ಪೆರಾಜೆ : ಹಂಚು ತೆಗೆದು ಒಳನುಗ್ಗಿ ಕಳ್ಳತನಕ್ಕೆ ಯತ್ನ-ಪೋಲೀಸ್ ದೂರು

Advt_Headding_Middle
Advt_Headding_Middle

ಪೆರಾಜೆ ಗ್ರಾಮದ ಕೊಳಂಗಾಯ ಎಂಬಲ್ಲಿ ಉಷಾ ಎಂಬವರ ಮನೆಯ ಹಂಚು ತೆಗೆದು ಒಳಗೆ ನುಗ್ಗಿ ಕಳತನಕ್ಕೆ ಯತ್ನ ನಡೆಸಿದ ಘಟನೆ ವರದಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ನಡೆದಿದ್ದು ಈ ಕಳ್ಳತನವನ್ನು ತನ್ನ ಮನೆಗೆ ಕೆಲಸಕ್ಕೆ ಬರುವ ತರುಣೇಶ್(ಗಣಿ) ಎಂಬಾತನೇ ಈ ಕೃತ್ಯವನ್ನು ಮಾಡಿರುವ ಶಂಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಪೋಲೀಸ್ ದೂರು ನೀಡಿಲಾಗಿದ್ದು ಸಂಪಾಜೆ ಹೊರಠಾಣೆಯಲ್ಲಿ ಪೋಲೀಸ್ ಕೇಸು ದಾಖಲಾಗಿದೆ. ೩ ಬಾಗಿಲಿನ ಚಿಲಕಕ್ಕೆ ಹೊಡೆದು ವಿಫಲವಾದಾಗ ಹಂಚು ತೆಗೆದು ಒಳಗೆ ನುಗ್ಗಿ ಬಟ್ಟೆ ಬರೆಗಳನ್ನು ಚೆಲ್ಲಾ ಪಿಲ್ಲಿ ಮಾಡಿ ಹೋಗಿದ್ದಾರೆ ಹೊರತು ಯಾವುದೇ ವಸ್ತು ಕಳವಾಗಿಲ್ಲ. ಉಷಾರವರು ತನ್ನ ಪತಿಗೆ ಜೌಷಧಿಗೆಂದು ಮಂಗಳೂರಿಗೆ ಹೀಗಿ ಮನೆಗೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.