ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ

Advt_Headding_Middle
Advt_Headding_Middle
Advt_Headding_Middle

ಮಾಂಸಾಹಾರಿಗಳಿಗೆ ಹೆಚ್ಚು ಇಷ್ಟವಾಗುವಂತಹ ಸಮುದ್ರ ಆಹಾರದಲ್ಲಿ ಏಡಿ ಕೂಡ ಒಂದು. ಇದರಿಂದ ಬಗೆಬಗೆಯ ಖಾದ್ಯವನ್ನು ತಯಾರಿಸಿಕೊಂಡು ತಿನ್ನುವರು. ಸಮುದ್ರದಲ್ಲಿ ಏಡಿಗಳು ಸಿಗುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಊರಿನ ಕೆಲವೊಂದು ಹಲ್ಲ, ತೋಡು ಇತ್ಯಾದಿಗಳಲ್ಲಿ ಸಿಗುವಂತಹ ಏಡಿಯ ರುಚಿಯೇ ಬೇರೆ. ಏಡಿ ತುಂಬಾ ರುಚಿಕರ ಮಾತ್ರವಲ್ಲದೆ, ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕೂಡ ಇದೆ. ಏಡಿ ಮಾಂಸದಲ್ಲಿ ಪ್ರಮುಖವಾಗಿ ಕೊಬ್ಬು, ಪೋಷಕಾಂಶ ಮತ್ತು ಖನಿಜಾಂಶಗಳು ಇವೆ.

ಏಡಿ ಮಾಂಸವು ಕಣ್ಣಿನ ಆರೋಗ್ಯ, ಹೃದಯದ ಆರೋಗ್ಯ ಮತ್ತು ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಪೋಷಕಾಂಶ ತಜ್ಞರು ವಾರದಲ್ಲಿ ಎರಡು ಅಥವಾ ಮೂರು ಸಲ ಏಡಿ ತಿನ್ನಲು ಸಲಹೆ ಮಾಡುತ್ತಾರೆ. ಶೇ.45ರಷ್ಟು ಏಡಿಯ ದೇಹವನ್ನು ತಿನ್ನುವಂತಹ ವ್ಯಕ್ತಿಗಳಲ್ಲಿ ದೇಹವು ಒಳಗಿನಿಂದಲೇ ತುಂಬಾ ಬಲಗೊಳ್ಳುವುದು. ಏಡಿ ಮಾಂಸ ತಿನ್ನುವುದರಿಂದ ಹೃದಯಾಘಾತದ ಸಮಸ್ಯೆಯು ಕಡಿಮೆಯಾವುದು ಮತ್ತು ದೇಹಕ್ಕೆ ಬೇಕಾಗಿವು ಶಕ್ತಿ ಒದಗಿಸುವುದು.

ಏಡಿ ಮಾಂಸದಲ್ಲಿ ಇರುವಂತಹ ಪೋಷಕಾಂಶಗಳು ಯಾವುದು?

100 ಗ್ರಾಂ ಏಡಿ ಮಾಂಸದಲ್ಲಿ 59 ಮಿ.ಗ್ರಾಂ. ಕ್ಯಾಲ್ಸಿಯಂ, 0.8 ಮಿ.ಗ್ರಾಂ ಕಬ್ಬಿನಾಂಶ, 1.5 ಗ್ರಾ ಕೊಬ್ಬು, 19ಗ್ರಾಂ. ಪ್ರೋಟೀನ್, 29 ಐಯು ವಿಟಮಿನ್ ಎ, 7.6 ಮಿ.ಗ್ರಾಂ ವಿಟಮಿನ್ ಸಿ ಮತ್ತು 9.78 ಎಂಸಿಜಿ ವಿಟಮಿನ್ ಬಿ12 ಇದೆ. ಇದರಲ್ಲಿ ಪೋಷಕಾಂಶಗಳಾಗಿರುವ ತಾಮ್ರ, ಒಮೆಗಾ 3 ಕೊಬ್ಬಿನಾಮ್ಲ, ಫೋಸ್ಪರಸ್, ಸೆಲೆನಿಯಂ, ವಿಟಮಿನ್ ಬಿ12 ಮತ್ತು ಸತು ಇದೆ.

ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ 
ತೂಕ ಕಳೆದುಕೊಳ್ಳಲು ಸಹಕಾರಿಏಡಿ ಮಾಂಸದಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ ಮತ್ತು ಇದರ 100 ಗ್ರಾಂ ಮಾಂಸದಲ್ಲಿ ಕೇವಲ 1.5 ಗ್ರಾಂ ಕೊಬ್ಬು ಮಾತ್ರ ಇದೆ. ಇತರ ಕ್ಯಾಲರಿಗಳು ಪ್ರೋಟೀನ್ ನಿಂದ ಬರುವುದು. ಇದರಿಂದ ತೂಕ ಇಳಿಸಿಕೊಳ್ಳಲು ಬಯಸುವವರು ಏಡಿ ಮಾಂಸ ಸೇವನೆ ಮಾಡಬಹುದು.

ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ 
ಕಣ್ಣಿನ ದೃಷ್ಟಿ ಸುಧಾರಣೆ

ಏಡಿ ಮಾಂಸದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಎ ಇದ್ದು, ಕಣ್ಣಿನ ದೃಷ್ಟಿ ಸುಧಾರಣೆ ಮಾಡುವುದು. ವಿಟಮಿನ್ ಎಯಲ್ಲಿ ಕೆಲವೊಂದು ನೈಸರ್ಗಿಕ ಅಂಶವಾಗಿರುವಂತಹ ರೆಟಿನೊಲ್, ರೆಟಿನಾಲ್, ರೆಟಿನೊಯಿಕ್ ಆಮ್ಲ, ಅಂಡಬೆಟಾ ಕ್ಯಾರೋಟಿನ್ ಅಂಶಗಳು ಕಣ್ಣಿನ ಆರೋಗ್ಯಕ್ಕೆ ನೆರವಾಗುವುದು ಮತ್ತು ಇದು ಸ್ನಾಯುಗಳು ದುರ್ಬಲಗೊಳ್ಳುವುದು ಮತ್ತು ಕ್ಯಾಟರ್ಯಾಕ್ಟ್ ನ್ನು ತಡೆಯುವುದು.

ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ 
ಕೋಶಕ್ಕೆ ಹಾನಿಯಾಗುವುದನ್ನು ತಡೆಯುವುದು

ಏಡಿ ಮಾಂಸದಲ್ಲಿ ಪ್ರಮುಖವಾಗಿ ಕಂಡುಬರುವಂತಹ ಸೆಲೆನಿಯಂ ಎನ್ನುವ ಖನಿಜಾಂಶವು ಕೋಶಗಳು ಮತ್ತು ಅಂಗಾಂಶಗಳು ಹಾನಿಯಾಗದಂತೆ ತಡೆಯುವುದು. ಥೈರಾಯ್ಡ್ ಗ್ರಾಂಥಿಗಳು ಆಕ್ಸಿಡೇಟಿವ್ ನಿಂದ ಹಾನಿಯಾಗುವುದನ್ನು ತಪ್ಪಿಸುವ ಸೆಲೆನಿಯಂ ಥೈರಾಯ್ಡ್ ಹಾರ್ಮೋನುಗಳು ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು. ಇದರಿಂದ ಥೈರಾಯ್ಡ್ ಹಾರ್ಮೋನು ಸರಿಯಾಗಿ ಕಾರ್ಯನಿರ್ವಹಿಸುವುದು.

ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ 
ಹೃದಯದ ರಕ್ಷಣೆ

ಏಡಿ ಮಾಂಸದಲ್ಲಿ ಒಮೆಗಾ 3 ಕೊಬ್ಬಿನಾಮ್ಲ, ಸೆಲೆನಿಯಂ ಮತ್ತು ತಾಮ್ರವು ಇದ್ದು, ಕೆಟ್ಟ ಕೊಲೆಸ್ಟ್ರಾಲ್ ನ್ನು ಇದು ತಗ್ಗಿಸುವುದು. ಕೆಟ್ಟ ಕೊಲೆಸ್ಟ್ರಾಲ್ ನಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಕಂಡುಬರಬಹುದು. ಆಹಾರದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಕ್ಯಾಲರಿ ಇರುವ ಕಾರಣದಿಂದಾಗಿ ಹೃದಯಸಂಬಂಧಿ ರೋಗಗಳು ಇರುವವರಿಗೆ ಆಯ್ಕೆ ತುಂಬಾ ಕಡಿಮೆ ಇರುವುದು. ಏಡಿ ಮಾಂಸದಲ್ಲಿ ಅದ್ಭುತವಾಗಿರುವ ಪೋಷಕಾಂಶಗಳು ಇರುವ ಕಾರಣದಿಂದಾಗಿ ಇದು ಹೃದಯದ ಕಾಯಿಲೆ ಇರುವವರಿಗೆ ಒಳ್ಳೆಯ ಆಯ್ಕೆ. ಪರಿಷ್ಕರಿಸಿದ ಕೊಬ್ಬಿನ ಪ್ರಮಾಣವು ಇದರಲ್ಲಿ ಕಡಿಮೆಯಾಗಿದೆ. ಏಡಿ ಮಾಂಸದಲ್ಲಿ ಇರುವಂತಹ ಸ್ಟೆರೊಲ್ಸ್ ಎನ್ನುವ ಅಂಶವು ಕೊಲೆಸ್ಟ್ರಾಲ್ ಹೀರಿಕೊಳ್ಳುವುದು ಮತ್ತು ಕೊಲೆಸ್ಟ್ರಾಲ್ ಸ್ರವಿಸುವಿಕೆ ವೃದ್ಧಿಸುವುದು ಎಂದು ಅಧ್ಯಯನಗಳು ಕಂಡುಕೊಂಡಿವೆ.

ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ 
ಪ್ರತಿರೋಧಕ ಶಕ್ತಿ ಬಲಗೊಳಿಸುವುದು

ದೇಹದಲ್ಲಿನ ಪ್ರತಿರೋಧಕ ಶಕ್ತಿಯು ದುರ್ಬಲವಾಗಿದ್ದರೆ ಆಗ ಹಲವಾರು ಕಾಯಿಲೆಗಳು, ಸೋಂಕು ದೇಹವನ್ನು ಆವರಿಸಿಕೊಳ್ಳುವುದು. ಪ್ರತಿರೋಧಕ ಶಕ್ತಿ ವೃದ್ಧಿಸಲು ನೀವು ಏಡಿ ತಿನ್ನಬಹುದು. ಇದರಲ್ಲಿ ಇರುವಂತಹ ಸೆಲೆನಿಯಂ ಅಂಶವು ಪ್ರತಿರೋಧಕ ಶಕ್ತಿ ಉತ್ತೇಜಿಸುವುದು ಮತ್ತು ಪ್ರತಿರೋಧಕ ಶಕ್ತಿ ಮೇಲೆ ದಾಳಿ ಮಾಡುವಂತಹ ಫ್ರಿ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಇದರಿಂದ ಪ್ರತಿರೋಧಕ ಶಕ್ತಿ ಬಲಗೊಳ್ಳುವುದು.

ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ 
ಮಾನಸಿಕ ಆರೋಗ್ಯಕ ವೃದ್ಧಿ

ಏಡಿ ಮಾಂಸದಲ್ಲಿ ಪ್ರೋಟೀನ್, ಸತು ಮತ್ತು ಒಮೆಗಾ3 ಕೊಬ್ಬಿನಾಮ್ಲಗಳು ಇದ್ದು, ಏಕಾಗ್ರತೆ ಹೆಚ್ಚಿಸುವುದು. ಕೇಂದ್ರ ನರ ವ್ಯವಸ್ಥೆಯಲ್ಲಿ ಕಂಡುಬರುವಂತಹ ಲ್ಯಾಪಿಡ್ ಸಮೃದ್ಧವಾಗಿರುವಂತಹ ಕೊಬ್ಬಿನಾಮ್ಲವಾಗಿರುವ ಮೆಲಿನ್ ಕೇಂದ್ರ ನರ ವ್ಯಸ್ಥೆ ಮತ್ತು ನರ ವ್ಯವಸ್ಥೆಯನ್ನು ಸುಧಾರಿಸುವುದು. ಇದು ನರಗಳಲ್ಲಿ ಇರುವಂತಹ ಪದರ ಮತ್ತು ಉರಿಯೂತ ಶಮನಗೊಳಿಸುವುದು.

ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ 
ಚರ್ಮ, ಕಣ್ಣು ಮತ್ತು ನರವ್ಯವಸ್ಥೆ ಕಾಪಾಡುವುದು

ರಿಬೊಫ್ಲಾವಿನ್ ನ್ನು ವಿಟಮಿನ್ ಬಿ2 ಎಂದು ಕರೆಯಾಗುವುದು. ಇದು ಕೊಬ್ಬಿನ ಸ್ಟಿರಾಯ್ಡ್ ಉತ್ಪತ್ತಿ, ಕೆಂಪುರಕ್ತಕಣ ಮತ್ತು ಚರ್ಮ, ಕಣ್ಣು ಹಾಗೂ ನರವ್ಯವಸ್ಥೆಯನ್ನು ಕಾಪಾಡಲು ಅತೀ ಅಗತ್ಯವಾಗಿರುವುದು. ಜೀರ್ಣಕ್ರಿಯೆ ವ್ಯವಸ್ಥೆಯಲ್ಲಿ ಕಬ್ಬಿನಾಂಶ ಹೀರಿಕೊಳ್ಳಲು ರಿಬೊಫ್ಲಾವಿನ್ ನೆರವಾಗುವುದು ಮತ್ತು ಪ್ರೋಟೀನ್, ಕೊಬ್ಬು ಮತ್ತು ಕಾರ್ಬ್ರೋಹೈಡ್ರೇಟ್ಸ್ ವಿಘಟಿಸಿ ದೇಹಕ್ಕೆ ಶಕ್ತಿ ಒದಗಿಸುವುದು.

ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ 
ಗಾಯ ಒಣಗಲು ನೆರವಾಗುವುದು

ಗಾಯಗಳು ಒಣಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಇದರಲ್ಲಿ ನಾವು ಸೇವಿಸುವಂತಹ ಆಹಾರ ಕೂಡ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಏಡಿ ಮಾಂಸದಲ್ಲಿ ಇರುವಂತಹ ಸತು, ವಿಟಮಿನ್ ಬಿ12 ಮತ್ತು ವಿಟಮಿನ್ ಸಿ ಗಾಯವು ಮಾಗಲು ನೆರವಾಗುವುದು. ಇದರಿಂದ ಹೊಸ ಅಂಗಾಂಶಗಳು ಬೆಳೆಯುವುದು.

ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ 
ಪ್ರೊಸ್ಟೇಟ್ ಕ್ಯಾನ್ಸರ್ ತಡೆಯುವುದು

ಏಡಿ ಮಾಂಸದಲ್ಲಿ ಇರುವಂತಹ ಸೆಲೆನಿಯಂ ಅಂಶವು ಕ್ಯಾಡಿಂ, ಅರ್ಸೆನಿಕ್, ಬೆಳ್ಳಿ ಮತ್ತು ಪಾದರಸದಿಂದ ಉಂಟಾಗಬಹುದಾದ ಪರಿಣಾಮವನ್ನು ನಿವಾರಣೆ ಮಾಡುವುದು. ಇದು ಕ್ಯಾನ್ಸರ್ ಕೋಶಗಳನ್ನು ತೆಗೆಯಲು ವೇಗವಾಗಿ ನೆರವಾಗುವುದು ಮತ್ತು ಗಡ್ಡೆಗಳು ಬೆಳೆಯುವುದನ್ನು ನಿಧಾನಗೊಳಿಸುವುದು. ಏಡಿ ಮಾಂಸದಲ್ಲಿ ಇರುವಂತಹ ಒಮೆಗಾ3 ಕೊಬ್ಬಿನಾಮ್ಲದಂತಹ ಆಹಾರ ಸೇವನೆಯಿಂದ ಪ್ರೊಸ್ಟೇಟ್ ಕ್ಯಾನ್ಸರ್ ನ್ನು ತಡೆಯಬಹುದು ಎಂದು ಅಧ್ಯಯನಗಳು ಹೇಳಿವೆ.

ಏಡಿ ಮಾಂಸ ತಿಂದು ಆರೋಗ್ಯ ಕಾಪಾಡಿ 
ಇನ್ಸುಲಿನ್ ಮಟ್ಟ ನಿಯಂತ್ರಿಸುವುದು

ಏಡಿಯಲ್ಲಿ ಚೊರೊಮಿಮ್ ಎನ್ನುವ ಅಂಶವು ಅಧಿಕವಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ತಗ್ಗಿಸುವುದು, ಇನ್ಸುಲಿನ್ ಮಟ್ಟವನ್ನುಸಮತೋಲನದಲ್ಲಿಡುವುದು. ಇದು ಟೈಪ್ 2 ಮಧುಮೇಹಿಗಳಿಗೆ ನೆರವಾಗುವುದು. ನೀವು ಮಧುಮೇಹಿಯಾಗಿದ್ದರೆ ಆಗ ನೀವು ಏಡಿ ಸೇವಿಸಲೇಬೇಕು. 
ಸೂಚನೆ: ಕೆಲವು ಜನರಿಗೆ ಇಂತಹ ಆಹಾರಗಳಿಂದ ಅಲರ್ಜಿ ಇರುವುದು. ಇದು ಹೊಟ್ಟೆನೋವು, ಬಾಯಿಯಲ್ಲಿ ಕಿರಿಕಿರಿ, ಮುಖ ಊದುವಿಕೆ, ತುಟಿಗಳು, ನಾಲಗೆ, ಕೈಬೆರಳುಗಳು ಮತ್ತು ಕೈಗಳು ಊದಿಕೊಳ್ಳಬಹುದು. ಲಘು 
ತಲೆನೋವು ಇತ್ಯಾದಿ ಕಾಣಿಸಬಹುದು. ನಿಮಗೆ ಅಲರ್ಜಿ ಇದ್ದರೆ ಏಡಿ ಸೇವಿಸಲೇಬೇಡಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.