Breaking News

ಸುಬ್ರಹ್ಮಣ್ಯ : ಶುಭಕರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

67 ಸಾವಿರ ಲಾಭ
ಸುಬ್ರಹ್ಮಣ್ಯ ಶುಭಕರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆಯು ಗ್ರಾ.ಪಂ ರಾಜೀವ್ ಗಾಂಧೀ ಸೇವಾ ಸಭಾಭವನದಲ್ಲಿ ಸೆ.15ರಂದು ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ದಿನೇಶ್ ಬಿ.ಎನ್ ವಹಿಸಿದ್ದರು. ಸಂಘವು ವಾರ್ಷಿಕ 5.14ಕೋ.ರೂ ಮಿಕ್ಕಿದ ವ್ಯವಹಾರ ನಡೆಸಿದ್ದು 67 ಸಾವಿರ ಲಾಭ ಗಳಿಸಿದೆ. ಈ ಸಂದರ್ಭ ಸಾಲ ಪಡೆದು ಸಕಾಲಕ್ಕೆ ಮರುಪಾವತಿಸಿದ ಬಗ್ಗೆ ಸಂಘದ ಸದಸ್ಯರಾದ ಸುಬ್ಬಯ್ಯ, ಪುಷ್ಪಾವತಿ ಕಲ್ಲಾಜೆ, ಪಿ. ಕೇದೀಶರನ್, ಪುರಂದರ ಶೆಟ್ಟಿ ಇವರನ್ನು ನಿವೃತ್ತ ಉಪನ್ಯಾಸಕರಾದ ಕುಶಾಲಪ್ಪ ಗೌಡ ಏನೆಕಲ್ಲು ಸಮ್ಮಾನಿಸಿ ಗೌರವಿಸಿದರು. ಈ ಸಂಧರ್ಭದಲ್ಲಿ ಬ್ಯಾಂಕಿನ ಹಿತದೃಷ್ಠಿಯಿಂದ ವಿಶ್ರಾಂತ ಪ್ರಾಂಶುಪಾಲ ಕೆ.ವಸಂತ ಶೆಟ್ಟಿ ಮೆಚ್ಚುಗೆಯ ಮಾತುಗಳಾನ್ನಾಡಿದರು. ವೇದಿಕೆಯಲ್ಲಿ ನಿರ್ದೇಶಕರಾದ ಅಣ್ಣಿ ವಿ.ಸಿ, ದಿನೇಶ್ ಕೆ ನಾಲ್ಕೂರು, ರಮೇಶ್ ಕೆ, ಶೋಭಾ ಗಿರಿಧರ್ ಉಪಸ್ಥಿತರಿದ್ದರು. ಸಂಘದ ಸದಸ್ಯರು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿ.ಟಿ ವೆಂಕಟೇಶ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ನಿರ್ದೇಶಕರಾದ ಲೋಕೇಶ್ ಬಿ.ಎನ್ ಸ್ವಾಗತಿಸಿ, ವೆಂಕಟೇಶ್ ಎಚ್.ಎಲ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.