Breaking News

ಪೆರಾಜೆ: ರಬ್ಬರ್ ಟ್ಯಾಪಿಂಗ್ ವಿಶೇಷ ತರಬೇತಿ

Advt_Headding_Middle
Advt_Headding_Middle

ಪೆರಾಜೆ ರಬ್ಬರ್ ಉತ್ಪಾದಕರ ಸಂಘ ಮತ್ತು ರಬ್ಬರ್ ಮಂಡಳಿ ಇದರ ಸಹಯೋಗದಲ್ಲಿ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ಯ ಅಡಿಯಲ್ಲಿ ರಬ್ಬರ್ ಟ್ಯಾಪಿಂಗ್ ದಾರರಿಗೆ ಮೂರು ದಿನಗಳ ವಿಶೇಷ ತರಬೇತಿ (R P L–Recognition of Prior Learning )ಕಾರ್ಯಕ್ರಮ ಪೆರಾಜೆಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಪೆರಾಜೆ ರಬ್ಬರು ಉತ್ಪಾದಕರ ಸಂಘ ದ ಅಧ್ಯಕ್ಷರಾದ ತೇಜಪ್ರಸಾದ ಅಮಚೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಪೆರಾಜೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ನಂಜಪ್ಪ ನಿಡ್ಯಮಲೆ ಯವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ದೊಡ್ಡಡ್ಕ ರವರು ಮತ್ತು ರಬ್ಬರ್ ಮಂಡಳಿ ಅಭಿವೃದ್ದಿ ಅಧಿಕಾರಿಯವರಾದ ಟಿ ಎ ತೋಮಸ್ ರವರು ಭಾಗವಹಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪದ್ಮಯ್ಯ ಕುಂಬಳಚೇರಿ ಮತ್ತು ಸಂಘದ ಕಾರ್ಯದರ್ಶಿಯವರಾದ ಪ್ರವೀಣ ಬಂಗಾರಕೋಡಿಯವರು ಉಪಸ್ಥಿತರಿದ್ದರು.

ರಬ್ಬರ್ ಮಂಡಳಿಯ ಕ್ಷೇತ್ರಾಬಿವೃದ್ದಿ ಅಧಿಕಾರಿಗಳಾದ ಜಯಕುಮಾರ್ ರವರು ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಥಮ ದಿನ ಸಂಪೂರ್ಣ ಥಿಯರಿ ಕ್ಲಾಸು, ಎರಡನೆಯ ದಿನ ರಬ್ಬರ್ ತೋಟದಲ್ಲಿ ಪ್ರಾತ್ಯಕ್ಷಿಕ ತರಬೇತಿ ಮತ್ತು ಮೂರನೆಯ ದಿನ ಪರೀಕ್ಷೆ ನಡೆಯಿತು.

 

ತರಬೇತಿಯಲ್ಲಿ ಉತ್ತಮ ಅಂಕ ಗಳಿಸಿದವರಿಗೆ ಕೇಂದ್ರ ಸರಕಾರದ ರಾಷ್ಟ್ರೀಯ ಕೌಶಲ್ಯ ಯೋಜನಾ ಮಂಡಳಿ ಮತ್ತು ರಬ್ಬರ್ ಕೌಶಲ್ಯ ಅಭಿವೃದ್ದಿ ಕೌನ್ಸಿಲ್ ವತಿಯಿಂದ ಸರ್ಟಿಫಿಕೇಟ್ ಮತ್ತು ಸ್ಟ್ಯೆಪೆಂಡರಿ ದೊರೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.