Breaking News

ಎನ್ನೆಂಸಿ: ಯುವ ರೆಡ್ ಕ್ರಾಸ್ ಘಟಕದಿಂದ ಜಿನೇವಾ ಒಪ್ಪಂದ ದಿನಾಚರಣೆ

Advt_Headding_Middle
Advt_Headding_Middle

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ಜಿನೇವಾ ಒಪ್ಪಂದ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.

ಅಂತಾರಾಷ್ಟ್ರೀಯ ಸಂಸ್ಥೆ ರೆಡ್‌ಕ್ರಾಸ್‌ನ ಒಪ್ಪಂದಗಳಲ್ಲಿ ಜಿನೇವಾ ಒಪ್ಪಂದ ಮುಖ್ಯವಾದುದು. ಯುದ್ಧ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತೊಂದರೆಗಳಾದಾಗ ಜಾತಿ, ಮತ, ದೇಶ, ಭಾಷೆ ಮರೆತು ಸಹಾಯ ಮಾಡಲು ಹಲವು ರಾಷ್ಟ್ರಗಳ ನಡುವೆ ನಡೆದುದು ಜಿನೇವಾ ಒಪ್ಪಂದ. ಆ ನಿಟ್ಟಿನಲ್ಲಿ ಪ್ರಸ್ತುತ ವರ್ಷ ರೆಡ್‌ಕ್ರಾಸ್‌ನ ಧ್ಯೇಯೋದ್ದೇಶಕ್ಕೆ ಬದ್ಧವಾಗಿ ಕೊಡಗಿನಲ್ಲಿ ಅನಿರೀಕ್ಷಿತವಾಗಿ ಸಂಭವಿಸಿದ ಜಲಪ್ರಳಯ ಮತ್ತು ಭೂಕುಸಿತದಿಂದಾಗಿ ಸಂಕಷ್ಟಕ್ಕೀಡಾಗಿ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದ ಜನರಿಗೆ ಕಾಲೇಜಿನ ರೆಡ್ ಕ್ರಾಸ್ ವತಿಯಿಂದ ಜಿನೇವಾ ಒಪ್ಪಂದ ದಿನಾಚರಣೆ ಪ್ರಯುಕ್ತ ಅಕ್ಕಿ, ತೆಂಗಿನಕಾಯಿ, ತರಕಾರಿ, ಬ್ರೆಡ್, ಅವಲಕ್ಕಿ, ಬಟ್ಟೆ ಇತ್ಯಾದಿಗಳನ್ನು ಸಂಗ್ರಹಿಸಿ ನೀಡಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಗಿರಿಧರ ಗೌಡ ಕೆ, ದ.ಕ ಜಿಲ್ಲಾ ರೆಡ್ ಕ್ರಾಸ್‌ನ ವಿಪತ್ತು ನಿರ್ವಹಣಾ ವಿಭಾಗದ ಚಯರ್‌ಮನ್ ವೇಣುಶರ್ಮ, ದ.ಕ ಜಿಲ್ಲಾ ಯುವ ರೆಡ್‌ಕ್ರಾಸ್‌ನ ಮಾಜಿ ಜಿಲ್ಲಾ ಸಂಯೋಜಕ ಸಂತೋಷ ಪೀಟರ್ ಡಿ’ಸೋಜ, ಕಾಲೇಜು ಯುವ ರೆಡ್‌ಕ್ರಾಸ್ ಘಟಕ ಕಾರ್ಯಕ್ರಮಾಧಿಕಾರಿ ಡಾ| ಅನುರಾಧಾ ಕುರುಂಜಿ, ಸದಸ್ಯರಾದ ಸ್ಮಿತಾ, ಚಿಂತನಾ, ಕಾವ್ಯಶ್ರೀ, ಮೇಘಾ, ರಶ್ಮಿ, ಶ್ರವಣ್ ಎನ್ ಕೆ, ಅನೀಶ್ ಟಿ ಹೆಚ್, ಶ್ರೇಯಸ್, ಭುವನೇಂದ್ರ, ತೇಜಸ್, ಶರಣ್, ವಿಷ್ಣುಪ್ರಸನ್ನ, ಬ್ರಿಜೇಶ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.