`ಬಲಾತ್ಕಾರದ ಬಂದ್’ ಬೇಡವೇ ಬೇಡ – `ಸ್ವಯಂ ಪ್ರೇರಿತ ಬಂದ್’ ಅವರವರಿಗೆ ಬಿಡಿ

Advt_Headding_Middle
Advt_Headding_Middle


ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯಿಂದ ತೊಂದರೆಯಾಗುತ್ತಿರುವುದು ನಿಜ. ಆದರೆ ಅದಕ್ಕೆ ಬಂದ್ ಕರೆ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಯೋಚಿಸಬೇಕಾಗಿದೆ. ಸ್ವಯಂಪ್ರೇರಿತ ಬಂದ್ ಮಾಡುವುದು ಅವರವರಿಗೆ ಬಿಟ್ಟ ವಿಷಯ. ಆದರೆ ಯಾವುದೇ ಕಾರಣಕ್ಕೂ ಬಲಾತ್ಕಾರದ ಬಂದ್ ನಡೆಯಲೇ ಬಾರದು. ಬಂದ್ ಕರೆಯಿಂದ ಆಗುವ ಪ್ರಯೋಜನಕ್ಕಿಂತ ಆಗುವ ತೊಂದರೆ ಕಷ್ಟ ನಷ್ಟಗಳು ಜಾಸ್ತಿ ಎಂಬುವುದನ್ನು ತಾಲೂಕಿನ ಜನ ಒತ್ತಿ ಒತ್ತಿ ಹೇಳಿದ್ದಾರೆ. 

ಪ್ರತಿಭಟನೆಗೆ ಮತ್ತು ಅದರ ಪ್ರಚಾರಕ್ಕೆ ಹಲವಾರು ದಾರಿಗಳಿರುವಾಗ ಜನರಿಗೆ ಮತ್ತು ಅಭಿವೃದ್ಧಿಗೆ ಮಾರಕವಾಗಿರುವ ಬಂದ್ ಕರೆ ಎಂದಿಗೂ ಸರಿ ಅಲ್ಲ ಎಂಬ ಸ್ಪಷ್ಟ ಅಭಿಪ್ರಾಯವನ್ನು ತಾಲೂಕಿನ ಜನ ವ್ಯಕ್ತಪಡಿಸಿದ್ದಾರೆ. ಬಲಾತ್ಕಾರದ ಬಂದ್‌ಗೆ ಕರೆ ಕೊಡುವವರು ತೊಂದರೆಗೊಳಗಾದವರಿಗೆ, ನಷ್ಟ ಹೊಂದಿದವರಿಗೆ ಪರಿಹಾರ ಕೊಡಬೇಕೆಂದು ಕೋರ್ಟ್ ಅಭಿಪ್ರಾಯ ನೀಡಿದೆ. ಹೀಗಿದ್ದರೂ ರಾಜಕೀಯ ನಾಯಕರು, ಸಂಘಟನೆಗಳು ತಮಗೆ ಅನುಕೂಲವಾಗುವಾಗ ಬಂದ್ ಕರೆಯನ್ನು ವಿರೋಧಿಸುವುದು, ಪ್ರಯೋಜನ ಎಂದಾದಾಗ ಬಂದ್‌ಗೆ ಕರೆ ಕೊಡುವುದನ್ನು ಮಾಡುತ್ತಿರುವುದು ದುರಂತವೇ ಸರಿ. ಜನಾಭಿಪ್ರಾಯವೇ ಅದಕ್ಕೆ ಚಿಕಿತ್ಸೆಯನ್ನು ನೀಡಿ ಸರಿಪಡಿಸಬೇಕು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.