Breaking News

ಕೆ.ವಿ.ಜಿ.ಪಾಲಿಟೆಕ್ನಿಕ್ : ಇಂಜಿನಿಯರ‍್ಸ್ ದಿನಾಚರಣೆ

Advt_Headding_Middle
Advt_Headding_Middle

ಕುರುಂಜಿ ವೆಂಕಟ್ರಮಣಗೌಡ ಪಾಲಿಟೆಕ್ನಿಕ್‌ನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಇಂಜಿನಿಯರ‍್ಸ್ ದಿನಾಚರಣೆ ಹಾಗೂ ನೂತನ ಎನ್ನೆಸ್ಸೆಸ್ ಸ್ವಯಂ ಸೇವಕರಿಗೆ ಸ್ವಾಗತ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಬಾಲಕೃಷ್ಣ ಬೊಳ್ಳೂರು ಮಾತನಾಡಿ ಇಂಜಿನಿಯರ್‌ಗಳು ನಿರಂತರ ಸಂಶೋಧನೆಗಳಲ್ಲಿ ತೊಡಗಿಕೊಂಡು ಪ್ರಕೃತಿಗೆ ಮಾರಕವಾಗದಂತೆ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಬೇಕು ಎಂದು ಹೇಳಿದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಮಾತನಾಡಿ ಯುವಜನರು ಸರ್ ಎಂ. ವಿಶ್ವೇಶ್ವರಯ್ಯನವರ ತತ್ವಾದರ್ಶಗಳನ್ನು ಪಾಲಿಸಿದರೆ ಮಾತ್ರ ಅವರ ಜನ್ಮದಿನಾಚರಣೆಯ ಅಂಗವಾಗಿ ಆಚರಿಸುವ ಇಂಜಿನಿಯರ‍್ಸ್ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.

ಘಟಕ ಎರಡರ ಕಾರ್ಯಕ್ರಮಾಧಿಕಾರಿ ಸುನಿಲ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಇಂಜಿನಿಯರ‍್ಸ್ ದಿನಾಚರಣೆಯ ಮಹತ್ವ ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರ ಜೀವನ ಹಾಗೂ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಘಟಕ ನಾಯಕರಾದ ಯಶ್ವಿತ್, ಜೀವನ್‌ರಾಜ್, ಅನ್ವಿತಾ ಮುಡೂರು ಹಾಗೂ ಭವ್ಯಶ್ರೀ ಉಪಸ್ಥಿತರಿದ್ದರು. ಎನೆಸ್ಸೆಸ್ ಸ್ವಯಂ ಸೇವಕರಾದ ಕಿಶೋರ್ ಎ.ಪಿ ಸ್ವಾಗತಿಸಿ ಕು. ಅನ್ವಿತಾ ಮುಡೂರು ವಂದಿಸಿದರು. ಹಕೀಂ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ನೂತನ ಎನ್ನೆಸ್ಸೆಸ್ ಸ್ವಯಂ ಸೇವಕರಿಗೆ ಸ್ವಾಗತ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.