ಯೇನೆಕಲ್ಲು ಹಾಲು ಉ.ಸ.ಸಂಘದ ಮಹಾಸಭೆ ರೂ. 2,24 ಲಕ್ಷ ಲಾಭ

Advt_Headding_Middle
Advt_Headding_Middle

ಯೇನೆಕಲ್ಲು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ. 8 ರಂದು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಮಾದನಮನೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದಲ್ಲಿ ಒಟ್ಟು 305 ಸದಸ್ಯರಿದ್ದು, ರೂ. 6,950 ಪಾಲು ಬಂಡವಾಳವನ್ನು ಹೊಂದಿದ್ದು, ಪ್ರಸ್ತುತ ವರ್ಷದಲ್ಲಿ ಸಂಘ ರೂ. 2.24 ಲಕ್ಷ ಲಾಭಗಳಿಸಿ ಹಾಲು ಉತ್ಪಾದಕರಿಗೆ ರೂ. 1,೦7,೦೦೦ ಮತ್ತು ಸಿಬ್ಬಂದಿಗಳಿಗೆ ರೂ. 24,೦೦೦ ಬೋನಸ್ ಹಾಗೂ ಸದಸ್ಯರಿಗೆ ಶೇ. 12 ಡಿವಿಡೆಂಟ್ ನೀಡಲಾಗುವುದು. ಸಂಘವು ಪ್ರಥಮ ಬಾರಿಗೆ ಏ ಗ್ರೇಡ್ ಮಾನ್ಯತೆ ಪಡೆದಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಅಧ್ಯಕ್ಷ ಶಿವಪ್ರಸಾದ್ ಮಾದನಮನೆ ಹೇಳಿದರು. ಯೇನೆಕಲ್ಲು ಶಾಲಾ ವಿದ್ಯಾಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಸಭೆಯಲ್ಲಿ ನಿರ್ದೇಶಕ ಭರತ್ ನೆಕ್ರಾಜೆ ಸ್ವಾಗತಿಸಿದರು. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್, ಸಂಘದ ನಿರ್ದೇಶಕರುಗಳಾದ ಸುರೇಶ್ ಬಾಲಾಡಿ, ಗಂಗಾಧರ ಗೌಡ ಪೈಲಾಜೆ, ಮೋಹನ್ ಗೌಡ ಕೋಟಿಗೌಡನಮನೆ, ಶ್ರೀಮತಿ ಭಾಗೀರಥಿ ಪಿ, ಕೆ.ಎಂ.ಎಫ್. ಸಿಬ್ಬಂದಿ ಸಚಿನ್ ಚಿದ್ಗಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶ್ರೀಮತಿ ಗೀತಾ ಡಿ. ವಾರ್ಷಿಕ ವರದಿ ವಾಚಿಸಿದರು. ಹಾಲು ಪರೀಕ್ಷಕಿ ಶ್ರೀಮತಿ ಚಂದ್ರಾವತಿ ಪರಮಲೆ ಮತ್ತು ಸಹಾಯಕಿ ಶ್ರೀಮತಿ ಚಂದ್ರಾವತಿ ಪುಂಡಿಗದ್ದೆ ಸಹಕರಿಸಿದರು. ಸಂಘದ ಉಪಾಧ್ಯಕ್ಷ ರಾಮಣ್ಣ ಗೌಡ ಬೂದಿಪಳ್ಳ ವಂದಿಸಿದರು. ಸಂಘಕ್ಕೆ ವರ್ಷಕ್ಕೆ 4 ಸಾವಿರದಿಂದ 1೦ ಸಾವಿರ ಲೀಟರ್ ತನಕ ಹಾಲು ಮಾರಾಟ ಮಾಡಿದ ಲಿಂಗಪ್ಪ ಪಿ, ಗಣೇಶ್ ಕೆ.ಎಸ್, ಸುರೇಶ್ ಬಿ, ಚಂದ್ರಾವತಿ ಎ, ನೀಲಪ್ಪ, ಸೋಮಸುಂದರ, ಶೀಲಾಕುಮಾರಿ, ವೇದಾವತಿ, ರೇವತಿ, ದಿನೇಶ್ ಕೆ ಮತ್ತು ಹೆಚ್ಚು ಗುಣಮಟ್ಟದ ಹಾಲನ್ನು ನೀಡಿದ ಗುಡ್ಡಪ್ಪ ಎ ಮತ್ತು ವೆಂಕಟೇಶ್ವರ ಎನ್‌ರವರನ್ನು ಈ ಸಂದರ್ಭದಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.