಧಾರ್ಮಿಕ ಸಭೆ ನಡೆಯಿತು.

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ವಹಿಸಿದ್ದರು. ಎಣ್ಮೂರು ಗ್ರಾ.ಪಂ. ಅಧ್ಯಕ್ಷೆ ಜಾನಕಿ ಅಲೆಂಗಾರ, ಸುಳ್ಯ ಎ.ಪಿ.ಎಂ.ಸಿ ಸದಸ್ಯ ಸಂತೋಷ್ ಜಾಕೆ, ಬೆಳ್ಳಾರೆ ಠಾಣೆಯ ಉಪಠಾಣಾಧಿಕಾರಿ ಭಾಸ್ಕರ್, ಎಣ್ಮೂರು ಗ್ರಾ.ಪಂ. ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಪ್ಯಾಡಿ ಸೀತಾರಾಮ ಗೌಡ, ಕಲ್ಮಡ್ಕ ಗ್ರಾ.ಪಂ. ಸದಸ್ಯ ಶಿವರಾಮಯ್ಯ ಭಟ್, ಸಂಘದ ಕಾರ್ಯದರ್ಶಿ ಹರ್ಷಿತ್ ಶೃಂಗೇರಿ, ಉಪಾಧ್ಯಕ್ಷ ರಮೇಶ್ ಕಲ್ಲೇರಿ ಮೊದಲಾದವರು ವೇದಿಕೆಯಲ್ಲಿದ್ದರು.

 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ಪಟೇಲ್ ಚಾರ್ವಕ, ನಿವೃತ್ತ ಯೋಧ ತಿರುಮಲೇಶ್ವರ ಗೌಡ ಅಲೆಂಗಾರ, ದಾರು ಶಿಲ್ಪಿ ಚಿನ್ನಯ್ಯ ಆಚಾರ್ಯ, ಹೈನುಗಾರಿಕೆಯಲ್ಲಿ ಸಾಧನೆಗೈದ ರಾಮಕೃಷ್ಣ ರೈ ಕಲ್ಲೇರಿ, ಎಣ್ಮೂರು ಶಾಲೆಯಲ್ಲಿ ೧೦ನೇ ತರಗತಿ ಯಲ್ಲಿ ಕನ್ನಡ ಮಾಧ್ಯಮದಲ್ಲಿ ೬೧೬ ಅಂಕ ಗಳಿಸಿದ ಕು. ಅನುಷಾ ಕಲ್ಲೇರಿಯವರನ್ನು ಸನ್ಮಾನಿಸಲಾಯಿತು.

 

೫ ಶಾಲೆಯ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಆಟೋಟ ಸ್ಪರ್ಧೆಗಳ ನಿರೂಪಣೆಯನ್ನು ಅರುಣ್‌ಕುಮಾರ್ ಬಳ್ಕಾಡಿ ನಿರೂಪಣೆ ಮಾಡಿದರು. ಸಭಾ ಕಾರ್ಯಕ್ರಮವನ್ನು ರಾಜೇಶ್ ಸುವರ್ಣ ಬಾಳಿಲ ನಿರೂಪಿಸಿದರು.

ಚಿದಾನಂದ ಕಲ್ಲೇರಿ ಪ್ರಾರ್ಥಿಸಿ, ಅನಿಲ್ ಆಳ್ವ ಸ್ವಾಗತಿಸಿದರು. ಕಾರ್ತಿಕ್ ರೈ ಕಲ್ಲೇರಿ ವಂದಿಸಿದರು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಬಾಲೆ ಭಗವಂತ ಎಂಬ ಯಕ್ಷಗಾನ ಬಯಲಾಟ ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.