Breaking News

ಹಕ್ಕು ಪತ್ರ ನೀಡುತ್ತೇವೆಂದು ಕರೆಸಿ ಮನೆಯನ್ನೇ ಕೆಡವಿದರು! : ಕಂದಾಯ ಇಲಾಖೆ ಕ್ರಮದ ವಿರುದ್ಧ ಎಸ್‌ಡಿಪಿಐ ಆಕ್ರೋಶ

Advt_Headding_Middle
Advt_Headding_Middle

ಬೆಳ್ಳಾರೆ ಗ್ರಾಮ ಪಂಚಾಯತ್‌ಗೊಳಪಟ್ಟ ಪಳ್ಳಿಮಜಲು ಎಂಬಲ್ಲಿ ಬಡ ಮುಸ್ಲಿಂ ಮಹಿಳೆಯ ಮನೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ಯಾವುದೇ ನೋಟೀಸು ನೀಡದೆ ಏಕಾಏಕಿ ಕೆಡವಿ ಹಾಕಿದ್ದಾರೆಂದು ಸೋಶಿಯಲ್ ಡೆಮಾಕ್ರೆಟಿಕ್ ಆಫ್ ಇಂಡಿಯಾದ ಸುಳ್ಯ ವಿಧಾನಸಭಾ ಸಮಿತಿ ಆರೋಪಿಸಿದೆ.


ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಎ. ರಫೀಕ್ ಈ ಕುರಿತು ವಿವರ ನೀಡಿದರು. ಪಳ್ಳಿಮಜಲಿನ ಭೀಪಾತಿಮಾ ಎಂಬ ಬಡ ಮುಸ್ಲಿಂ ಮಹಿಳೆಯ ಮನೆಯನ್ನು ಅಧಿಕಾರಿಗಳು ಕೆಡವಿದ್ದಾರೆ. ವಸತಿ ಇಲ್ಲದ ಬಡವರಿಗೆ ವಸತಿ ವ್ಯವಸ್ಥೆ ಮಾಡಿಕೊಡಬೇಕಾದ ಅಧಿಕಾರಿಗಳೇ ಈ ರೀತಿ ವರ್ತಿಸಿರುವುದು ಸರಿಯಲ್ಲ. ಉಳ್ಳರಿಗೊಂದು ನ್ಯಾಯ ಇಲ್ಲದವರಿಗೊಂದು ನ್ಯಾಯದ ರೀತಿಯಲ್ಲಿ ವರ್ತಿಸುವ ಇಂತಹ ಕೃತ್ಯದ ವಿರುದ್ಧ ನಾವು ಕಾನೂನು ಹೋರಾಟ ನಡೆಸುತ್ತೇವೆ. ಮಹಿಳೆಗಾದ ನಷ್ಟಕ್ಕೆ ಅಧಿಕಾರಿಗಳು ನಷ್ಟ ಪರಿಹಾರ ನೀಡಬೇಕು ಮತ್ತು ಮಹಿಳೆಗೆ ಬದಲಿ ವ್ಯವಸ್ಥೆ ಮಾಡಿಕೊಡಬೇಕು ಎಂದು ರಫೀಕ್ ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ ಪಕ್ಷದ ಮುಖಂಡ ಹಾಗೂ ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್‌ರವರು, ಪಳ್ಳಿಮಜಲಿನ ಈ ಸ್ಥಳದಲ್ಲಿ ಸುಮಾರು 11 ಮನೆಗಳಿವೆ. ಇಲ್ಲಿ ಬಿಫಾತಿಮಾ ಮತ್ತು ಅವರ ಮಗ ಅನೇಕ ವರ್ಷಗಳಿಂದ ವಾಸಿಸುತ್ತಿದ್ದು, ಈ ಜಾಗಕ್ಕಾಗಿ 94 ಸಿ ಯಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದಾರೆ. ಆದರೆ ಕಂದಾಯ ಅಧಿಕಾರಿಗಳು ಕೇವಲ 10 ನಿಮಿಷದಲ್ಲಿ ಈ ಮನೆಯನ್ನು ಕೆಡವಿ ಹೋಗಿದ್ದಾರೆ. ಈ ಕುರಿತಂತೆ ನಾವು ಸ್ಥಳೀಯ ಪಂಚಾಯತ್‌ನಲ್ಲಿ ಕೇಳಿದಾಗ ಅವರಲ್ಲಿ ಯಾವುದೇ ಮಾಹಿತಿ ಇಲ್ಲ.

