ಉಸಿರು ನಿಂತ ಮೇಲೂ ನಿಮ್ಮ ನೆನಪನ್ನು ಹಸಿರಾಗಿಸಿರಿ: ಆಶಾ ಬೆಳ್ಳಾರೆ

Advt_Headding_Middle
Advt_Headding_Middle

ಬೆಳ್ಳ್ಳಾರೆ ಜ್ಞಾನದೀಪದಲ್ಲಿ ಗಂಗಾಧರ ಬೆಳ್ಳಾರೆ ಸ್ಮರಣಾರ್ಥ ತರಬೇತು ಕಾರ್ಯಕ್ರಮ

ಸಮಾಜದಲ್ಲಿ ಬದುಕಿದ್ದರೂ ಸತ್ತಂತೆ, ಸತ್ತ ಮೇಲೂ ಬದುಕಿದವರಂತೆ ಇರುವ ಇಬ್ಬರು ವ್ಯಕ್ತಿಗಳಿದ್ದಾರೆ. ಉಸಿರು ನಿಂತ ಮೇಲೂ ನಮ್ಮೊಳಗೆ ಜೊತೆಯಾಗಿರುವಂತೆ ವ್ಯಕ್ತಿತ್ವ ರೂಪಿಸಿಕೊಂಡವರು ಶ್ರೇಷ್ಠರೆನಿಸಿಕೊಳ್ಳುತ್ತಾರೆ ಎಂದು ಪುತ್ತೂರಿನ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾ ಗಂಗಾಧರ್ ಬೆಳ್ಳಾರೆ ಹೇಳಿದರು.

ಅವರು ಬೆಳ್ಳಾರೆ ಜೇಸಿಐನ ಜೇಸೀ ಸಪ್ತಾಹದ ಅಂಗವಾಗಿ ರಾಜ್ಯ ತರಬೇತುದಾರ ಗಂಗಾಧರ ಬೆಳ್ಳಾರೆ ಸ್ಮರಣಾರ್ಥ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆದ ತರಬೇತು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಬೆಳ್ಳಾರೆ ಜೇಸಿಐ ಪೂರ್ವಾಧ್ಯಕ್ಷ ಆರ್.ಕೆ ಬೆಳ್ಳಾರೆ ಮಾತನಾಡಿ, ವರ್ತನೆಗಳನ್ನು ಧನಾತ್ಮಕವಾಗಿ ಬೆಳೆಸಿಕೊಂಡಾಗ ಮಾತ್ರ ವ್ಯಕ್ತಿತ್ವ ಬೆಳಗಲು ಸಾಧ್ಯ. ವ್ಯಕ್ತಿಯ ಮನೋವಿಕಾಸದ ಶ್ರೇಷ್ಠ ಕಾರ್ಯವನ್ನು ಬೆಳ್ಳಾರೆಯವರು ಮಾಡಿದ್ದರು ಎಂದರು.
ಪೂರ್ವಾಧ್ಯಕ್ಷ ಸುನಿಲ್ ರೈ ಪೆರುವಾಜೆ ಮಾತನಾಡಿ, ಆದ್ಯಾತ್ಮ, ವೈಚಾರಿಕತೆ, ಸಾಂಸ್ಕೃತಿಕ, ಜನಪದೀಯ, ಕಲಾವಿದ ಹಾಗೂ ಸಾಹಿತಿ ಹೀಗೆ ಎಲ್ಲಾ ವಿಷಯಗಳನ್ನು ಕರಗತ ಮಾಡಿಕೊಂಡಿದ್ದ ಗಂಗಾಧರ ಬೆಳ್ಳಾರೆಯವರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದರು. ಎಂದರು.
ಬೆಳ್ಳಾರೆ ಜೇಸಿಐ ಅಧ್ಯಕ್ಷ ಜಯರಾಮ ಉಮಿಕ್ಕಳ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಸಪ್ತಾಹ ನಿರ್ದೇಶಕ ಲೋಕೇಶ್ ತಂಟೆಪ್ಪಾಡಿ, ಯುವ ಜೇಸೀ ಅಧ್ಯಕ್ಷ ಶರತ್ ಕಾನಾವು ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ಆರೀಫ್ ಬೆಳ್ಳಾರೆ ಸ್ವಾಗತಿಸಿ, ಕಾರ್ಯದರ್ಶಿ ವೀರನಾಥ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.