ಆರ್.ಟಿ.ಸಿ.ಗಾಗಿ ಜನರ ಸರತಿ ಸಾಲು – ಕೊಳೆರೋಗಕ್ಕೆ ಅರ್ಜಿ 15 ನೇ ತಾರೀಕಿನೊಳಗೇ ಕೊಡಬೇಕಾಗಿಲ್ಲ:ತಹಶೀಲ್ದಾರ್ ಸ್ಪಷ್ಟನೆ

Advt_Headding_Middle
Advt_Headding_Middle

ಅಡಿಕೆಗೆ ಕೊಳೆರೋಗ ಬಾಧಿಸಿ ಶೇ.6೦ರಿಂದ 9೦ರ ವರೆಗೆ ಬೆಳೆ ನಷ್ಟ ಸುಳ್ಯ ತಾಲೂಕಿನಲ್ಲಿ ಆಗಿರುವ ಹಿನ್ನೆಲೆಯಲ್ಲಿ ಕೃಷಿಕರ ಒತ್ತಾಯಕ್ಕೆ ಸರಕಾರ ಸ್ಪಂದಿಸಿ ಬೆಳೆನಷ್ಟದ ಸಮೀಕ್ಷೆ ಆರಂಭಗೊಂಡಿದೆ. ಕಂದಾಯ ಇಲಾಖೆಯವರು ಮತ್ತು ತೋಟಗಾರಿಕಾ ಇಲಾಖೆಯವರು ಬೆಳೆ ನಷ್ಟದ ಸಮೀಕ್ಷೆ ನಡೆಸುತ್ತಿದ್ದು ಸೆಪ್ಟೆಂಬರ್ ೧೦ ಕ್ಕೆ ಸಮೀಕ್ಷೆ ಮುಗಿಸಿ ಅವರು ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದ್ದಾರೆ.


ಇದರ ನಡುವೆ ಕೊಳೆರೋಗಕ್ಕೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕೆಂಬ ದೃಷ್ಠಿಯಿಂದ ಆರ್.ಟಿ.ಸಿ. ಗಾಗಿ ತಾಲೂಕು ಕಚೇರಿಯಲ್ಲಿ ನೂರಾರು ಮಂದಿ ಸರತಿಯ ಸಾಲಲ್ಲಿ ನಿಲ್ಲ ತೊಡಗಿದ್ದಾರೆ. ಆದರೆ ಈ ರೀತಿ ಕ್ಯೂ ನಿಂತು ಆರ್‌ಟಿಸಿ ಪಡೆದು ಅರ್ಜಿ ಸಲ್ಲಿಸುವ ಅಗತ್ಯವಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ದಾಖಲೆ ಸಮೇತ ಸೆ.೧೫ರೊಳಗೆ ಅರ್ಜಿ ಕೊಡಿ ಎಂದು ಹೇಳುವವರೂ ಅಧಿಕಾರಿಗಳೇ -ಬೇಡ ಅರ್ಜಿಗೆ ಅಜೆಂಟ್ ಮಾಡಬೇಕಾಗಿಲ್ಲ ಎಂದು ಹೇಳುವವರೂ ಅಧಿಕಾರಿಘಲೇ ಎಂಬಂತಾಗಿದೆ. ವಿದೆಯೇ ಎಂಬ ಜಿಜ್ಞಾಸೆ ಮುಡಿದೆ. ಬೆಳೆನಷ್ಟದ ಸಮೀಕ್ಷೆ ನಡೆಸ ಬಳಿಕ ನೀಡಲಾಗುವ ವರದಿಯ ಆಧಾರದಲ್ಲಿ ಸರಕಾರ ಪರಿಹಾರ ವಿತರಣೆಗೆ ಹಣ ಮಂಜೂರು ಮಾಡಬೇಕು. ಮಂಜೂರಾದ ಹಣವನ್ನು ಪಡೆಯಬೇಕಾದರೆ ಅರ್ಜಿ ಸಲ್ಲಿಸಬೇಕು. ಆದರೆ ಬೆಳೆನಷ್ಟದ ಮಾಹಿತಿಯನ್ನು ಸರಕಾರಕ್ಕೆ ತಿಳಿಸಲು ೧೫ನೇ ತಾರೀಕಿನೊಳಗೆ ಅರ್ಜಿ ಸಲ್ಲಿಸುವಾಗ ಆರ್.ಟಿ.ಸಿ. ಮತ್ತು ಆಧಾರ್ ಕಾರ್ಡನ್ನು ಕೊಡಲು ತೋಟಗಾರಿಕಾ ಇಲಾಖೆಯವರು ಹಾಗೂ ಕಂದಾಯ ಇಲಾಖೆಯವರು ಮೌಖಿಕ ಸೂಚನೆ ನೀಡಿದ ಕಾರಣ ರೈತರು ತಾಲೂಕು ಕಚೇರಿಯ ಕಿಯೋಸ್ಕ್ ಕೇಂದ್ರದಲ್ಲಿ ಆರ್.ಟಿ.ಸಿ ಗಾಗಿ ಕ್ಯೂ ನಿಲ್ಲುವಂತಾಗಿದೆ.

