Breaking News

ಸೆ.12ರಿಂದ ಸೆ.14 ಹರಿಹರೇಶ್ವರ ಸನ್ನಿಧಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

Advt_Headding_Middle
Advt_Headding_Middle
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹರಿಹರ ಪಲ್ಲತಡ್ಕ ಇದರ ೯ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.12 ರಿಂದ ಸೆ.14 ರ ವರೆಗೆ ನಡೆಯಲಿದೆ. ಸೆ.12ರ ಬೆ. ಶ್ರೀ ಗೌರಿ ಮೂರ್ತಿ ಪ್ರತಿಷ್ಠೆ ನಡೆದು, ಗೌರಿ ಪೂಜೆ ನಡೆಯಲಿದೆ.
ಸಂಜೆ ಶ್ರೀ ಮಹಾಗಣಪತಿ ಭಜನಾ ಮಂಡಳಿ ನವಗ್ರಾಮ ಐನೆಕಿದು ಇವರಿಂದ ಭಜನಾ ಕಾರ್ಯಕ್ರಮ ನಡೆದು, ರಾತ್ರಿ ೮.೩೦ ರಿಂದ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ ಇದರ ವಿದ್ಯಾರ್ಥಿಗಳಿಂದ ತುಳುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸೆ.೧೩ ರ ಬೆಳಗ್ಗೆ ೧೦.೪೫ ಕ್ಕೆ ಶ್ರೀ ಗಣಪತಿಮೂರ್ತಿ ಪ್ರತಿಷ್ಠೆ ನಡೆಯಲಿದ್ದು ನಂತರ ಗಣಪತಿ ಪೂಜೆ ನಡೆದು ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಸಂಜೆ ೬ ಗಂಟೆಗೆ ಷಣ್ಮುಖ ಭಜನಾ ಮಂಡಳಿ ಬಾಳುಗೋಡು, ಶ್ರೀ ಹರಿಹರೇಶ್ವರ ಭಜನಾ ಮಂಡಳಿ ದಾಸ ಸಾಹಿತ್ಯ ಪ್ರೊಜೆಕ್ಟ್ ತಿರುಪತಿ ತಿರುಮಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸೆ.೧೪ ಬೆಳಗ್ಗೆ ಸಾಮೂಹಿಕ ೧೦೮ ಕಾಯಿ ಗಣಪತಿ ಹವನ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನದಾನ ನಡೆಯಲಿದೆ.
ಅಪರಾಹ್ನ ೧ ಗಂಟೆಯಿಂದ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ನಾಸಿಕ್ ಬ್ಯಾಂಡ್ ಚೆಂಡೆ ವಾದನಗಳೊಂದಿಗೆ ಶ್ರೀ ಗೌರಿ ಮತ್ತು ಶ್ರೀ ಗಣೇಶ ದೇವರ ಮೆರವಣಿಗೆ ಹೊರಟು ಐನೆಕಿದು ನವಗ್ರಾಮ, ಐನೆಕಿದು ಶಾಲೆ, ಕೋಟೆ ಅಂಗಡಿ ವಠಾರ, ಶ್ರೀ ಉರಿಯಪ್ಪೇಶ್ವರ ದೇವಸ್ಥಾನ ವಠಾರ, ಬೆಟ್ಟುಮಕ್ಕಿ, ಬಾಳುಗೋಡು ಶಾಲಾ ವಠಾರ, ಬಸವನಗುಡಿ, ಅಕ್ಷರ ಕರಾವಳಿ ಕಲ್ಲೇಮಠ ಮುಂತಾದೆಡೆ ಸಂಚರಿಸಿ ಹರಿಹರ ಪೇಟೆಗೆ ಬಂದು  ಹರಿಹರೇಶ್ವರ ಸಂಗಮ ಕ್ಷೇತ್ರದಲ್ಲಿ ಮೂರ್ತಿ ವಿಸರ್ಜನೆ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.