Breaking News

ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ನಿಂದ ನಾಳೆ ಭಾರತ್ ಬಂದ್ ಕರೆ

Advt_Headding_Middle
Advt_Headding_Middle

 


ಸುಳ್ಯ : ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯಿಂದ ದೇಶದ ಜನಸಾಮಾನ್ಯರ ಬದುಕು ಹೈರಾಣಾಗಿದೆ, ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿದಿದ್ದರೂ ಅದರ ಪ್ರಯೋಜನವನ್ನು ದೇಶದ ಜನರಿಗೆ ನೀಡದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನರನ್ನು ವಂಚಿಸುತ್ತಿದೆ ಮತ್ತು ಏರಿರುವ ಪೆಟ್ರೋಲ್, ಡಿಸೇಲ್, ಗ್ಯಾಸ್ ದರವನ್ನು ತಕ್ಷಣ ಇಳಿಸಬೇಕೆಂದು ಆಗ್ರಹಿಸಿ ಸೆ.೧೦ ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ , ಸಮಾನ ಮನಸ್ಕ ವಿಪಕ್ಷಗಳ ಬೆಂಬಲದೊಂದಿಗೆ ದೇಶ ವ್ಯಾಪಿ ಬಂದ್, ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಸುಳ್ಯದಲ್ಲೂ ಎಲ್ಲ ವರ್ತಕರು, ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತ ಬಂದ್ ಮಾಡಿ ಸಹಕರಿಸುವಂತೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಮನವಿ ಮಾಡಿದೆ. ಈ ಕುರಿತು ಕರಪತ್ರ ವಿತರಿಸಲಾಯಿತು.

 

 

ಸುಳ್ಯ ಕಾಂಗ್ರೆಸ್ ಕಛೇರಿಯಲ್ಲಿ ಸೆ.೮ ರಂದು ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಮನವಿ ಮಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ ರವರು ದೇಶದ ಜನಸಾಮಾನ್ಯರ ಸಮಸ್ಯೆಗಳನ್ನು ಅತ್ಯಂತ ಪ್ರಬಲವಾಗಿ ಕೇಂದ್ರ ಸರಕಾರದ ಮುಂದಿಟ್ಟು ಸರಕಾರದ ಕಣ್ಣು ತೆರೆಸಲು ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಪ್ರಜ್ಞಾವಂತ ನಾಗರಿಕರು ತಾವೆಲ್ಲರೂ ನಮ್ಮೊಂದಿಗೆ ಕೈ ಜೋಡಿಸಿ ಭಾರತದಾದ್ಯಂತ ನಡೆಯುವ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರಲ್ಲದೆ ಯಾವುದೇ ಕಾರಣಕ್ಕೂ ಬಲಾತ್ಕಾರದ ಬಂದ್ ನಡೆಸುವುದಿಲ್ಲ ಎಂದರು. ಸಭೆಯಲ್ಲಿ ಭಾಗವಹಿಸಿದ ಸುಳ್ಯ ವಿಧಾನಸಭಾ ಕಾಂಗ್ರೆಸ್ ಉಸ್ತುವಾರಿ ಎಂ ಎಸ್ ಮಹಮ್ಮದ್, ಉಲ್ಲಾಸ್ ಕೋಟ್ಯಾನ್, ಧನಂಜಯ ಅಡ್ಪಂಗಾಯ , ಜಿಲ್ಲಾ ಪಂಚಾಯತ್ ಉಸ್ತುವಾರಿಗಳು, ತಾಲೂಕು ಪಂಚಾಯತ್ ಉಸ್ತುವಾರಿಗಳು , ಪ್ರಧಾನ ಕಾರ್ಯದರ್ಶಿ ಗಳು ಮತ್ತಿತರರು ಮಾತನಾಡಿ ಸಲಹೆ ಸೂಚನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.