ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೧೦೫ನೇ ಮಹಾಸಭೆ -೨೭೪ಕೋಟಿ ರೂ ವ್ಯವಹಾರ: ೮೨ ಲಕ್ಷ ರೂ. ಲಾಭ

Advt_Headding_Middle
Advt_Headding_Middle

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೧೦೫ ನೇ ವಾರ್ಷಿಕ ಮಹಾಸಭೆಯು ಸೆ.೨೨.ರಂದು ಸಂಘದ ಉತ್ಕರ್ಷ ಸಹಕಾರ ಸೌಧದ ಕಲ್ಲ್ಲೇಗ ಪೂವಣಿ ಹೆಗ್ಡೆ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಸಿ ಚಂದ್ರಶೇಖರ ಶಾಸ್ತ್ರಿ ಅವರ ಸಭಾಧ್ಯಕ್ಷತೆಯಲ್ಲಿ ಜರುಗಿತು.
?೨೦೧೭-೧೮ನೇ ಸಾಲಿನಲ್ಲಿ ಸಂಘವು ೫೬೨೪ ಸದಸ್ಯತನ ಹೊಂದಿರುತ್ತದೆ. ಒಟ್ಟು ರೂ ೨೯,೯೭,೭೫,೧೫೭.೯೧ ಠೇವಣಿ ಇರುತ್ತದೆ. ಸಂಘದ ಸದಸ್ಯರಿಗೆ ಕೃಷಿ ಹಾಗೂ ಕೃಷಿಯೇತರ ಸಾಲಗಳಾಗಿ ರೂ ೫೮,೪೬,೨೪,೭೪೧.೦೦ ನೀಡಲಾಗಿದೆ. ವರದಿ ವರ್ಷದಲ್ಲಿ ಶೇ.೯೮.೧೬ ಸಾಲ ವಸೂಲಾತಿ ಆಗಿರುತ್ತದೆ. ಆಡಿಟ್ ವರ್ಗೀಕರಣ ?ಎ? ತರಗತಿ ಹೊಂದಿದೆ. ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ಸಂಘದ ವರದಿ ಮಂಡಿಸಿದರು.
?೨೦೧೭-೧೮ನೇ ಸಾಲಿನಲ್ಲಿ ರೂ.೭೯,೬೫,೪೪,೭೫೩.೦೪ ದುಡಿಯುವ ಬಂಡವಾಳ ಹೊಂದಿ ಜುವ್ಲೂ ರೂ.೨,೭೪,೧೬,೬೪,೬೬೭.೬೯ ವ್ಯವಹಾರ ನಡೆಸಿ ರೂ.೮೨,೧೦,೨೨೨.೪೩ ಲಾಭ ಗಳಿಸಿ ಹೊಸ ದಾಖಲೆಯಾಗಿದೆ. ಶೇ.೮ ಡಿವಿಡೆಂಡು ಹಂಚಲು ಶಿಫಾರಸು ಮಾಡುತ್ತ್ತಿದ್ದೇವೆ?.
