Breaking News

ಡಾ| ಪ್ರಿಯ ಶರತ್‌ರಿಗೆ ಸೌಂದರ್ಯ ಸ್ಪರ್ಧೆ ಕಿರೀಟ

Advt_Headding_Middle
Advt_Headding_Middle

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಡಾ. ಪ್ರಿಯ ಶರತ್‌ರವರು ೨೦೧೮ನೇ ಸಾಲಿನ ಮಿಸ್ಸಸ್ ಇಂಡಿಯಾ ಗ್ಯಾಲಕ್ಸಿ ಸೌಂದರ್ಯ ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್‍ಸ್ ಅಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.


ವಿವಾಹಿತ ಮಹಿಳೆಯರಲ್ಲಿ ಅಡಗಿರುವ ಸೌಂದರ್ಯ ಮತ್ತು ಇತರ ಸುಪ್ತ ಪ್ರತಿಭೆಗಳನ್ನು ಪ್ರತಿಬಿಂಬಿಸಲು ಇತ್ತೀಚೆಗೆ ದೆಹಲಿಯಲ್ಲಿ ಗಿನ್ನಿ ಮತ್ತು ಗಗನ್ ಕಪೂರ್ ನೇತೃತ್ವದಲ್ಲಿ ಸೌಂದರ್ಯ ಸ್ಪರ್ಧೆ ಕಿರೀಟ ಮಿಸ್ಸಸ್ ಇಂಡಿಯಾ ಗ್ಯಾಲಕ್ಸಿ-೨೦೧೮ ರ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿದ್ದು, ಅದರಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು ೨೦,೦೦೦ ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು.

ಇದರಲ್ಲಿ ೪೧ ಮಂದಿ ಆಯ್ಕೆಯಾದರೆ, ಅಂತಿಮವಾಗಿ ಡಾ. ಪ್ರಿಯ ಇವರು ಕೊನೆಯ ಮೂರು ಮಹಿಳಾ ಸ್ಪರ್ಧೆಗಳಲ್ಲಿ ಒಬ್ಬರಾಗಿ ಸೆಕೆಂಡ್ ರನ್ನರ್‍ಸ್ ಅಪ್ ಕಿರೀಟ ತಮ್ಮದಾಗಿಸಿಕೊಂಡರು. ಈ ಯಶಸ್ವಿಯ ಜೊತೆಗೆ ಇವರಿಗೆ `ಮಿಸ್ಸಸ್ ಸೋಷಿಯಲ್ ಐಕಾನ್` ಮತ್ತು `ಮಿಸ್ಸಸ್ ಡೈನಾಮಿಕ್ ಕ್ರೌನ್ಸ್ `ಎಂಬ ನಾಮಪಟ್ಟಿಯ ಬಿರುದು ಲಭಿಸಿದೆ. ಡಾ. ಪ್ರಿಯರವರು ವೈದ್ಯಕೀಯ ಕ್ಷೇತ್ರದಲ್ಲಿ ಸ್ಕಿನ್ ಸ್ಪೆಶಲಿಸ್ಟ್ (ಚರ್ಮ ರೋಗ ತಜ್ಞೆ) ಆಗಿ ಪ್ರಸ್ತುತ ಬೆಂಗಳೂರಿನ ಖ್ಯಾತ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ಶರತ್ ಕೂಡ ವೈದ್ಯರಾಗಿದ್ದಾರೆ. ಮಗ ಅನುಜ್ ೭ನೇ ತರಗತಿ ಕಲಿಯುತ್ತಿದ್ದಾನೆ. ಇವರು ಸುಳ್ಯ ತಾಲೂಕಿನ ಆಲೆಟ್ಟಿಯ ಕೂಟೇಲಿನವರಾಗಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಬಿದಿರು ಮಂಡಳಿ ಅಧ್ಯಕ್ಷ ಡಾ.ಕೆ.ಸುಂದರ್ ನಾಯ್ಕ್ ಹಾಗೂ ಶ್ರೀಮತಿ ಜ್ಯೋತಿ ದಂಪತಿಯ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.