Breaking News

ತುಳು ಸಾಹಿತ್ಯ ಸಮ್ಮೇಳನದ ವಿಶೇಷ ಸಭೆ

Advt_Headding_Middle
Advt_Headding_Middle

ತುಳು ಸಾಹಿತ್ಯ ಅಕಾಡಮಿ ಶ್ರೀ ಶಾರದಾಂಬಾ ಸೇವಾ ಸಮಿತಿ, ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಮತ್ತು ತುಡರ್ ತುಳು ಕೂಟ ಸುಳ್ಯ ಇದರ ಆಶ್ರಯದಲ್ಲಿ ಒ. ೧೬ರಂದು ಸುಳ್ಯದ ಶಾರದಾಂಬಾ ವೇದಿಕೆಯಲ್ಲಿ ನಡೆಯಲಿರುವ ಪ್ರಥಮ ತುಳು ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ವಿಶೇಷ ಸಭೆಯು ನ.ಪಂ. ಸಬಾಭವನದಲ್ಲಿ ಸೆ.೨೬ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಕೆ. ಗೋಕುಲ್ ದಾಸ್ ವಹಿಸಿದ್ದರು. ಸಮ್ಮೇಳನದ ಪೋಷಕಾಧ್ಯಕ್ಷ ಕೆ. ಸೀತಾರಾಮ ರೈ ಸವಣೂರು, ಗೌರವಾಧ್ಯಕ್ಷ ಡಾ. ಹರಪ್ರಸಾದ್ ತುದಿಯಡ್ಕ, ಸಾಹಿತಿ ಡಾ. ಪ್ರಭಾಕರ ಶಿಶಿಲ, ನ.ಪಂ. ಸದಸ್ಯ ಎನ್.ಎ. ರಾಮಚಂದ್ರ, ಸಮ್ಮೇಳನದ ಕೋಶಾಧ್ಯಕ್ಷ ಜೆ.ಕೆ. ರೈ, ಅರ್ಥಿಕ ಸಮಿತಿ ಅಧ್ಯಕ್ಷ ಕೆ.ಟಿ. ವಿಶ್ವನಾಥ್, ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ರಾಜ್ ಪಂಡಿತ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಜೆ. ಶಶಿಧರ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಮ್ಮೇಳನದ ರೂಪುರೇಷೆಗಳ ಬಗ್ಗೆ ಮಾತನಾಡಿದರು.  ಕಾರ್ಯಕ್ರಮ ಸಂಯೋಜನ ಸಮಿತಿ ಅಧ್ಯಕ್ಷ ದುರ್ಗಾಕುಮಾರ್ ನಾಯರ್ ಕೆರೆ ಮಾತನಾಡಿದರು. ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವ ಬಗ್ಗೆ ಚರ್ಚಿಸಲಾಯಿತು. ಜಯರಾಮ್ ಶೆಟ್ಟಿ ಕೆ.ಎನ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿನುತಾ ಪಾತಿಕಲ್ಲು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.