ಪೆರಾಜೆಯಲ್ಲಿ ತೆರೆದ ಬಾವಿ ಅನುದಾನದಲ್ಲಿ ಬಿಜೆಪಿ ಆಡಳಿತದಿಂದ ಸ್ವಜನ ಪಕ್ಷಪಾತ ಮತ್ತು ಅವ್ಯವಹಾರ : ವಲಯ ಕಾಂಗ್ರೆಸ್ ಆರೋಪ

Advt_Headding_Middle
Advt_Headding_Middle

ಪೆರಾಜೆಯಲ್ಲಿ ಸಾರ್ವಜನಿಕ ತೆರೆದ ಬಾವಿ ನಿರ್ಮಾಣದ ಅನುದಾನ ಕುರಿತಂತೆ ಬಿಜೆಪಿಯವರು ಸ್ವಜನ ಪಕ್ಷಪಾತ ಮತ್ತು ಅವ್ಯವಹಾರ ನಡೆಸಿದ್ದು, ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗುವುದೆಂದು ಪೆರಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೆರುಮುಂಡ ಮತ್ತು ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೂರಜ್ ಹೊಸೂರು ತಿಳಿಸಿದ್ದಾರೆ.


ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ಧೇಶೀಸಿ ಮಾತನಾಡಿದ ಅವರು ಈ ಆರೋಪ ಮಾಡಿದರು. ಸಾರ್ವಜನಿಕ ತೆರೆದ ಬಾವಿ ನಿರ್ಮಾಣದ ಅನುದಾನದಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ. ಈ ಅನುದಾನವನ್ನು ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿಯವರು ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಗುಳಂ ಮಾಡಿದ್ದಾರೆ. ಗ್ರಾಮದಲ್ಲಿ ನೀರಿಲ್ಲದೆ ಪರದಾಡುತ್ತಿರುವ ಹಲವು ಮನೆಗಳಿದ್ದರೂ ಸ್ವಜನ ಪಕ್ಷಪಾತ ಮತ್ತು ಅವ್ಯವಹಾರ ನಡೆಸಿರುವುದು ಖಂಡನೀಯ. ಇದರಲ್ಲಿ ತಾ.ಪಂ. ಸಿಬ್ಬಂದಿ ವರ್ಗ ಕೂಡಾ ಶಾಮೀಲಾಗಿದೆ.

ಅಶೋಕ್ ಪೆರುಮುಂಡ ಎಂಬವರಲ್ಲಿ ಕಳೆದ ೧೫-೨೦ ವರ್ಷಗಳ ಹಿಂದೆಯೇ ತೋಡಿದ ಬಾವಿ ಇದ್ದರೂ ಅದಕ್ಕೆ ಈ ಸಮಯದಲ್ಲಿ ಅನುದಾನ ನೀಡಲಾಗಿದೆ. ಪಂಚಾಯತ್ ಸದಸ್ಯ ಉದಯಚಂದ್ರ ಕುಂಬಳಚೇರಿ ಎಂಬವರಲ್ಲಿ ಬಾವಿಯೇ ಇಲ್ಲದಿದ್ದರೂ ಅಲ್ಲಿಗೆ ಅನುದಾನ ನೀಡಲಾಗಿದೆ. ಅನುದಾನ ಪಡೆಯಲು ಯೋಗ್ಯತೆ ಇರುವ ಹಲವು ಕುಟುಂಬಗಳು ಗ್ರಾಮದಲ್ಲಿದ್ದರೂ ಅವರಿಗೆ ಯಾವುದೇ ಅನುದಾನ ನೀಡಲಾಗಿಲ್ಲ ಎಂದು ಸುರೇಶ್ ಪೆರುಮುಂಡ ಹೇಳಿದರು. ಮಾಡದ ಉಳ್ಳಾಕ್ಲು ಬಳಿ ಒಂದು ಬಾವಿಯನ್ನು ನಾವೇ ಖರ್ಚು ಹಾಕಿ ತೆಗೆದಿದ್ದೆವು. ಅದರ ಹೆಸರಿನಲ್ಲೂ ಈಗ ಅನುದಾನ ನೀಡಲಾಗಿದೆ. ತಾ.ಪಂ. ಸದಸ್ಯರ, ಗ್ರಾ.ಪಂ. ಸದಸ್ಯರ ಮನೆಗಳಿಗೆ ಸರಕಾರಿ ಅನುದಾನದಲ್ಲಿ ಡಾಮರ್ ಹಾಕಲಾಗಿದೆ. ಇವರನ್ನು ಹೇಳುವವರು ಕೇಳುವವರೂ ಯಾರೂ ಇಲ್ಲ ಎಂಬಂತಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಲೋಕಾಯುಕ್ತಕ್ಕೂ ಬರೆಯುತ್ತೇವೆ ಎಂದು ಸುರೇಶ್ ಹೇಳಿದರು.

ಸೂರಜ್ ಹೊಸೂರು ಮಾತನಾಡಿ, ನಾವಿಂದು ಬಿಡುಗಡೆಗೊಳಿಸಿದ ದಾಖಲೆಗಳು 2014-15ರ ಸಾಲಿಗೆ ಸಂಬಂಧಪಟ್ಟದ್ದು, ಆ ಬಳಿಕವೂ ಅನೇಕ ಅವ್ಯವಹಾರ ನಡೆದಿದೆ. ಆ ಎಲ್ಲಾ ದಾಖಲೆಗಳನ್ನು ಮುಂದೆ ಹಂತ ಹಂತವಾಗಿ ಬಿಡುಗಡೆಗೊಳಿಸಲಿದ್ದೇವೆ. ಬಡವರ ಹೆಸರಿನಲ್ಲಿ ಅರ್ಜಿ ಪಡೆದು ಅನುದಾನವನ್ನು ಗುಳುಂ ಮಾಡುವ ಪ್ರವೃತ್ತಿ ಖಂಡನೀಯ ಎಂದರಲ್ಲದೆ,ನಮಗೆ ದಾಖಲೆಗಳು ಸಿಗುವಾಗ ತಡವಾಯಿತು. ಹೀಗಾಗಿ ಇನ್ನು ಮುಂದಿನ ಗ್ರಾಮ ಸಭೆಯಲ್ಲಿ ಈ ಕುರಿತು ಪ್ರಶ್ನಿಸುತ್ತೇವೆ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.