Breaking News

ಜೇಸೀ ಸಪ್ತಾಹ – 2018 ಸಪ್ತಸ್ವರ ಸಮಾರೋಪ – ಪಯಸ್ವಿನಿಶ್ರೀ, ಕಲಾಶ್ರೀ, ಮೌನಸಾಧಕ ಪ್ರಶಸ್ತಿ ಪ್ರಧಾನ ಪ್ರತಿಭಾ ಪುರಸ್ಕಾರ-ಜೇಸೀ ಕುಟುಂಬ ಸಮ್ಮಿಲನ

Advt_Headding_Middle
Advt_Headding_Middle

ಜೇಸೀಐ ಸುಳ್ಯ ಪಯಸ್ವಿನಿ ವಲಯ ೧೫ ಪ್ರಾಂತ್ಯ ಇದರ ವತಿಯಿಂದ ಜೇಸಿ ಸಪ್ತಾಹ-೨೦೧೮ ಸಪ್ತಸ್ವರ ಕಾರ್ಯಕ್ರಮದ ಸಮಾರೋಪ ಸಮಾರಂಭ,ಪಯಸ್ವಿನಿಶ್ರೀ, ಕಲಾಶ್ರೀ, ಮೌನಸಾಧಕ ಪ್ರಶಸ್ತಿ ಪ್ರಧಾನ, ಪ್ರತಿಭಾ ಪುರಸ್ಕಾರ-ಜೇಸೀ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸುಳ್ಯದ ಎ.ಪಿ.ಎಂ.ಸಿ ಸಭಾಭವನದಲ್ಲಿ ಸೆ.೧೬ರಂದು ನಡೆಯಿತು.


ಉದ್ಘಾಟನಾ ಸಮಾರಂಭ
ಜೇಸಿಐ ಸುಳ್ಯ ಪಯಸ್ವಿನಿಯ ಜೇಸಿ ಸಪ್ತಾಹ-೨೦೧೮ ಸಪ್ತಸ್ವರ ಇದರ ಉದ್ಘಾಟನಾ ಸಮಾರಂಭವು ಸೆ.೯ರಂದು ಸುಳ್ಯದ ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ವಸತಿ ಶಾಲೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಪಯಸ್ವಿನಿ ಜೇಸಿ ಅಧ್ಯಕ್ಷ ಚಂದ್ರಶೇಖರ ಕನಕಮಜಲು ವಹಿಸಿದ್ದರು. ಭಾರತೀಯ ವೈದ್ಯಕೀಯ ಸಂಘ ಸುಳ್ಯ ಇದರ ಅಧ್ಯಕ್ಷೆ ಡಾ. ಸಾಯಿಗೀತಾ ಜ್ಞಾನೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಹಾಸ್ಟೆಲ್‌ನ ವಿಸ್ತರಣಾಧಿಕಾರಿ ಹಿಮಕರ ಎಂ. ಉಪಸ್ಥಿತರಿದ್ದರು. ಸಪ್ತಾಹದ ನಿರ್ದೇಶಕಿ ಶ್ರುತಿ ತೀರ್ಥವರ್ಣ ಸಪ್ತಾಹದ ಮಾಹಿತಿ ನೀಡಿದರು.


ಸೆ.೯ರಿಂದ ಸೆ.೧೫ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಿದವು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ಪಯಸ್ವಿನಿ ಜೇಸಿ ಅಧ್ಯಕ್ಷ ಚಂದ್ರಶೇಖರ ಕನಕಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜೇಸಿಐ ಸುಳ್ಯ ಪಯಸ್ವಿನಿ ಘಟಕದ ಪೂರ್ವಾಧ್ಯಕ್ಷ ಎಸ್.ಎನ್, ಮನ್ಮಥ, ವಲಯ ಉಪಾಧ್ಯಕ್ಷ ಮನಮೋಹನ ಬಳ್ಳಡ್ಕ ಉಪಸ್ಥಿತರಿದ್ದರು.


ಪ್ರಶಸ್ತಿ ಪ್ರಧಾನ-ಪ್ರತಿಭಾ ಪುರಸ್ಕಾರ
ಈ ಸಂದರ್ಭದಲ್ಲಿ ಮೈಸೂರು ವಿ.ವಿ.ಯ ಭರತನಾಟ್ಯ ವಿಭಾಗದ ಮುಖ್ಯಸ್ಥ,ಸುಳ್ಯದವರಾಗಿರುವ ಡಾ.ಚೇತನಾ ರಾಧಾಕೃಷ್ಣರವರಿಗೆ ಪಯಸ್ವಿನಿಶ್ರೀ ಪ್ರಶಸ್ತಿ, ಸುಳ್ಯಕ್ಕೆ ಬ್ರೇಕ್ ಡ್ಯಾನ್ಸ್, ರೆಕಾರ್ಡ್ ಡ್ಯಾನ್ಸ್ ಪರಿಚಯಿಸಿದ, ಹಲವಾರು ನಾಟಕಗಳಲ್ಲಿ ಅಭಿನಯಿಸಿ ಇದೀಗ ಶಶಿ ಬ್ರದರ‍್ಸ್ ನೃತ್ಯ ಕೇಂದ್ರದ ಮೂಲಕ ನಾಟ್ಯ ಮತ್ತು ನಾಟಕ ತರಬೇತಿ ನೀಡುತ್ತಿರುವ ಡಿಸ್ಕೋ ಶಶಿ ಗಾಂಧಿನಗರ ಅವರಿಗೆ ಕಲಾಶ್ರೀ ಪ್ರಶಸ್ತಿ, ಯೋಗದ ಮುಖಾಂತರ ಸಾಧನೆ ಮಾಡಿರುವ ಆದಿತ್ಯ ಬೆಳ್ಳಾರೆಯವರಿಗೆ ಮೌನಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಘಟಕದ ಪೂರ್ವಾಧ್ಯಕ್ಷ ದಾಮೋದರ ಕಣಜಾಲು ಪ್ರಶಸ್ತಿ ಪುರಸ್ಕ್ರತರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು. ಚಂದ್ರಕಾಂತ ನಾರ್ಕೋಡು ಮತ್ತು ಮಾಸ್ಟರ್ ಆಗ್ರೋ ಮಾಲಕ ಭಾನುಪ್ರಕಾಶ್ ಅವರು ಕೊಡಲ್ಪಡುವ ಪ್ರತಿಭಾ ಪುರಸ್ಕಾರವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಲಾಯಿತು.