?೨.೯೩ ಕೋಟಿ ರೂ ವೆಚ್ಚದ ಸಂಘದ ನೂತನ ಕಟ್ಟಡ ಉತ್ಕರ್ಷ ಸಹಕಾರ ಸೌಧ ತಾಲೂಕಿನ ಸಹಕಾರಿ ಸಪ್ತಾಹದ ಸಂದರ್ಭದಲ್ಲಿ ಉದ್ಘಾಟನೆ ಗೊಂಡು ಹಲವು ವರುಷದ ಕನಸು ನನಸಾಗಿದೆ. ಸದಸ್ಯರಿಗಾಗಿ ಬಳ್ಪದಲ್ಲಿ ಪೂರ್ಣ ಪ್ರಮಾಣದ ಶಾಖೆ,ಸದಸ್ಯರ ಅನುಕೂಲಕ್ಕಾಗಿ ಸಾಲದ ವಾಯಿದೆಯ ಮಾಹಿತಿಯನ್ನು ಮೊಬೈಲ್ ಸಂದೇಶದ ಮೂಲಕ ತಿಳಿಸುವ ಯೋಜನೆ. ಸದಸ್ಯರ ಮತ್ತು ಹೋಬಳಿಯ ಜನರ ಅನುಕೂಲಕ್ಕಾಗಿ ಇ-ಸ್ಟಾಂಪ್ (ಠಸೆ) ಸೌಲಭ್ಯವಿದೆ. ಸದಸ್ಯರಿಗಾಗಿ ವಿವಿಧ ಕೃಷಿ ಉಪಕರಣಗಳ ಬಾಡಿಗೆಗೆ ನೀಡಲಾಗುತ್ತದೆ. ಸೇಪ್ ಲಾಕರ್,ನೆಪ್ಟ್,ಆರ್ ಟಿ ಜಿ ಎಸ್ ಸೌಲಭ್ಯವಿದೆ. ಪ್ರತಿದಿನ ಕ್ಯಾಂಪ್ಕೋ ಸಹಯೋಗದಲ್ಲಿ ಅಡಿಕೆ, ಕೊಕ್ಕೋ, ರಬ್ಬರ್ ಖರೀದಿ ಮಾಡಲಾಗುತ್ತಿದೆ ಸದಸ್ಯರು ಕೃಷಿ ಉತ್ಪನ್ನಗಳನ್ನು ಸಂಘದಲ್ಲಿ ಮಾರಾಟಮಾಡಿ ಮತ್ತು ಸಂಘದಲ್ಲಿ ವ್ಯವಹಾರಗಳನ್ನು ನಡೆಸಿ ಸಂಘದ ಅಭಿವೃದ್ಧಿಯಲ್ಲಿ ಕೈ ಜೋಡಿಸ ಬೇಕು ಎಂದು ಸಂಘದ ಅಧ್ಯಕ್ಷ ಸಿ ಚಂದ್ರಶೇಖರ ಶಾಸ್ತ್ರಿ ಹೇಳಿದರು.
೨೦೧೭-೧೮ ನೇ ಸಾಲಿನಲ್ಲಿ ಅತ್ಯಧಿಕ ವ್ಯವಹಾರ ಮಾಡಿರುವ ಸದಸ್ಯರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಅತ್ಯಧಿಕ ಅಡಿಕೆ ಮಾರಾಟ ಚಂದ್ರಶೇಖರ ಶಾಸ್ತ್ರಿ, ಇಬ್ರಾಹಿಂ ಜಿ ಯಂ, ಅತ್ಯಧಿಕ ಕೊಕ್ಕ ಮಾರಾಟ ಇಸ್ಮಾಯಿಲ್ ಪೊಳೆಂಜ,ಅಶ್ವಥ್ ಪಳಂಗಾಯ ಅತ್ಯಧಿಕ ಗೊಬ್ಬರ ಖರೀದಿ ಶ್ರೀಕೃಷ್ಣ ಭಟ್ ಪಟೋಳಿ, ಸಿ ಪಿ ನರಸಿಂಹ ಶಾಸ್ತ್ರಿ , ಅತ್ಯಧಿಕ ವಾಹನ ಬಿಡಿಭಾಗಗಳ ಖರೀದಿ ಗೋಪಾಲಕೃಷ್ಣ ಶಿವಕೃಪಾ ಗ್ಯಾರೇಜು, ಪದ್ಮನಾಭ ಪಂಜ, ಅತ್ಯಧಿಕ ಪೈಪು ಮತ್ತು ಬಿಡಿಭಾಗ ಖರೀದಿ ಶಬ್ಬೀರ್ ಬಾಳಿಲ,ನಾರಾಯಣ ಕೃಷ್ಣನಗರ ಅತ್ಯಧಿಕ ಗೃಹಬಳಕೆ ಸಾಮಾಗ್ರಿಗಳ ಖರೀದಿ ದಯಾನಂದ ಕಿನ್ನಿಕುಮೇರಿ, ಸುರೇಂದ್ರ ಎಣ್ಣೆಮಜಲು, ಅತ್ಯುತ್ತಮ ಗ್ರಾಹಕರಾಗಿ ಬಿ.