ಮುರುಳ್ಯ -ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

 

ನಿವ್ವಳ ಲಾಭ 40,96410. 46 ಪೈಸೆ, ಸದಸ್ಯರಿಗೆ 6 % ಡಿವಿಡೆಂಡ್

ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆ ಸೆ. ೨೨ರಂದು ನಡೆಯಿತು. ಕೃಷಿಕ ಗಣಪಯ್ಯ ಗೌಡ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ವಸಂತ ಎಚ್. ಅಧ್ಯಕ್ಷತೆ ವಹಿಸಿ, ವಾರ್ಷಿಕವಾಗಿ ಸಂಘವು ೪೦,೯೬೪೧೦.೪೬ ಪೈಸೆ ನಿವ್ವಳ ಲಾಭದಲ್ಲಿರುತ್ತದೆ. ಹಾಗೂ ಸದಸ್ಯರಿಗೆ ೬% ಡಿವಿಡೆಂಡ್ ನೀಡಲಾಗುವುದೆಂದು ಅಧ್ಯಕ್ಷರು ಹೇಳಿದರು.
ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಸಂಘದ ನಿರ್ದೇಶಕರನ್ನು ಈ ಸಂದರ್ಭದಲ್ಲಿ ಮೌನ ಪ್ರಾರ್ಥನೆ ಮಾಡುವ ಮೂಲಕ ಸ್ಮರಿಸಲಾಯಿತು.

 

ವೇದಿಕೆಯಲ್ಲಿ ಉಪಾಧ್ಯಕ್ಷೆ ಕುಸುಮಾವತಿ ರೈ, ನಿರ್ದೇಶಕರಾದ ಪ್ರಸನ್ನ ಕೆ., ವಸಂತ ನಡುಬೈಲು, ರೂಪರಾಜ ರೈ, ಭಾಗೀರಥಿ ಮುರುಳ್ಯ, ರಮೇಶ್ ಕೋಟೆ, ನೀಲಮ್ಮ ಹುದೇರಿ, ರಾಜಶೇಖರ ಅಲೆಂಗಾರ, ದಿನೇಶ್ ಎಚ್. ಉಪಸ್ಥಿತರಿದ್ದರು.
ಸಭೆಯಲ್ಲಿ ಕೊಳೆರೋಗ, ಬೆಳೆನಾಶ ಇನ್ನಿತರ ವಿಷಯಗಳು ಹಾಗೂ ಮುರುಳ್ಯ ಮತ್ತು ಎಣ್ಮೂರು ಗ್ರಾಮ ಒಂದೇ ಸಂಘದಲ್ಲಿರಬೇಕು, ಒಂದೇ ತಾಲೂಕಿನಲ್ಲಿರಬೇಕು. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಸಹಾಯಕ ವ್ಯವಸ್ಥಾಪಕ ಸುದೀನ್‌ಕುಮಾರ್, ಹರ್ಷಿತಾ ಎ., ರಮೇಶ್, ಸುಭಾಶ್ಚಂದ್ರ ರೈ ವಸಂತ ರೈ ಕಾರ್ಯಕ್ರಮದಲ್ಲಿ ಸಹಕರಿಸಿದರು. ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ವರದಿ ವಾಚಿಸಿದರು. ನಿರ್ದೇಶಕರಾದ ಪ್ರಸನ್ನ ಕೆ. ಸ್ವಾಗತಿಸಿ, ಉಪಾಧ್ಯಕ್ಷೆ ಕುಸುಮಾವತಿ ರೈ ವಂದಿಸಿದರು. ಶಾಲಾ ಮಕ್ಕಳು ಪ್ರಾರ್ಥಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.