ನೂಕುನುಗ್ಗಲು ಅಗತ್ಯವಿಲ್ಲ : ಈ ಬಗ್ಗೆ ತಹಶೀಲ್ದಾರ್ ಕುಂಞಮ್ಮರನ್ನು ಸಂಪರ್ಕಿಸಿ ವಿಚಾರಿಸಿದಾಗ “ಅರ್ಜಿ ಸಲ್ಲಿಸಲು ಅಜೆಂಟು ಮಾಡಬೇಕಾಗಿಲ್ಲ. ಸೆ.೧೦ನೇ ತಾರೀಕಿನೊಳಗೆ ನಾವು ಬೆಳೆನಷ್ಟದ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಕೊಡುತ್ತೇವೆ. ಸೆ.೧೫ನೇ ತಾರೀಕಿನೊಳಗೆ ನಾವು ಬೆಳೆನಷ್ಟದ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ ಕೊಡುತ್ತೇವೆ. ಸೆ.೧೫ರ ಒಳಗೆ ಅರ್ಜಿ ಕೊಡಿ ಎಂದು ಹೇಳಿರುವುದು ಎಲ್ಲರೂ ಬೇಗ ಕೊಡುವಂತಾಗಲಿ ಎಂಬ ಕಾರಣಕ್ಕಾಗಿಯೇ ಹೊರತು, ನಂತರ ಕೂಡಾ ಅರ್ಜಿ ಸಲ್ಲಿಸಬಹುದು“ ಎಂದು ಹೇಳಿದರು.

ಆರ್.ಟಿ.ಸಿ. ಪಡೆಯಲು ಗ್ರಾಮ ಪಂಚಾಯತ್‌ಗಳು ಬಾಪೂಜಿ ಕೇಂದ್ರಗಳಲ್ಲಿ ವ್ಯವಸ್ಥೆ ಇದ್ದರೂ ತಾಂತ್ರಿಕ ಸಮಸ್ಯೆಯ ಕಾರಣದಿಂದ ಅಲ್ಲಿ ಆರ್.ಟಿ.ಸಿ. ಸಿಗುತ್ತಿಲ್ಲ. ಆದ್ದರಿಂದ ಜನರು ತಾಲೂಕು ಕಚೇರಿಯ ಕಿಯೋಸ್ಕ್ ಕೇಂದ್ರದಲ್ಲಿ ದಿನಗಟ್ಟಲೆ ಸರತಿಯ ಸಾಲಲ್ಲಿ ನಿಲ್ಲ ತೊಡಗಿದ್ದಾರೆ. ಪಡಸಾಲೆಯಲ್ಲಿ ಆರ್.ಟಿ.ಸಿ. ಕೊಡಬೇಕಾದರೆ ಅಲ್ಲಿ ಸಾಫ್ಟ್‌ವೇರ್. ಆದ್ದರಿಂದ ಒಂದೇ ಕಡೇ ಆರ್.ಟಿ.ಸಿ. ಪಡೆಯಲು ದಿನಗಟ್ಟಲೆ ಕಾಯಬೇಕಾಗುತ್ತದೆ. ಖಾಸಗಿ ಸೈಬರ್‌ಗಳಲ್ಲಿ ಆರ್.ಟಿ.ಸಿ. ದೊರೆಯುತ್ತದೆ. ಆದರೆ ಅಲ್ಲಿ ದರ ಹೆಚ್ಚಾಗುತ್ತದೆ ಎಂದು ಜನ ಇಲಿಯೇ ಕಾದು ನಿಲ್ಲುತ್ತಾರೆ. ಸೆ.೭ರಂದು ರಾತ್ರಿ ೮ ಗಂಟೆಯ ವರೆಗೆ ಆರ್.ಟಿ.ಸಿ. ಕೊಡಲಾಯಿತು. ಶನಿವಾರ ರಜೆ ಇದ್ದರೂ ಆರ್.ಟಿ.ಸಿ. ಕೊಟ್ಟಿದ್ದಾರೆ. ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ಆರ್.ಟಿ.ಸಿ. ಸಿಗುವಂತಾದರೆ ಜನರಿಗೆ ಸಮಯವೂ ಉಳಿಯುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.