Breaking News

ಮಡಪ್ಪಾಡಿ: ವಿವಿಧ ಸಂಘಗಳ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

Advt_Headding_Middle
Advt_Headding_Middle

ಯುವಕ ಮಂಡಲ ಮಡಪ್ಪಾಡಿ, ಮಂಜಶ್ರೀ ಯಕ್ಷಗಾನ ಕಲಾ ಸಂಘ ಮಡಪ್ಪಾಡಿ, ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ, ಉಜ್ವಲ ಮಹಿಳಾ ಮಂಡಲ ಮಡಪ್ಪಾಡಿ, ಶಾಲಾಭಿವೃದ್ಧಿ ಸಮಿತಿ ಮಡಪ್ಪಾಡಿ ಹಾಗೂ ಸಮಸ್ತ ಗ್ರಾಮಸ್ಥರ ಆಶ್ರಯದಲ್ಲಿ ಸೆ.೨ರಂದು ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಶ್ರೀಮತಿ ಆಶಾ ತಿಮ್ಮಪ್ಪ, ಜಿಲ್ಲಾ ಪಂಚಾಯತ್ ಸದಸ್ಯರು, ಗುತ್ತಿಗಾರು ಕ್ಷೇತ್ರ ಇವರು ಉದ್ಘಾಟಿಸಿ, ಮಕ್ಕಳಿಗೆ ಉತ್ತಮ ಸಂಸ್ಕೃತಿ ಸತ್ಚಾರಿತ್ರ್ಯಗಳನ್ನು ಕಲಿಸುವುದರಿಂದ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಮತ್ತು ಉತ್ತಮ ಭಾರತ ದೇಶ ಕಟ್ಟಲು ಸಾದ್ಯ ಎಂದರು. ಶ್ರೀ ಕರುಣಾಕರ ಪಾರೆಪ್ಪಾಡಿ, ಅಧ್ಯಕ್ಷರು, ಯುವಕ ಮಂಡಲ ಮಡಪ್ಪಾಡಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಕುಂತಳಾ ಕೇವಳ ಅಧ್ಯಕ್ಷರು, ಗ್ರಾಮ ಪಂಚಾಯತ್ ಮಡಪ್ಪಾಡಿ, ಶ್ರೀ ಚಂದ್ರಶೇಖರ ಪಾರೆಪ್ಪಾಡಿ, ಮುಖ್ಯೋಪಾಧ್ಯಾಯರು, ದ.ಕ.ಜಿ.ಪ್ರಾ.ಶಾಲೆ ಮಡಪ್ಪಾಡಿ, ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನಂತರ ಮಡಪ್ಪಾಡಿ ಗ್ರಾಮದ ಅಂಗನವಾಡಿ ಮಕ್ಕಳಿಗೆ, ಶಾಲಾ ಮಕ್ಕಳಿಗೆ ಹಾಗೂ ಪುರುಷರಿಗೆ, ಮಹಿಳೆಯರಿಗೆ ವಿವಿಧ ಸ್ಪರ್ಧೆ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಗಳ ವಿಜೆತರಿಗೆ ಬಹುಮಾನ ವಿತರಿಸಲಾಯಿತು. ಶ್ರೀಮತಿ ತುಳಸಿ ಕೇವಳ ಅಧ್ಯಕ್ಷರು, ಮಹಿಳಾ ಮಂಡಲ ಮಡಪ್ಪಾಡಿ ಇವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಯಂ.ಜಿ.ಲೋಕಯ್ಯ. ಅಧ್ಯಕ್ಷರು, ಮಂಜಶ್ರೀ ಯಕ್ಷಗಾನ ಕಲಾ ಸಂಘ ಮಡಪ್ಪಾಡಿ, ಶ್ರೀ ವಿನಯ ಕುಮಾರ್ ಮುಳುಗಾಡು, ಎ.ಪಿ.ಎಂ.ಸಿ.ಸದಸ್ಯರು, ಸುಳ್ಯ, ಶ್ರೀ ನಾಗೇಶ ಕುಚ್ಚಾಲ ಉಪಸ್ಥಿತರಿದ್ದರು, ಮಿಲನ್ ಬಾಳಿಕಳ ಹಾಗೂ ರಂಜಿತ್ ಅಂಬೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.