ಯುವ ಬ್ರಿಗೇಡ್, ಸೋದರಿ ನಿವೇದಿತ ಪ್ರತಿಷ್ಠಾನ ವತಿಯಿಂದ ಸೆಪ್ಟೆಂಬರ್ 24ರಂದು ಸುಳ್ಯದಲ್ಲಿ ದಿಗ್ವಿಜಯ ರಥಯಾತ್ರೆ

Advt_Headding_Middle
Advt_Headding_Middle

ಯುವ ಬ್ರಿಗೇಡ್ ಸುಳ್ಯ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ವತಿಯಿಂದ ದಿಗ್ವಿಜಯ ರಥಯಾತ್ರೆ ಸೆಪ್ಟೆಂಬರ್ 24 ರಂದು ಸುಳ್ಯದಲ್ಲಿ ನಡೆಯಲಿದೆ.
ನಿವೇದಿತಾ ಪ್ರತಿಷ್ಠಾನದ ಶ್ರೀಮತಿ ಗೀತಾ ಹಾಗೂ ಯುವ ಬ್ರಿಗೇಡ್ ಸುಳ್ಯ ಇದರ ಸಂಚಾಲಕ ದೇವಿಪ್ರಸಾದ್ ಅರಂಬೂರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಅಂದು ಬೆಳಿಗ್ಗೆ 10 ಗಂಟೆಯಿಂದ ಜ್ಯೋತಿ ವೃತ್ತದಿಂದ ಚೆನ್ನಕೇಶವ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಲಿದೆ.ಶ್ರೀ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಪುಷ್ಪಾರ್ಚನೆ ಮಾಡಿ ಚಾಲನೆ ನೀಡುವರು.ಮಧ್ಯಾಹ್ನ 12 ಗಂಟೆಯಿಂದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.ಕಾಲೇಜಿನ ಪ್ರಾಂಶುಪಾಲ ಡಾ। ಜ್ಞಾನೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅರಂಬೂರಿನ ಶ್ರೀ ಕಾಂಚಿಕಾಮಕೋಟಿ ವೇದ ವಿದ್ಯಾಲಯದ ಪ್ರಾಚಾರ್ಯ ವೆಂಕಟೇಶ ಶಾಸ್ತ್ರಿ ಭಾಗವಹಿಸುವವರು .ವಿವೇಕ ಶಿಕ್ಷಣ ವಾಹಿನಿಯ ಸ್ಥಾಪಕ ನಿತ್ಯಾನಂದ ವಿವೇಕವಂಶಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.