ಸೆ.13 ಮತ್ತು 14: ಏನೆಕಲ್ಲಿನಲ್ಲಿ  ಶ್ರೀ ಗಣೇಶೋತ್ಸವ

Advt_Headding_Middle
Advt_Headding_Middle
ಶ್ರೀ ಆಧಿಶಕ್ತಿ ಭಜನಾ ಮಂದಿರ (ರಿ) ಯೇನೆಕಲ್ಲು,  ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಏನೆಕಲ್ಲು  ಇದರ ಆಶ್ರಯದಲ್ಲಿ ೧೧ ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.೧೩ ಮತ್ತು ಸೆ.೧೪ ರಂದು ಶ್ರೀ ಆಧಿಶಕ್ತಿ ಭಜನಾ ಮಂದಿರದಲ್ಲಿ ನಡೆಯಲಿದೆ.
ಸೆ. ೧೩ ರಂದು ಬೆಳಗ್ಗೆ ೯ ಗಂಟೆಗೆ ಗಣಪತಿ ಪ್ರತಿಷ್ಠೆ ನಡೆದು ನಂತರ ಗಣಪತಿ ಹೋಮ ನಡೆಯಲಿದೆ. ಸಂಜೆ ಗಂಟೆ ೭ ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ.೧೪ ರ ಬೆಳಗ್ಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ.  ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಅಪರಾಹ್ನ ಗಂಟೆ ೨ ರಿಂದ ಶ್ರೀ ಆಧಿಶಕ್ತಿ ಸಭಾಭವನದಿಂದ ಗಣೇಶ ವಿಗ್ರಹದ ಶೋಭಾಯಾತ್ರೆ ಹೊರಟು ಏನೆಕಲ್ಲು ಅಂಚೆ ಕಛೇರಿ ತನಕ ಸಾಗಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬಳಿ ನದಿಯಲ್ಲಿ ಜಲ ಸ್ಥಂಭನಗೊಳ್ಳಲಿದೆ. 
ವಿಶೇಷವಾಗಿ ಶೋಭಾಯಾತ್ರೆಯಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬಿಳಿನೆಲೆ ಇವರಿಂದ ಕುಣಿತ ಭಜನೆ ನಡೆಯಲಿದ್ದು ಯೇನೆಕಲ್ಲಿನ ಎಲ್ಲಾ ಭಜನಾ ತಂಡಗಳಿಂದ ಭಜನೆ ನಡೆಯಲಿದೆ.  

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.