ಯಂ ಆನಂದ ಗೌಡ, ನಾರಾಯಣ ಶಾಸ್ತ್ರಿ ಸಿ, ಅತ್ಯುತ್ತಮ ನವೋದಯ ಸ್ವ ಸಹಾಯ ಗುಂಪಗಳಾದ ಶ್ರೀ ನಾಗ ಮಹಿಳಾ ನವೋದಯ ಸ್ವ ಸಹಾಯ ಗುಂಪು ಐವತ್ತೊಕ್ಲು, ಶ್ರೀ ಶಾಸ್ತ್ರವು ಮಹಿಳಾ ನವೋದಯ ಸ್ವ ಸಹಾಯ ಗುಂಪು ಕೊರಪ್ಪಣೆ ಬಳ್ಪ, ಧನು ಶ್ರೀ ಮಹಿಳಾ ನವೋದಯ ಸ್ವ ಸಹಾಯ ಗುಂಪು ಕೂತ್ಕುಂಜ, ಸಪ್ತಪದಿ ನವೋದಯ ಸ್ವ ಸಹಾಯ ಗುಂಪು ಕೇನ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿಸಿದ ಎಲ್ಲಾ ಸದಸ್ಯರ ಪೈಕಿ ಸ್ಥಳದಲ್ಲೇ ಅದೃಷ್ಟ ಚೀಟಿ ತೆಗೆದು ಅವರಿಗೆ ಬಹುಮಾನ ನೀಡಲಾಯಿತು. ಅದರಲ್ಲಿ ರಘುನಾಥ ರೈ ಕೆರೆಕ್ಕೋಡಿ, ಸದಾಶಿವ ಪಳಂಗಾಯ, ಚೆನ್ನಪ್ಪ ಮೇಲ್ಪಾಡಿ, ಚಾಂದಿನಿ ಬಿ ವಿ ಪಳಂಗಾಯ ವಿಜೇತರು.ಆನಂದ ಗೌಡ ಕಂಬಳ ಅವರ ಪ್ರಯೋಜಕತ್ವದಲ್ಲಿ ಸದಸ್ಯರ ಹಾಜರಾತಿಯಲ್ಲಿ ಅದೃಷ್ಟ ಬಹುಮಾನ ಯೋಜನೆ ಆಯೋಜಿಸಲಾಗಿತ್ತು. ಬೇಬಿ ಕಕ್ಯಾನ ಮತ್ತು ಗಣೇಶ್ ಅಡ್ಕ ವಿಜೇತರಾಗಿದ್ದು,ಅವರಿಗೆ ಆನಂದ ಗೌಡ ಕಂಬರವರು ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸಿಲ್ಕ್ ಮಳಿಗೆಯ ಸೀರೆ ವಿತರಿಸಿದರು. ಜಿನ್ನಪ್ಪ ಗೌಡ ಅಗೋಳಿಬೈಲು, ತೇಜಾವತಿ ಚಿದ್ಗಲ್ಲು, ಪಾರ್ವತಿ ಪಾಂಡಿಗದ್ದೆ,ಪೂವಕ್ಕೆ ರೈ ಕೇನ್ಯ ಅವರಿಗೆ ಚಿಕಿತ್ಸೆ ವೆಚ್ಚದ ಸಹಾಯ ಧನ ವಾಗಿ ತಲಾ ೫ ಸಾವಿರ ವಿತರಿಸಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಲೋಕೇಶ್ ಬರೆಮೇಲು, ನಿರ್ದೇಶಕರಾದ ಶ್ರೀಕೃಷ್ಣ ಭಟ್ ಪಟೋಳಿ, ಪಿ.ಕೆ.ವಾಸುದೇವ ಗೌಡ ಪಳಂಗಾಯ, ಭಾಸ್ಕರ ಗೌಡ ಚಿದ್ಗಲ್ಲು, ಕೆ.ರಘುನಾಥ ರೈ, ಶ್ರೀಮತಿ ರೇಖಾ ರೈ, ಶ್ರೀಮತಿ ಮೋಹಿನಿ ಬಿ.ಎಲ್ ಬೊಳ್ಮಲೆ, ಗಣೇಶ್ ಪೈ, ವಾಚಣ್ಣ ಕೆರೆಮೂಲೆ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ಉಪಸ್ಥಿತರಿದ್ದರು.
ಕಾರ್‍ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು.ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು. ಲೋಹಿತ್ ಎಣ್ಣೆಮಜಲು ವಂದಿಸಿದರು.ಬಳಿಕ ಸಾವಯವ ಕೃಷಿ ಮಾಹಿತಿ ಶಿಬಿರ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.