Breaking News

ಸುಳ್ಯ ತಾಲೂಕು ತುಳು ಸಾಹಿತ್ಯ ಸಮ್ಮೇಳನ ದ ಮಹಿಳಾ ಸಮಿತಿಯ ವಿಶೇಷ ಸಭೆ

Advt_Headding_Middle
Advt_Headding_Middle

ಸುಳ್ಯ ತಾಲೂಕು ತುಳು ಸಾಹಿತ್ಯ ಸಮ್ಮೇಳನ ದ ಮಹಿಳಾ ಸಮಿತಿಯ ವಿಶೇಷ ಸಭೆಯು ಇಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆಯಿತು.

ಅಕ್ಟೊಬರ್ 16 ರಂದು ನಡೆಯುವ ಸುಳ್ಯದ ಪ್ರಪ್ರಥಮ ತುಳು ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರಿಗೆ ಹಾಗು ಸಾಹಿತ್ಯಾಭಿಮಾನಿಗಳಿಗೆ ತುಳುನಾಡ ಶೈಲಿ ಯ ಊಟೋಪಹಾರಗಳನ್ನು ಆಯೋಜಿಸುವ ಸಲುವಾಗಿ ಮಹಿಳೆಯರ ನೇತೃತ್ವದಲ್ಲಿಯೇ ಮಾಡುವ ಬಗ್ಗೆ ಹಾಗು ಮಹಿಳೆಯರನ್ನು ತೊಡಗಿಸಿಕೊಳ್ಳುವುದರ ಜತೆಗೆ ಎಲ್ಲ ಸಂಘ ಸಂಸ್ಥೆಗಳನ್ನು ಮೆರವಣಿಗೆಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಪಾಲ್ಗೊಳ್ಳುವಂತೆ ಮಹಿಳಾ ಸಮಿತಿಯ ಹಿರಿಯ ಸದಸ್ಯೆ ಶ್ರೀಮತಿ ಶಶಿಕಲಾ ಹರಪ್ರಸಾದ್ ತಿಳಿಸಿದರು.

 

ಸ್ವಾಗತ ಸಮಿತಿ ಅಧ್ಯಕ್ಷ ಗೋಕುಲ್ ದಾಸ್, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪಾ ಮೇದಪ್ಪ , ಕರ್ನಾಟಕ ಅರೆಭಾಷೆ ಅಕಾಡೆಮಿ ಸದಸ್ಯರಾದ ಕೆ.ಟಿ ವಿಶ್ವನಾಥ , ಶ್ರೀಮತಿ ತಿರುಮಲೇಶ್ವರಿ , ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ರಾಜು ಪಂಡಿತ್ , ಪ್ರಧಾನ ಕಾರ್ಯದರ್ಶಿ ಶಶಿಧರ ಎಂ ಜೆ, ಹಾಗು ಮಹಿಳಾ ಸಮಿತಿಯ ಸದಸ್ಯರು, ಸ್ವಾಗತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಗೋಕುಲ್ ದಾಸ್ ಸ್ವಾಗತಿಸಿ , ಖಜಾಂಜಿ ಜೆ.ಕೆ. ರೈ ವಂದಿಸಿದರು . ಶ್ರೀಮತಿ ಗಿರಿಜಾ ಎಂ. ಪ್ರಾರ್ಥಿಸಿದರು .  ಜಯರಾಂ ಶೆಟ್ಟಿ ಕೆ.ಯೆನ್. ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.