ಜೇಸಿ ವತಿಯಿಂದ ಸೆ.೯ರಂದು ಮೆಟ್ರಿಕ್ ನಂತರದ ಹಿಂದುಳಿದ ವರ್ಗಗಳ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಕೆ.ವಿ.ಜಿ. ದಂತ ಮಹಾವಿದ್ಯಾಲಯ ಸಹಯೋಗದಲ್ಲಿ ಉಚಿತ ದಂತ ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸೆ.೧೦ರಂದು ಮಾನವೀಯ ಸಂಬಂಧ ತರಬೇತಿ ಸಂಪೂರ್ಣ ಪ್ರಶಿಕ್ಷಣದ ರಿಂಗಣ ಕಾರ್ಯಕ್ರಮವು ಮಂಡೆಕೋಲಿನ ಸಹಕಾರಿ ಸದನದಲ್ಲಿ ನಡೆಯಿತು. ಸೆ.೧೨ರಂದು ಮಹಿಳಾ ಸಬಲೀಕರಣದೆಡೆಗೆ ಗಮನ ಎಂಬ ಶೀರ್ಷಿಕೆಯಲ್ಲಿ ಗಿಡ ಕಸಿ ಕಟ್ಟುವ ತರಬೇತಿ ಸುಳ್ಯದ ಶಾರದಾ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕೊಳವೆ ಬಾವಿ ಜಲ ಮರುಪೂರಣ ಮಾಹಿತಿ ಕಾರ್ಯಾಗಾರ ಜೀವಜಲವೆಂಬ ಮಕರಂದ ಎಂಬ ಶೀರ್ಷಿಕೆಯಡಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸೆ.೧೩ರಂದು ಕೊಡಗು ನಿರಾಶ್ರಿತರಿಗೆ ಪರಿಹಾರ ಹಸ್ತಾಂತರ ಹಾಗೂ ಸ್ವಚ್ಛತಾ ಕಾರ್ಯಕ್ರಮ ಸುಭದ್ರ ಭವಿಷ್ಯದತ್ತ ನಮ್ಮ ಪಯಣ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮವು ಮಡಿಕೇರಿಯ ಮದೆನಾಡು ಮದೆಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಸೆ.೧೪ರಂದು ಹಸಿರೇ ಉಸಿರು ಗಿಡ ನೆಡುವ ಕಾರ್ಯಕ್ರಮವು ಹಸಿರು ಉಸಿರಿನ ದರ್ಪಣ ಎಂಬ ಶೀರ್ಷಿಕೆಯಡಿ ದುಗ್ಗಲಡ್ಕ ಸರ್ಕಾರಿ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಯಿತು.


ಸಮಾರೋಪ ಸಮಾರಂಭದ ವೇದಿಕೆಯಲ್ಲಿ ವಲಯ ವ್ಯವಹಾರ ವಿಭಾಗದ ನಿರ್ದೇಶಕ ಪ್ರಶಾಂತ್ ರೈ, ವಲಯ ಆಡಳಿತ ವಿಭಾಗದ ನಿರ್ದೇಶಕ ಅಶೋಕ್ ಚೂಂತಾರು, ವಲಯಾಧಿಕಾರಿ ಹಾಗೂ ಘಟಕದ ನಿಕಟಪೂರ್ವಾಧ್ಯಕ್ಷ ರಾಯನ್ ಉದಯ, ಯುವ ಜೇಸಿ ಅಧ್ಯಕ್ಷೆ ಗಾನ ಉಪಸ್ಥಿತರಿದ್ದರು. ಸಪ್ತಾಹ ನಿರ್ದೇಶಕಿ ಶ್ರುತಿ ತೀರ್ಥವರ್ಣರವರು ಸಪ್ತಾಹದಲ್ಲಿ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳ ವರದಿಯನ್ನು ಸಭೆಗೆ ನೀಡಿದರು. ಘಟಕದ ಕಾರ್ಯದರ್ಶಿ ರಂಜಿತಾ ಕುಕ್ಕೇಟಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.