Breaking News

ಕುಕ್ಕೆ ದೇವಳಕ್ಕೂ ಸಂಪುಟ ನರಸಿಂಹ ಮಠಕ್ಕೂ ಸಂಬಂಧವಿಲ್ಲ – ಕುಕ್ಕೆ ಸುಬ್ರಹ್ಮಣ್ಯ ದೇವಳದಿಂದ ಮತ್ತೆ ಸ್ಪಷ್ಟನೆ

Advt_Headding_Middle
Advt_Headding_Middle

 

ಪವಿತ್ರ ಯಾತ್ರಾ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಪಕ್ಕದಲ್ಲಿರು ವ ಸಂಪುಟ ನರಸಿಂಹ ಮಠಕ್ಕೂ ಯಾವುದೇ ಸಂಬಂಧವಿಲ್ಲ. ಅವೆರಡೂ ಪ್ರತ್ಯಪ್ರತ್ಯೇಕ ಅಸ್ತಿತ್ವ ಹೊಂದಿದ ಸ್ವತಂತ್ರ ಧಾರ್ಮಿಕ ಸಂಸ್ಥೆಗಳಾಗಿದೆ. ಎಂದು ಕುಕ್ಕೆ ದೆವಳದ ವತಿಯಿಂದ ಮತ್ತೊಮ್ಮೆ ಸ್ಪಷ್ಟನೆ ನೀಡಲಾಗಿದೆ. ಈ ಬಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ಲಿಖಿತ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಭಾರತದ ಪರಶುರಾಮ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾದ ಪುರಾಣ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಸಾವಿರಾರು ವರ್ಷಗಳ ಹಿಂದಿನ ಇತಿಹಾಸವುಳ್ಳ ಪ್ರಸಿದ್ಧ ನಾಗಾ ರಾಧಾನೆಯ ಕ್ಷೇತ್ರವಾಗಿರುವುದು ಸರ್ವರಿಗೂ ವೇದ್ಯವಾದ ವಿಚಾರ. ಪುರಾಣ ಕಾಲದಿಂದಲೂ ಕುಷ್ಠ ರೋಗಾದಿ ಚರ್ಮರೋಗಗಳು, ಸಂತಾನ ಭಾಗ್ಯ, ಭೂಮಿ-ಜಲಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರ. ಕುಟುಂಬದ ನಾಗದೋಷ ಪರಿಹಾರ ಇನ್ನಿತರ ಹಲವಾರು ಸಮಸ್ಯೆ ಗಳ ಶಮನೋಪಾಯಕ್ಕಾಗಿ ನಾಡಿನಾ ದ್ಯಂತದ ಭಕ್ತರು ಈ ಕ್ಷೇತ್ರಕ್ಕೆ ಬಂದು ತಮ್ಮ ತಮ್ಮ ಹರಕೆ, ಕಾಣಿಕೆ, ಸೇವೆಗ ಳನ್ನು ಸಲ್ಲಿಸಿ ಇಷ್ಟಾರ್ಥಗಳನ್ನು ಪೂರೈಸಿ ಕೊಳ್ಳುತ್ತಿದ್ದಾರೆ.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ದೇವರ ಬಗ್ಗೆ ಮಾಧ್ಯಮಗಳಲ್ಲಿ ದೇವಳದ ಆಡಳಿತದ ಹೊರತಾಗಿ ಇತರ ಕೆಲವು ಮಂದಿ ಸಾರ್ವಜನಿಕರು ವ್ಯಾಟ್ಸಾಪ್, ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ನೀಡುತ್ತಿರುವ ಅಸ್ಪಷ್ಟವಾದ, ಅಪೂರ್ಣವಾದ, ಆಧಾರ ರಹಿತ ಹೇಳಿಕೆಗಳ ಬಗ್ಗೆ ಯಾರೂ ಕೂಡ ಗೊಂದಲಕ್ಕೀಡಾಗದಂತೆ ವಿನಂತಿ ಸಲಾಗಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಭಕ್ತಾದಿಗಳು ಸಲ್ಲಿಸತಕ್ಕ ಯಾವುದೇ ಕಾಣಿಕೆ, ದೇಣಿಗೆ, ಸೇವಾದಿಗಳ ಬಗ್ಗೆ ನೇರವಾಗಿ ಶ್ರೀ ದೇವಳದ ಕಛೇರಿಯ ಮಾಹಿತಿ ಕೇಂದ್ರ. ಶಿಷ್ಠಾಚಾರ ಶಾಖೆ ಅಥವಾ ಇ-ಮೇಲ್ ಹಾಗೂ ವೆಬ್‌ಸೈಟ್ ಮೂಲಕ ಸ್ಪಷ್ಟ ಮಾಹಿತಿಗಳನ್ನು ಪಡೆದು ಕೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳಬ ಹುದಾಗಿದೆ. ಬದಲಾಗಿ ಯಾವುದೇ ಇನ್ನಿತರ ಮಧ್ಯವರ್ತಿಗಳ ಮೂಲಕ ಮೋಸ ವಂಚನೆಗೊಳಗಾದಲ್ಲಿ ಶ್ರೀ ದೇವಳದ ಆಡಳಿತವು ಈ ಬಗ್ಗೆ ಜವಾಬ್ದಾರ ರಲ್ಲವೆಂಬ ವಿಚಾರವನ್ನು ಸ್ಪಷ್ಟಪಡಿಸ ಲಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವ ಸ್ಥಾನ ಅಥವಾ ಶ್ರೀ ಸುಬ್ರಹ್ಮಣ್ಯ ದೇವರ ಹೆಸರಲ್ಲಿ ಯಾವುದೇ ಮಠ, ಮಂದಿರ ಅಥವಾ ಉಪ ಶಾಖೆಗ ಳಿರುವುದಿಲ್ಲವೆಂಬ ವಿಚಾರವನ್ನು ಸಾರ್ವಜನಿಕ ಭಕ್ತಾದಿಗಳಿಗೆ ಈ ಮೂಲಕ ಸ್ಪಷ್ಟಪಡಿಸುತ್ತಾ ಶ್ರೀ ದೇವರಿಗೆ ಸಲ್ಲಿಸತಕ್ಕ ಹರಕೆಗಳನ್ನು ನೇರವಾಗಿ ಶ್ರೀ ದೇವಳಕ್ಕೆ ಸಲ್ಲಿಸುವಂತೆ ಈ ಮೂಲಕ ತಿಳಿಸಲಾಗಿದೆ.
ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ೧೯೭೮ರ ತೀರ್ಪು ಪ್ರಕಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ- ಈ ಎರಡೂ ಧಾರ್ಮಿಕ ಸಂಸ್ಥೆಗಳು ಒಳಾಂಗಣದಲ್ಲಿ ಪ್ರತ್ಯೇಕವಾಗಿ ವಿಭಾಗಿಸ ಲ್ಪಟ್ಟಿದೆ. ಈ ಎರಡೂ ಧಾರ್ಮಿಕ ಸಂಸ್ಥೆಗಳು ಪ್ರತ್ಯೇಕ ಪ್ರತ್ಯೇಕವಾಗಿ ಅಸ್ಥಿತ್ವವನ್ನು ಹೊಂದಿರುವ ಸ್ವತಂತ್ರ ಧಾರ್ಮಿಕ ಸಂಸ್ಥೆಗಳಾಗಿದ್ದು ಆಡಳಿ ತಾತ್ಮಕವಾಗಲಿ ಅಥವಾ ಧಾರ್ಮಿಕ ಆಚರಣೆಗಳ ಪದ್ಧತಿಗಳಲ್ಲಾಗಲಿ ಯಾವುದೇ ಸಂಬಂಧವಿರಲಾರದು. ಶ್ರೀ ದೇವಳದಲ್ಲಿ ನಡೆಯತಕ್ಕ ಯಾವುದೇ ಪೂಜಾದಿ ಪದ್ಧತಿಗಳು, ಪಂಚಪರ್ವಾದಿ ವಿಶೇಷ ಕಟ್ಟಳೆಗಳು ಹಾಗೂ ಇನ್ನಿತರ ಧಾರ್ಮಿಕ ಆಚರಣೆಗಳು ಮತ್ತು ಭಕ್ತಾದಿಗಳ ಸೇವಾದಿಗಳು ಕ್ಷೇತ್ರದಲ್ಲಿ ಪೂರ್ವದಿಂದ ನಡೆದುಕೊಂಡು ಬಂದಿ ರುವ ಸಂಪ್ರದಾಯ ಹಾಗೂ ಕ್ಷೇತ್ರ ವಿಧಿ ಪ್ರಕಾರ ನಡೆಯುತ್ತದೆ.
ಆದ್ದರಿಂದ ಈ ಎಲ್ಲಾ ವಿಚಾರಗಳ ಬಗ್ಗೆ ತೀರ್ಮಾನಿಸಿ ನಿರ್ಧರಿಸುವ ಅಧಿಕಾರ, ಕರ್ತವ್ಯ ವ್ಯಾಪ್ತಿ, ವ್ಯವ ಸ್ಥಾಪನಾ ಸಮಿತಿ, ದೇವಳದ ಪ್ರಧಾನ ಅರ್ಚಕರು ಧಾರ್ಮಿಕ ದತ್ತಿ ಇಲಾಖಾ ಆಗಮ ಪಂಡಿ ತರದ್ದಾಗಿ ರುತ್ತದೆಯೇ ಹೊರತು ಇನ್ನಿತರ ಯಾವುದೇ ಜ್ಯೋತಿಷಿಗಳು ಅಥವಾ ಆಗಮಿಕರ ಸಲಹೆ ಸೂಚನೆಗಳನ್ನು ಪಡೆದು ಅನುಷ್ಠಾನಕ್ಕೆ ತರಲು ಶ್ರೀ ದೇವಳದಲ್ಲಿ ಅವಕಾಶವಿರುವುದಿಲ್ಲ. ಆದ್ದರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಗೌರವಗಳನ್ನುಂಟು ಮಾಡುವ ಸತ್ಯಕ್ಕೆ ದೂರವಾದ ಹಾಗೂ ಆಧಾರ ರಹಿತ ಹೇಳಿಕೆಗಳನ್ನು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗು ವುದೆಂಬ ವಿಚಾರವನ್ನು ಸಹಾ ಈ ಮೂಲಕ ಆಡಳಿತ ಕಡೆಯಿಂದ ತಿಳಿಸಬಯಸು ತ್ತೇವೆ ಎಂದು ಆವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.