Breaking News

ನಿವೃತ್ತ ಗ್ರಾಮ ಸಹಾಯಕ, ಪ್ರಗತಿಪರ ಕೃಷಿಕ ನಾರಾಯಣ ಗೌಡ ಕಣಜಾಲು ನಿಧನ

Advt_Headding_Middle
Advt_Headding_Middle

ನಿವೃತ್ತ ಗ್ರಾಮ ಸಹಾಯಕ ಹಾಗೂ ಪ್ರಗತಿಪರ ಕೃಷಿಕ ಕನಕಮಜಲು ಗ್ರಾಮದ ಕಣಜಾಲು ನಾರಾಯಣ ಗೌಡರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.17ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.


ನಾರಾಯಣ ಗೌಡರು ಪ್ರಗತಿಪರ ಕೃಷಿಕರಾಗಿದ್ದು, ಕನಕಮಜಲು ಗ್ರಾಮ ಸಹಾಯಕರಾಗಿ ಸುಮಾರು 35 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. ಹಿಂದೆ ಪಟೇಲರಾಗಿಯೂ ಸೇವೆ ಸಲ್ಲಿಸಿದ ನಾರಾಯಣ ಗೌಡರು ಕನಕಮಜಲು ಗ್ರಾಮದ ಜನತೆಯ ಸಮಸ್ಯೆಗಳನ್ನು ಅರಿತುಕೊಂಡು ಗ್ರಾಮ ಪಂಚಾಯತಿಯ ಮೂಲಕ ಪರಿಹಾರ ಕೊಡಿಸುವಲ್ಲಿ ಶ್ರಮಿಸಿದ್ದರು.
ಮೃತರು ಪತ್ನಿ ಪಾರ್ವತಿ, ಪುತ್ರರಾದ ಜಾಲ್ಸೂರು ಗ್ರಾಮ ಸಹಾಯಕ ನಂದಕುಮಾರ್, ವೆಂಕಟ್ರಮಣ, ತೀರ್ಥರಾಮ, ಪುತ್ರಿಯರಾದ ವೇದಾವತಿ, ಭಾಗೀರಥಿ, ಪುಷ್ಪಾವತಿ, ಸೊಸೆಯಂದಿರಾದ ಜಯಂತಿ, ಮೀನಾಕ್ಷಿ, ಲತಾ, ಮೊಮ್ಮಕ್ಕಳಾದ ಲಿಖಿತ, ಮೋಹಿತ್, ಹಿತಾಶ್ರೀ, ಪೂಜಿತ್, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.