ಕುಕ್ಕೆ ದೇಗುಲಕ್ಕೆ ಸೇವಾ ಶಾಖೆಗಳಿಲ್ಲ

Advt_Headding_Middle
Advt_Headding_Middle


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಥವಾ ಶ್ರೀ ಸುಬ್ರಹ್ಮಣ್ಯ ದೇವರ ಹೆಸರಲ್ಲಿ ಯಾವುದೇ ಮಠ,ಮಂದಿರ ಅಥವಾ ಉಪ ಶಾಖೆಗಳಿಲ್ಲ. ದೇವಸ್ಥಾನದ ಬಗ್ಗೆ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳ ಮೂಲಕ ಕೆಲವರು ನೀಡುತ್ತಿರುವ ಅಸ್ಪಷ್ಟ, ಅಪೂರ್ಣ, ಅಧಾರ ರಹಿತ ಹೇಳಿಕೆಗಳ ಬಗ್ಗೆ ಯಾರೂ ಗೊಂದಲಕ್ಕೀಡಾಗಬಾರದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಹರಕೆಗಳನ್ನು ನೇರವಾಗಿ ದೇವಳಕ್ಕೆ ಸಲ್ಲಿಸಬೇಕು.ಕಾಣಿಕೆ, ದೇಣಿಗೆ ಬಗ್ಗೆ ದೇವಳದ ಕಚೇರಿ,ಮಾಹಿತಿ ಕೇಂದ್ರ,ಶಿಷ್ಟಾಚಾರ ಶಾಖೆ ಅಥವಾ ಇ ಮೇಲ್ ಹಾಗೂ ವೆಬೆ ಸೈಟ್ ಮೂಲಕ ಮಾಹಿತಿ ಪಡೆಯಬಹುದು.ಇನ್ನಿತರ ಮಧ್ಯವರ್ತಿಗಳ ಮೂಲಕ ವಂಚನೆಗೊಳಗಾದರೆ ದೇವಳದ ಆಡಳಿತ ಜವಾಬ್ದಾರಿಯಲ್ಲ.


ಕ್ಷೇತ್ರ ವಿಧಿ ಪ್ರಕಾರ ಸೇವೆ:

ದೇವಳದಲ್ಲಿ ನಡೆಯುವ ಪೂಜಾ ಪದ್ಧತಿಗಳು, ಪಂಚಪರ್ವಾದಿ ವಿಶೇಷ ಕಟ್ಟಳೆಗಳು ಹಾಗೂ ಇನ್ನಿತರ ಧಾರ್ಮಿಕ ಆಚರಣೆಗಳು ಮತ್ತು ಭಕ್ತರ ಸೇವೆಗಳು ಕ್ಷೇತ್ರದಲ್ಲಿ ಪೂರ್ವದಿಂದ ಸಂಪ್ರದಾಯ ಹಾಗೂ ಕ್ಷೇತ್ರ ವಿಧಿ ಪ್ರಕಾರ ನಡೆಯಿತ್ತದೆ.ಎಲ್ಲ ವಿಚಾರಗಳ ಬಗ್ಗೆ ತೀರ್ಮಾನಿಸಿ ನಿರ್ಧರಿಸುವ ಅಧಿಕಾರ, ಕರ್ತವ್ಯ ವ್ಯಾಪ್ತಿ,ವ್ಯವಸ್ಥಾಪನಾ ಸಮಿತಿ ,ದೇವಳದ ಪ್ರಧಾನ ಅರ್ಚಕರು ಮತ್ತು ಧಾರ್ಮಿಕ ದತ್ತಿ ಇಲಾಖಾ ಆಗಮ ಪಂಡಿತರದ್ದಾಗಿದೆ. ಇತರ ಯಾವುದೇ ಜೋತಿಷಿಗಳು ಅಥವಾ ಆಗಮಿಕ ಸಲಹೆ ಪಡೆದು ಅನುಷ್ಠಾನಕ್ಕೆ ಅವಕಾಶವಿಲ್ಲ ಎಂದು ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಠ- ದೇವಸ್ಥಾನ ಪ್ರತ್ಯೇಕ
ಉಚ್ಚ ನ್ಯಾಯಾಲಯದ 1978 ರ ತೀರ್ಪು ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ ಈ ಎರಡೂ ಧಾರ್ಮಿಕ ಸಂಸ್ಥೆಗಳು ಒಳಾಂಗಣದಲ್ಲಿ ಪ್ರತ್ಯೇಕವಾಗಿ ವಿಭಜಿಸಲ್ಪಟ್ಟಿದೆ.ಈ ಎರಡೂ ಧಾರ್ಮಿಕ ಸಂಸ್ಥೆಗಳು ಪ್ರತ್ಯೇಕವಾಗಿ ಅಸ್ತಿತ್ವ ಹೊಂದಿರುವ ಸ್ವತಂತ್ರ ಧಾರ್ಮಿಕ ಸಂಸ್ಥೆಗಳಾಗಿವೆ. ಇವೆರಡಕ್ಕೂ ಆಡಳಿತಾತ್ಮಕವಾಗಲಿ ಅಥವಾ ಧಾರ್ಮಿಕ ಆಚರಣೆಗಳ ಪದ್ಧತಿಗಳಲ್ಲಾಗಲೀ ಸಂಬಂಧವಿಲ್ಲ .ಕುಕ್ಕೆ ದೇವಸ್ಥಾನಕ್ಕೆ ಅಗೌರವ ಉಂಟು ಮಾಡುವ ಸುಳ್ಳು, ಆಧಾರರಹಿತ ಹೇಳಿಕೆಗಳನ್ನು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.