ಭೂ ಒತ್ತುವರಿ ಮತ್ತು ಅಕ್ರಮ ಕಟ್ಟಡಗಳ ವಿರುದ್ಧ ಎಸ್‌ಡಿಪಿಐ ಹೋರಾಟ: ಪ್ರತಿಭಟನೆಗಳಿಗೆ ಅಂಜುವುದಿಲ್ಲ- ಎಸ್‌ಡಿಪಿಐ

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್‌ರವರ ವಿರುದ್ಧ ಕೆವಿಜಿ ಕ್ಯಾಂಪಸ್ ಹಿತರಕ್ಷಣಾ ವೇದಿಕೆಯವರು ವಿದ್ಯಾರ್ಥಿಗಳನ್ನು ಮತ್ತು ಸ್ಥಳೀಯ ರಾಜಕೀಯ ವ್ಯಕ್ತಿಗಳನ್ನು ಸೇರಿಸಿ ಸುಳ್ಯ ನಗರದಲ್ಲಿ ನಡೆಸಿದ ಮೆರವಣಿಗೆ ಮತ್ತು ಪ್ರತಿಭಟನಾ ಸಭೆಯಲ್ಲಿ ಇಲ್ಲ ಸಲ್ಲದ ಆರೋಪ ಹೊರಿಸಿರುವುದುನ್ನು ಎಸ್‌ಡಿಪಿಐ ಖಂಡಿಸುತ್ತದೆ ಹಾಗೂ ಭೂ ಒತ್ತುವರಿ ಮತ್ತು ಅಕ್ರಮ ಕಟ್ಟಟಗಳ ವಿರುದ್ಧ ಪಕ್ಷ ಕಾನೂನು ರೀತಿಯ ಹೋರಾಟ ನಡೆಸುತ್ತದೆ ಎಂದು ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಸಮಿತಿ ಅಧ್ಯಕ್ಷ ರಫೀಕ್ ಎಂ. ತಿಳಿಸಿದ್ದಾರೆ.


ಇಂದು ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಉಮ್ಮರ್ ಕೆ.ಎಸ್.ರವರು ನ.ಪಂ. ಸಾಮಾನ್ಯ ಸಭೆಯಲ್ಲಿ ಕೆವಿಜಿಯವರು ೬ ಎಕ್ರೆ ೧೦ ಸೆಂಟ್ಸ್ ಸರಕಾರಿ ಭೂಮಿಗೆ ನಿರಾಕ್ಷೇಪಣೆಗೆ ಬಂದ ಅರ್ಜಿಯ ವಿಚಾರ ಪ್ರಸ್ತಾಪಕ್ಕೆ ಬಂದಾಗ ನಗರ ವ್ಯಾಪ್ತಿಯಲ್ಲಿ ಈಗಾಗಲೇ ನಿವೇಶನಕ್ಕಾಗಿ ೪೦೦ಕ್ಕೂ ಮಿಕ್ಕಿ ಬಂದ ಅರ್ಜಿಗಳಿಗೆ ಮೊದಲು ನಿವೇಶನವನ್ನು ನೀಡಿದ ಬಳಿಕವೇ ಈ ಅರ್ಜಿಯ ಬಗ್ಗೆ ಚರ್ಚಿಸೋಣ ಎಂದು ಪ್ರಸ್ತಾಪಿಸಿದ್ದಲ್ಲದೆ ನಗರ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳನ್ನು ಪರಿಶೀಲಿಸಿ ಸರಿಯಾದ ತೆರಿಗೆಯನ್ನು ವಿಧಿಸುವ ನಿರ್ಣಯವನ್ನು ಮಾಡೋಣ ಎಂದು ಹೇಳಿದ್ದರು. ಇನ್ನು ಮುಂದೆಯೂ ಉಮ್ಮರ್‌ರವರು ನಗರದ ಅಭಿವೃದ್ಧಿಯ ದೃಷ್ಟಿಯಿಂದ ಭೂ ಒತ್ತುವರಿ ಮತ್ತು ಅಕ್ರಮ ಕಟ್ಟಡಗಳ ವಿರುದ್ಧ ನಡೆಸುವ ಹೋರಾಟಗಳಿಗೆ ಎಸ್‌ಡಿಪಿಐ ಸಹಕಾರ ನೀಡಲಿದೆ ಎಂದು ಹೇಳಿದರು. ನಗರ ವ್ಯಾಪ್ತಿಯಲ್ಲಿ ನಡೆದ ಭೂ ಒತ್ತುವರಿ ಹಾಗೂ ಇತರ ಇಲಾಖೆಗಳಿಗೆ ಮಂಜೂರುಗೊಂಡ ಸ್ಥಳಗಳನ್ನು ಖಾಸಗಿಯವರು ಕಬಳಿಸಿರುವುದು ಕೂಡಾ ಪಕ್ಷದ ಗಮನಕ್ಕೆ ಬಂದಿದೆ. ಈ ವಿಷಯದಲ್ಲಿರುವ ವ್ಯಕ್ತಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಹೋರಾಟಕ್ಕೆ ಪಕ್ಷವು ಮುಂದಾಗುತ್ತದೆ. ಎಂದು ಹೇಳಿದ ಅವರು, ಈ ಮೊದಲು ನಗರ ವ್ಯಾಪ್ತಿಯಲ್ಲಿ ಹಲವಾರು ಘಟನೆಗಳು ನಡೆದಾಗ ಪ್ರತಿಭಟಿಸಲು ಮುಂದಾಗದ ಈ ವೇದಿಕೆಗಳು ನಗರ ಪಂಚಾಯತ್ ಸದಸ್ಯನ ವಿರುದ್ಧ ಯಾವುದೇ ಪ್ರತಿಭಟನೆ, ಹೋರಾಟ ಮಾಡಿದರೂ ಅಭಿವೃದ್ಧಿಯ ದೃಷ್ಟಿಯಿಂದ ಉಮ್ಮರ್‌ರವರು ನಡೆಸುವ ಹೋರಾಟದಿಂದ ಹಿಂಜಯಿಯುವುದಿಲ್ಲ. ಅವರ ಬೆಂಬಲಕ್ಕೆ ಪಕ್ಷವು ನಿಲ್ಲುತ್ತದೆ ಎಂದು ರಫೀಕ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎಸ್.ಉಮ್ಮರ್, ಬಾಬು ಎನ್.ಸವಣೂರು, ಮುಸ್ತಫಾ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.