Breaking News

ಅಂಜನಾದ್ರಿಯಲ್ಲಿ ವಿಜೃಂಭಿಸಿದ ಭಜನಾ ಭಕ್ತಿ ರಸಧಾರೆ

Advt_Headding_Middle
Advt_Headding_Middle

ಅಡ್ಕಾರು ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರ ಅಂಜನಾದ್ರಿಯಲ್ಲಿ ಸಿಂಹ ಮಾಸದಲ್ಲಿ ನಡೆಸಲಾಗುವ ಸೋಣ ಶನಿವಾರ ಆಚರಣೆ, ಬಲಿವಾಡು ಕೂಟ ಶ್ರೀದೇವರಿಗೆ ವಿಶೇಷ ಪುಷ್ಪಾಲಂಕಾರ ಪೂಜೆಗಳು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪುರೋಹಿತ ವೇ| ಮೂ| ನಾಗರಾಜ ಭಟ್‌ರವರ ನೇತೃತ್ವದಲ್ಲಿ ಜರಗಿತು.

ಸಿಂಹ ಮಾಸದ ಕೊನೆಯ ಶನಿವಾರದಂದು ಹರಿದಾಸ ರಾಮಚಂದ್ರ ಕಾಟುಕುಕ್ಕೆ ಮತ್ತು ಬಳಗದವರಿಂದ ಭಜನಾ ಭಕ್ತಿ ರಸಧಾರೆ ಕಾರ್ಯಕ್ರಮ ನಡೆಯಿತು. ಹರಿದಾಸ ರಾಮಚಂದ್ರ ಕಾಟುಕುಕ್ಕೆಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಿಮ್ಮೇಳ ಕಲಾವಿದರಾಗಿ ಹಾರ್ಮೋನಿಯಂ ನಲ್ಲಿ ಪ್ರಕಾಶ್ ಆಚಾರ್ಯ ಕುಂಟಾರು, ತಬಲಾ ವಾದಕರಾಗಿ ಶರತ್ ಕುಮಾರ್ ಬೆದ್ರಂಪಳ್ಳ ಮತ್ತು ಸಹ ಹಾಡುಗಾರರಾಗಿ ಗಣೇಶ್ ಶೆಟ್ಟಿ ಬಜಕೂಡ್ಲು, ಮಂಜುನಾಥ ಬೆದ್ರಂಪಳ್ಳ, ರಾಧಾಕೃಷ್ಣ ಪೆರ್ಲ ಸಹಕರಿಸಿದರು. ಕ್ಷೇತ್ರದ ಭಜನಾ ಸಮಿತಿಯ ಸಂಚಾಲಕ ಜಯರಾಮ್ ಅಡ್ಕಾರುಪದವು ತಾಳ ನೀಡಿ ಬರಮಾಡಿಕೊಂಡರು. ಅದೇ ದಿನ ರಾತ್ರೆಯೂ ಶ್ರೀ ಕ್ಷೇತ್ರದಲ್ಲಿ ದೇವರಿಗೆ ವಿಶೇಷ ಪೂಜೆಗಳು ನಡೆದು ಸರ್ವ ಶಕ್ತಿ ಮಹಿಳಾ ಭಜನಾ ಸಂಘ ಪಡುಮಲೆ ಇವರಿಂದ ಭಜನಾ ಸಂಕೀರ್ತನಾ ಕಾರ್ಯಕ್ರಮ ನಡೆಯಿತು.

ಆಡಳಿತ ಸಮಿತಿಯ ಗೌರವಾಧ್ಯಕ್ಷ ಶ್ರೀ ಶಿವರಾಮ ರೈ ಕುರಿಯಗುತ್ತು, ಅಧ್ಯಕ್ಷ ದಯಾನಂದ ರೈ ಡಿಂಬ್ರಿಗುತ್ತು, ಕಾರ್ಯದರ್ಶಿ ಮಹಾಲಿಂಗ ಮಣಿಯಾಣಿ, ಖಜಾಂಜಿ ಜಯಂತ ಅಡ್ಕಾರು, ಉಪಾಧ್ಯಕ್ಷ ಸುನಿಲ್ ಅಡ್ಕಾರು, ಗಣೇಶ್ ಭಟ್ ಸಂಪತ್ತಿಲ, ರವಿಚಂದ್ರ, ಕೃಷ್ಣಕುಮಾರ್, ಭಾಸ್ಕರ, ನಾರಾಯಣ ಕಜೆಗದ್ದೆ, ರವಿಪ್ರಸಾದ್ ನಾಕ್ ಕಜೆಗದ್ದೆ, ಸೇವಾ ಸಮಿತಿಯ ಸೀತಾರಾಮ ಆಳಂಕಳ್ಯ, ವಿವೇಕ್ ರೈ, ಲಕ್ಷ್ಮಣ ಅರ್ಭಡ್ಕ, ಮಹಿಳಾ ಸಮಿತಿಯ ಶ್ರೀಮತಿ ಸುಲೋಚನ ನಾಯಕ್, ಸನ್ನುತಾ ಎಸ್ ರೈ, ಗೀತಾ ಡಿ. ರೈ. ಸುಮಲತಾ ರೈ, ತಿರುಮಲೇಶ್ವರಿ ವಿನಯಾ ಆರ್. ನಾಕ್, ಭಾರತಿ ಕಜೆಗದ್ದೆ, ಪ್ರೇಮಾ ಜಯಂತ್, ವೀಣಾ ಸುನಿಲ್, ಲೀಲಾವತಿ ಅಲ್ಲದೇ ಭಜನಾ ಸಮಿತಿಯ ಅನೀಶ್, ಲಕ್ಷ್ಮೀಶ, ಮಹಾದೇವ, ಹರೀಶ ಹಾಗೂ ಎಲ್ಲಾ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದು ವಿವಿಧ ರೀತಿಯಲ್ಲಿ ಸಹಕರಿಸಿದರು. ಊರ ಪರವೂರ ಭಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಸಾವಿರಕ್ಕೂ ಮಿಕ್ಕಿ ಜನರಿಗೆ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಶಿವರಾಮ ರೈ ಕುರಿಯಗುತ್ತು ಹಾಗೂ ರವಿಪ್ರಸಾದ್ ನಾಕ್ ಕಜೆಗದ್ದೆ ಮನೆಯವರು ಮತ್ತು ರಾತ್ರೆ ಬಾಲಕೃಷ್ಣ ಮತ್ತು ಮನೆಯವರು ಅನ್ನದಾನ ಸೇವೆಯಲ್ಲಿ ಪ್ರಾಯೋಜಕರಾಗಿ ಸರ್ವ ಸಹಕಾರವನ್ನು ನೀಡಿದರು.
ಪುರೋಹಿತ ನಾಗರಾಜ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಪ್ರಧಾನ ಕಾರ್ಯದರ್ಶಿ ಶ್ರೀ ಮಹಾಲಿಂಗ ಮಣಿಯಾಣಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.