ತಹಶೀಲ್ದಾರ್‌ರನ್ನು ಸಂಪರ್ಕಿಸಿ ವಿಚಾರಿಸಿದಾಗ 2015-16 ರಲ್ಲಿ ಮೂರು ಎಕ್ರೆ ಜಾಗ ಪೊಲೀಸರ ವಸತಿಗಾಗಿ ಮೀಸಲಿರಿಸಿದೆ ಎಂದು ಹೇಳಿದ್ದಾರೆ. ಆದರೆ ಅದಕ್ಕೆ ಸಂಬಂಧಪಟ್ಟಂತೆ ಯಾವ ದಾಖಲೆಗಳೂ ಇಲ್ಲ. ಯಾವುದೇ ನೋಟೀಸ್ ಕೂಡಾ ಇಲ್ಲದೆ ಇಂತಹ ಅಮಾನವೀಯ ಕೃತ್ಯ ಎಸಗಿದ ಅಧಿಕಾರಿಗಳ ನಿಲುವನ್ನು ನಾವು ಖಂಡಿಸುತ್ತೇವೆಂದು ಹೇಳಿದರು.

ಸುಳ್ಯ ನಗರದಲ್ಲಿ ಬೇಕಾಬಿಟ್ಟಿಯಾಗಿ ಸರಕಾರಿ ಜಾಗಗಳನ್ನು ಅತಿಕ್ರಮಿಸಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ಕಂದಾಯ ಇಲಾಖೆಯವರು ಬಡ ಮಹಿಳೆಯ ಮನೆಯನ್ನು ಮಾತ್ರ ಕೆಡವಿದ್ದು ಸರಿಯಲ್ಲ. ಈ ಕುರಿತು ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ ಉಮ್ಮರ್, ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಖಾದರ್‌ರವರು ವಸತಿ ಸಚಿವರೂ ಆಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲರಿಗೂ ವಸತಿಯನ್ನು ನೀಡುತ್ತೇವೆ ಎಂದು ಹೇಳುತ್ತಲೇ ಬಂದಿದೆ. ಹೀಗಾಗಿ ಬೆಳ್ಳಾರೆಯ ಈ ಪ್ರಕರಣದ ಕುರಿತು ಉಸ್ತುವಾರಿ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಹೇಳಿದರು. ಕೆ.ಎಸ್.ಉಮ್ಮರ್ ವಿರುದ್ಧ ಸುಳ್ಯದಲ್ಲಿ ನಡೆದ ಪ್ರತಿಭಟನೆಯ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರಫೀಕ್‌ರವರು, ಅವರು ನಗರದ ಸಮಸ್ಯೆಯ ಕುರಿತು ಅಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ ಅವರ ವಿರುದ್ಧವೇ ಪ್ರತಿಭಟನೆ ನಡೆದಿದೆ. ಪ್ರತಿಭಟನೆ ಬಳಿಕ ಈ ವಿಚಾರವನ್ನು ಪಕ್ಷ ಕೈಗೆತ್ತಿಕೊಂಡಿದೆ.

ಶೀಘ್ರದಲ್ಲಿಯೇ ದಾಖಲೆ ಸಹಿತವಾಗಿಯೇ ನಾವಿದನ್ನು ಮಾತನಾಡುತ್ತೇವೆ ಎಂದು ಹೇಳಿದರು. ನಾನು ಪ್ರಸ್ತಾಪಿಸಿದ ವಿಷಯದ ಕುರಿತು ಕಾನೂನು ಹೋರಾಟ ಮುಂದುವರಿಸಲಾಗುವುದು. ಎಲ್ಲಾ ವಿಚಾರವನ್ನು 2 ದಿನಗಳೊಳಗೆ ಪತ್ರಿಕಾಗೋಷ್ಠಿ ಕರೆದು ತಿಳಿಸುವುದಾಗಿ ಕೆ.ಎಸ್.ಉಮ್ಮರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಮ್ಮಾಲಿ ಹಾಜಿ ಬೆಳ್ಳಾರೆ, ಅಬೂಬಕ್ಕರ್ ಬೆಳ್ಳಾರೆ, ಬಶೀರ್ ಬಿ.ಎ., ಖಲಂದರ್ ಹಾಜಿ, ಫೈಝಲ್ ಬೆಳ್ಳಾರೆ, ಭೀಪಾತಿಮಾ ಮತ್ತು ಅವರ ಮಗ ರಿಯಾಝ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.