Breaking News

ಸುಬ್ರಹ್ಮಣ್ಯ-ಐನಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯ-ಐನಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಗ್ರಾ.ಪಂ ರಾಜೀವ್ ಗಾಂಧೀ ಸೇವಾ ಸಭಾಭವನದಲ್ಲಿ ಬುಧವಾರ ನಡೆಯತು.


ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ ವಹಿಸಿದ್ದರು. ಸಂಘವು ವಾರ್ಷಿಕ ೬೩.೭೩ ಕೋ.ರೂ ಮಿಕ್ಕಿದ ವ್ಯವಹಾರ ನಡೆಸಿದ್ದು ೨೪.೪೬ ಲಕ್ಷ ಲಾಭ ಗಳಿಸಿದೆ. ಸದಸ್ಯರಿಗೆ ಶೇ.೧೦% ಡಿವಿಡೆಂಟ್ ವಿತರಣೆಗೆ ನಿರ್ಧರಿಸಲಾಯಿತು.
ರೈತರಿಗೆ ನಬಾರ್ಡ್ ನಿಯಮಗಳಿಗೆ ಅನುಗುಣವಾಗಿ ಶೇ.೩ ದರದ ಬಡ್ಡಿಯಲ್ಲಿ ರೂ ೧೦ ಲಕ್ಷ ಮಿತಿಗೆ ಒಳಪಟ್ಟು ನಿಗದಿತ ಉದ್ದೇಶಗಳಿಗೆ ಸಾಲ ನೀಡಲಾಗುತ್ತಿದೆ. ಈ ದೀರ್ಘಾವಧಿ, ಮಧ್ಯಮಾವಧಿ ಕೃಷಿ ಸಾಲ ಸೌಲಭ್ಯವನ್ನು ಸರಕಾರವೂ ಈ ವರ್ಷವೂ ಮುಂದುವರೆಸಿದ್ದು ರೈತರು ಕೃಷಿ ಅಭಿವೃದ್ಧಿಗೆ ಸಾಲದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ರವೀಂದ್ರಕುಮಾರ್ ರುದ್ರಪಾದ ಸಭೆಯಲ್ಲಿ ಹೇಳಿದರು.
ಈ ಸಂದರ್ಭ ಸಂಘದ ಹಿರಿಯ ಸದಸ್ಯರಾದ ಬೆಳ್ಯಪ್ಪ ಗೌಡ ಎನ್, ಬಾಬು ಬೈರ ಗುಂಡಡ್ಕ ಐನಕಿದು ಇವರುಗಳನ್ನು ಸಮ್ಮಾನಿಸಿ ಗೌರವಿಸಲಾಯಿತು. ಸಂಘದ ಸದಸ್ಯರಿಗೆ ಅದ್ರಷ್ಟ ಚೀಟಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದ್ರಷ್ಟ ಚೀಟಿ ವಿಜೇತರಿಗೆ ಕೃಷಿ ಸಲಕರಣೆಗನ್ನು ಅಧ್ಯಕ್ಷರು ವಿತರಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಹರಿಪ್ರಸಾದ್, ನಿರ್ದೇಶಕರಾದ ಕೆ ಸೋಮಸುಂದರ, ವೆಂಕಟೇಶ್ ಎಚ್ ಎಲ್, ಮೋಹನದಾಸ್ ರೈ, ಸತೀಶ ಕೆ. ಮಾಧವ ಡಿ, ಜಯಪ್ರಕಾಶ ಕೆ ಎಂ, ಭಾರತೀ ದಿನೇಶ್, ದಿವ್ಯ ಕೆ. ಎಚ್ ಉಪಸ್ಥಿತರಿದ್ದರು. ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಕೆ ಎಸ್ ವಾರ್ಷಿಕ ವರದಿ ಮಂಡಿಸಿದರು. ಸತೀಶ್ ಕೂಜುಗೋಡು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.