ಐವರ್ನಾಡು : ಪೌಷ್ಟಿಕ ಆಹಾರ ಸಪ್ತಾಹ-ಗೊಂಚಲಿನ ಮಹಾಸಭೆ

Advt_Headding_Middle
Advt_Headding_Middle

ಪಂಚಮುಖಿ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಹಾಗೂ ಇನ್ನರ್‌ವೀಲ್ ಕ್ಲಬ್ ಸುಳ್ಯ ಇದರ ಸಹಯೋಗದೊಂದಿಗೆ ಐವರ್ನಾಡು ಗ್ರಾಮ ಮಟ್ಟದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಗೊಂಚಲಿನ ಮಹಾಸಭೆಯು ಸೆ.18 ರಂದು ಐವರ್ನಾಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಉದ್ಘಾಟಿಸಿ ಶುಭಹಾರೈಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ,ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ,ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಮಮತ ಮಡ್ತಿಲ,ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಜಾತ ಪವಿತ್ರಮಜಲು,ಶ್ರೀಮತಿ ರಾಜೀವಿ ಲಾವಂತಡ್ಕ,ಶ್ರೀಮತಿ ರೇಖಾ ಉದ್ದಂಪಾಡಿ,ನವೀನ್ ಕುಮಾರ್ ಸಾರಕರೆ,ಬಾಲಕೃಷ್ಣ ಕೀಲಾಡಿ,ಭವಾನಿ ಬಾಂಜಿಕೋಡಿ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ವೇದಿಕೆಯಲ್ಲಿದ್ದರು.
ಮಹಿಳೆಯರ ಆರೋಗ್ಯ ಆಹಾರ ಹಾಗೂ ಗರ್ಭಿಣಿ, ಬಾಣಂತಿ ಸ್ತ್ರೀಯರ ಆರೋಗ್ಯದ ಬಗ್ಗೆ ಕೆವಿಜಿ ಮೆಡಿಕಲ್ ಕಾಲೇಜಿನ ವೈದ್ಯರಾದ ಡಾ,ಗೀತಾ ದೊಪ್ಪರವರು ಮಾಹಿತಿ ನೀಡಿದರು.
ಶಿಶು ಅಭಿವೃದ್ದಿ ಯೋಜನಾ ಇಲಾಖೆಯ ಮೇಲ್ವಿಚಾರಕಿ ಶ್ರೀಮತಿ ಶೈಲಜಾರವರು ಮಹಿಳೆಯರಿಗೆ ಪ್ರಶ್ನೋತ್ತರ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಹಿಳೆಯರು ಸ್ಥಳಿಯವಾಗಿ ಸಿಗುವ ಸೊಪ್ಪು,ತರಕಾರಿ,ಹಣ್ಣು ಹಂಪಲುಗಳಿಂದ ತಯಾರಿಸಿದ ಆಹಾರವನ್ನು ಪ್ರದರ್ಶಿಸಿದರು
ಆಹಾರ ತಯಾರಿಸಿದ ಮಹಿಳೆಯರಿಗೆ ಪ್ರಶ್ನೋತ್ತರದಲ್ಲಿ ಉತ್ತರಿಸಿದವರಿಗೆ ಬಹುಮಾನವನ್ನು ಗೊಂಚಲು ಹಾಗೂ ಇನ್ನರ್ ವೀಲ್ ವತಿಯಿಂದ ನೀಡಲಾಯಿತು.
ಶ್ರೀಮತಿ ಸುಜಾತ ಪವಿತ್ರಮಜಲು ಸ್ವಾಗತಿಸಿ,ಶ್ರೀಮತಿ ಬಾಂಜಿಕೋಡಿ ಅಂಗನವಾಡಿ ಕಾರ್ಯಕರ್ತೆ ಜಯಶೀಲ ವಂದಿಸಿದರು, ಪರ್ಲಿಕಜೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ರೋಹಿತಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.